ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕದ ಬಗ್ಗೆ ವೇಣುಗೋಪಾಲ್‌ಗೆ ಏನು ಗೊತ್ತಿದೆ?: ಬಿಎಸ್‌ವೈ ಗುಡುಗು

|
Google Oneindia Kannada News

Recommended Video

ನಮ್ಮ ರಾಜ್ಯದ ಬಗ್ಗೆ ಅವರಿಗೇನು ಗೊತ್ತು..? | Oneindia Kannada

ಹುಬ್ಬಳ್ಳಿ, ಮೇ 14: ಲೋಕಸಭೆ ಚುನಾವಣೆಯ ಬಳಿಕ ಬಿಜೆಪಿಯ ಕೆಲವು ಶಾಸಕರು ತಾವಾಗಿಯೇ ಬಂದು ಕಾಂಗ್ರೆಸ್ ಸೇರಿಕೊಳ್ಳುತ್ತಾರೆ ಎಂಬ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರ ಹೇಳಿಕೆಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಕಿಡಿಕಾರಿದರು.

ವೇಣುಗೋಪಾಲ್ ಅವರಿಗೆ ಕರ್ನಾಟಕದ ಆಂತರಿಕ ವಿಚಾರದ ಕುರಿತು ಏನೂ ತಿಳಿದಿಲ್ಲ. ಅವರು ರಾಜ್ಯದ ಯಾವುದೇ ಭಾಗಕ್ಕೆ ಹೋಗಿ ಬಂದವರಲ್ಲ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಎಷ್ಟು ಸ್ಥಾನ ಸಿಗುತ್ತದೆ ಎಂಬ ಅಂದಾಜು ಕೂಡ ಅವರಿಗಿಲ್ಲ ಎಂದು ಯಡಿಯೂರಪ್ಪ ವ್ಯಂಗ್ಯವಾಡಿದರು.

ಮೇ 23ರ ನಂತರ ಮೈತ್ರಿ ಸರ್ಕಾರ ಬೀಳುತ್ತಾ? ಕೆಸಿ ವೇಣುಗೋಪಾಲ್ ಏನಂತಾರೆ?ಮೇ 23ರ ನಂತರ ಮೈತ್ರಿ ಸರ್ಕಾರ ಬೀಳುತ್ತಾ? ಕೆಸಿ ವೇಣುಗೋಪಾಲ್ ಏನಂತಾರೆ?

ಬಿಜೆಪಿಯಿಂದ ಯಾವ ಶಾಸಕರೂ ಕಾಂಗ್ರೆಸ್ ಅಥವಾ ಜೆಡಿಎಸ್‌ಗೆ ಹೋಗುತ್ತಿಲ್ಲ. ಅವರು ಯಾಕೆ ಹೋಗಬೇಕು. ಅತೃಪ್ತಿ ಇರುವುದು ಕಾಂಗ್ರೆಸ್ ಶಾಸಕರಲ್ಲಿ. ಕುಮಾರಸ್ವಾಮಿ ಅವರ ಆಡಳಿತದ ವಿರುದ್ಧ ಸುಮಾರು 20 ಶಾಸಕರು ಅಸಮಾಧಾನ ಹೊಂದಿದ್ದಾರೆ. ಚುನಾವಣೆ ಬಳಿಕ ಅವರು ಪಕ್ಷದಿಂದ ಹೊರಬರುತ್ತಾರೆ ಎಂದು ಭವಿಷ್ಯ ನುಡಿದರು.

ಇದಕ್ಕೆ ಮೊದಲು ಚಿಂಚೋಳಿಯಲ್ಲಿ ಚುನಾವಣಾ ಪ್ರಚಾರ ನಡೆಸಿದ್ದ ಬಿಎಸ್ ಯಡಿಯೂರಪ್ಪ, ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ನಾಯರಕು ಸತತವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರ ಹೇಳಿಕೆಗಳನ್ನು ಗಮನಿಸಿದರೆ ಸಮ್ಮಿಶ್ರ ಸರ್ಕಾರ ಹೆಚ್ಚುಕಾಲ ಉಳಿಯುವುದು ಅನುಮಾನ ಎನಿಸುತ್ತಿದೆ. ಸರ್ಕಾರವನ್ನು ನಾವು ಬೀಳಿಸುವುದು ಬೇಡ. ಅವರೇ ಕಚ್ಚಾಡಿಕೊಂಡು ