ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರಿಯೋ ತಪ್ಪೋ ಮೈತ್ರಿ ಆಗಿದೆ, ವಿಚ್ಛೇದನ ಆಗದು: ಬಸವರಾಜ ರಾಯರಡ್ಡಿ

|
Google Oneindia Kannada News

ಹುಬ್ಬಳ್ಳಿ, ಜುಲೈ 2: ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಮೈತ್ರಿ ಆಗಬಾರದಿತ್ತು ಎಂದು ಮಾಜಿ ಸಚಿವ, ಕಾಂಗ್ರೆಸ್‌ ಮುಖಂಡ ಬಸವರಾಜ ರಾಯರಡ್ಡಿ ಅಭಿಪ್ರಾಯಪಟ್ಟರು.

ಮೋದಿ, ಅಮಿತ್ ಶಾ ಪರ ಮಾತಾಡಿದ ಸಚಿವ ಜಿ.ಟಿ. ದೇವೇಗೌಡ ಮೋದಿ, ಅಮಿತ್ ಶಾ ಪರ ಮಾತಾಡಿದ ಸಚಿವ ಜಿ.ಟಿ. ದೇವೇಗೌಡ

ಹುಬ್ಬಳ್ಳಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಮೈತ್ರಿ ಆಗಬಾರದಿತ್ತು. ಸರಿಯೋ ತಪ್ಪೋ ಮೈತ್ರಿ ಆಗಿದೆ. ಈಗ ಏಕಾಏಕಿ ವಿಚ್ಛೇದನ ಸಾಧ್ಯವಿಲ್ಲ. ಮೈತ್ರಿ ಮುರಿಯಲು ಸರಿಯಾದ ಕಾರಣಗಳು ಬೇಕು. ನನ್ನ ಪ್ರಕಾರ ಮೈತ್ರಿ ಆಗಬಾರದಿತ್ತು ಎಂದು ಹೇಳಿದರು.

ಎಲ್ಲರ ಆಟ ನನಗೆ ಗೊತ್ತಿದೆ: ಸಚಿವ ಡಿಕೆ ಶಿವಕುಮಾರ್ಎಲ್ಲರ ಆಟ ನನಗೆ ಗೊತ್ತಿದೆ: ಸಚಿವ ಡಿಕೆ ಶಿವಕುಮಾರ್

ಇದೇ ಸಂದರ್ಭದಲ್ಲಿ ಅವರು, ಒಂದು ವೇಳೆ ಬಿಜೆಪಿ ರಾಜ್ಯದಲ್ಲಿ ಸರ್ಕಾರ ರಚಿಸಿದರೂ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವುದಿಲ್ಲ ಎಂದು ಹೇಳಿದರು. ಯಡಿಯೂರಪ್ಪ ಅವರ ಮೇಲೆ ಅಪರಾಧ ಪ್ರಕರಣಗಳಿರುವುದರಿಂದ ಅವರಿಗೆ ಮತ್ತೆ ಸಿಎಂ ಗಾದಿಗೆ ಏರುವ ಅವಕಾಶ ನೀಡುವುದಿಲ್ಲ ಎಂದು ಅಭಿಪ್ರಾಯಪಟ್ಟರು.

bjp will not make yeddyurappa cm again congress basavaraj rayareddy

ರಮೇಶ್ ಜಾರಕಿಹೊಳಿ ಹೆಗಲ ಮೇಲೆ ಬಿಜೆಪಿ ಬಂದೂಕು, ಮೈತ್ರಿಗೆ ಗುರಿರಮೇಶ್ ಜಾರಕಿಹೊಳಿ ಹೆಗಲ ಮೇಲೆ ಬಿಜೆಪಿ ಬಂದೂಕು, ಮೈತ್ರಿಗೆ ಗುರಿ

'ನನಗೆ ದೆಹಲಿ ಮಟ್ಟದ ಬಿಜೆಪಿ ನಾಯಕರು ನೀಡಿರುವ ಮಾಹಿತಿ ಪ್ರಕಾರ, ಬಿಜೆಪಿ ಯಡಿಯೂರಪ್ಪ ಅವರನ್ನು ಮತ್ತೆ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸುವುದಿಲ್ಲ. ಯಡಿಯೂರಪ್ಪ ಅವರ ಮೇಲೆ 12ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಿವೆ. ಅವರು ಜಾಮೀನಿನ ಮೇಲೆ ಹೊರಗಿದ್ದಾರೆ. ಹೀಗಾಗಿ ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡುವುದಿಲ್ಲ ಎಂದು ಹೇಳಿದರು.

English summary
Former Minister and Congress leader Basavaraj Rayareddy in Hubballi said that, BJP will not allow BS Yeddyurappa to become Chief Minister again.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X