ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಇಲ್ಲ; ಪ್ರಹ್ಲಾದ್ ಜೋಶಿ

|
Google Oneindia Kannada News

ಹುಬ್ಬಳ್ಳಿ, ಡಿಸೆಂಬರ್ 28; "ಮುಖ್ಯಮಂತ್ರಿಗಳ ಬದಲಾವಣೆ ಬಗ್ಗೆ ಹತ್ತು ಸಲ ಈಗಾಗಲೇ ಹೇಳಿದ್ದೇವೆ. ಸಂಪುಟ ವಿಸ್ತರಣೆ ಬಗ್ಗೆಯೂ ಕಾರ್ಯಕಾರಣಿ ಸಭೆಯಲ್ಲಿ ಚರ್ಚೆ ನಡೆದಿಲ್ಲ" ಎಂದು ಕೇಂದ್ರ ಸಚಿವ, ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಹೇಳಿದರು.

11 ವರ್ಷಗಳ ಬಳಿಕ ಹುಬ್ಬಳ್ಳಿ ನಗರದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಣಿ ಸಭೆ ನಡೆಯುತ್ತಿದೆ. ಎರಡು ದಿನಗಳ ಕಾರ್ಯಕಾರಣಿ ಸಭೆಗೆ ಮಂಗಳವಾರ ಚಾಲನೆ ನೀಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸೇರಿದಂತೆ ಹಲವಾರು ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ.

ಜನವರಿ 8, 9ರಂದು ಬೆಂಗಳೂರಿಗೆ ಅಮಿತ್ ಶಾ ಭೇಟಿಜನವರಿ 8, 9ರಂದು ಬೆಂಗಳೂರಿಗೆ ಅಮಿತ್ ಶಾ ಭೇಟಿ

ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಪ್ರಹ್ಲಾದ್ ಜೋಶಿ, "ಉತ್ಸಾಹ ಭರಿತವಾಗಿ, ಉಲ್ಲಾಸ ಭರಿತವಾದ ವಾತಾವರಣದಲ್ಲಿ ಕಾರ್ಯಕಾರಿಣಿ ಸಭೆ ನಡೆದಿದೆ. ನಮ್ಮ ಮುಖ್ಯಮಂತ್ರಿಗಳು, ರಾಜ್ಯ ಉಸ್ತುವಾರಿ ಅರುಣ್‌ಸಿಂಗ್, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಸಭೆ ನಡೆದಿದೆ" ಎಂದರು.

ಬಸವರಾಜ ಬೊಮ್ಮಾಯಿ ಬೆಂಬಲಕ್ಕೆ ನಿಂತ ಬಿಜೆಪಿ ಹೈಕಮಾಂಡ್: ಅರುಣ್ ಸಿಂಗ್ ಹೇಳಿದ್ದೇನು?ಬಸವರಾಜ ಬೊಮ್ಮಾಯಿ ಬೆಂಬಲಕ್ಕೆ ನಿಂತ ಬಿಜೆಪಿ ಹೈಕಮಾಂಡ್: ಅರುಣ್ ಸಿಂಗ್ ಹೇಳಿದ್ದೇನು?

BJP Executive Committee Meeting

"ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪ್ರಮುಖ ವಿಷಯಗಳ ಬಗ್ಗೆ ಅಂಕಿ-ಅಂಶಗಳ ಬಗ್ಗೆ ಸಭೆಯಲ್ಲಿ ಚರ್ಚೆ ಆಗಿದೆ. ನಮ್ಮ ಸರ್ಕಾರ ಒಳ್ಳೆಯ ಆಡಳಿತ ನೀಡುತ್ತಿದೆ ಹಾಗೂ ಪಕ್ಷದ ಸಂಘಟನೆ ಕೆಲಸ ಕೂಡ ಚುರುಕಾಗಿ ನಡೆಯುತ್ತಿದೆ. ಸೇವೆ ಮತ್ತು ಸಂಘಟನೆ ಒಟ್ಟಿಗೆ ನಡೆಯಬೇಕು. ಆರೋಪ ಪತ್ಯಾರೋಪದ ಮೇಲೆ ನಡೆಯಬಾರದು" ಎಂದು ಹೇಳಿದರು.

ವಿಡಿಯೋ; ಮತಾಂತರ ಕಾಯ್ದೆ, ಬಿಜೆಪಿ ವಿರುದ್ಧ ಎಚ್. ವಿಶ್ವನಾಥ್ ಅಸಮಾಧಾನವಿಡಿಯೋ; ಮತಾಂತರ ಕಾಯ್ದೆ, ಬಿಜೆಪಿ ವಿರುದ್ಧ ಎಚ್. ವಿಶ್ವನಾಥ್ ಅಸಮಾಧಾನ

ಜಾರಕಿಹೊಳಿ ಗೈರು; ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕಾರ್ಯಕಾರಣಿ ಸಭೆಗೆ ಗೈರಾಗಿದ್ದಾರೆ. ದುಬೈ ಪ್ರವಾಸದಲ್ಲಿರುವ ಕಾರಣ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಹ ಸಭೆಗೆ ಹಾಜರಾಗಿಲ್ಲ.

ಈ ಕುರಿತು ಮಾತನಾಡಿದ ಪ್ರಹ್ಲಾದ್ ಜೋಶಿ, "ಕೋವಿಡ್ ಹಿನ್ನಲೆಯಲ್ಲಿ ಕಡಿಮೆ ಸದಸ್ಯರ ಹಾಜರಾತಿಯೊಂದಿಗೆ ಸಭೆ ನಡೆದಿದೆ. ಯಡಿಯೂರಪ್ಪ ವಿದೇಶದಲ್ಲಿದ್ದಾರೆ. ರಾಜ್ಯ ಕಾರ್ಯಕಾರಿಣಿಯಲ್ಲಿ ಎಲ್ಲಾ ಸಚಿವರು, ಶಾಸಕರು ಇರಲ್ಲ. ಈ ಸಭೆಯ ದಿನಾಂಕ ಮೊದಲೇ ನಿಗದಿಯಾಗಿತ್ತು" ಎಂದು ಸ್ಪಷ್ಟಪಡಿಸಿದರು.

"ಸಭೆಯಲ್ಲಿ ಸಂಪುಟ ವಿಸ್ತರಣೆಯ ಬಗ್ಗೆ ಚರ್ಚೆ ಆಗಿಲ್ಲ. ರಾಷ್ಟ್ರೀಯ ನಾಯಕರ ಜತೆ ಚರ್ಚೆ ಮಾಡಿ ಆ ಬಗ್ಗೆ ಮುಖ್ಯಮಂತ್ರಿಗಳು ನಿರ್ಧಾರ ಮಾಡಲಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಹತ್ತು ಭಾರಿ ಈಗಾಗಲೇ ಹೇಳಿದ್ದೇವೆ. 2023ರ ಚುನಾವಣೆಯನ್ನು ಸಹ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆಸಲಾಗುವುದು" ಎಂದರು.

ಅರುಣ್ ಸಿಂಗ್ ಖಡಕ್ ಸೂಚನೆ; ಮುಖ್ಯಮಂತ್ರಿ ಬದಲಾವಣೆ ಬಗ್ಗೆ ರಾಜ್ಯದ ಹಲವು ನಾಯಕರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಪಾಲ್ಗೊಂಡಿರುವ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಯಾರೂ ಸಹ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತನಾಡಬಾರದು. ಹೈಕಮಾಂಡ್ ಇದನ್ನು ಸಹಿಸುವುದಿಲ್ಲ. ಪಕ್ಷದ ಸೂಚನೆಯನ್ನು ಎಲ್ಲರೂ ಪಾಲಿಸಬೇಕು ಎಂದು ಅರುಣ್ ಸಿಂಗ್ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಹಲವಾರು ಜನರು ಗೈರು; ಮಂಗಳವಾರ ರಾಜ್ಯ ಕಾರ್ಯಕಾರಣಿಗೆ ಚಾಲನೆ ಸಿಕ್ಕಿದೆ. ಮೊದಲ ದಿನ 300 ಜನರು ಕಾರ್ಯಕಾರಣಿಯಲ್ಲಿ ಪಾಲ್ಗೊಳ್ಳಬೇಕು ಎಂದು ನಿಗದಿಯಾಗಿತ್ತು. ಆದರೆ 281 ಜನರು ಮಾತ್ರ ಹಾಜರಾಗಿದ್ದರು. 19 ಮಂದಿ ಅನುಮತಿ ಪಡೆದು ಗೈರಾಗಿದ್ದಾರೆ.

Recommended Video

Mohammed Shami ಬೌಲಿಂಗ್ ದಾಳಿಗೆ ಸೌತ್ ಆಫ್ರಿಕಾ ತತ್ತರ: ಶಮಿ ಈಗ ನಂಬರ್ 1 | Oneindia Kannada

ಸಭೆಯ ಬಳಿಕ ಮಾತನಾಡಿದ ರಾಜ್ಯ ಬಿಜೆಪಿ ವಕ್ತಾರ ಪಿ. ರಾಜೀವ್, "ವಿಧಾನ ಪರಿಷತ್ ಚುನಾವಣೆಯಲ್ಲಿ ಬೆಳಗಾವಿಯಲ್ಲಿ ಪಕ್ಷದ ಅಭ್ಯರ್ಥಿ ಸೋತಿರುವ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ನಿಟ್ಟಿನಲ್ಲಿ ಸಮಿತಿ ಸಹ ರಚನೆ ಮಾಡಲಾಗಿದೆ. ಪಕ್ಷದ ಶಿಸ್ತು ಉಲ್ಲಂಘನೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ" ಎಂದರು.

English summary
Union minister Prahlad Joshi said that no discussion on cabinet expansion in Karnataka BJP executive committee meeting at Hubballi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X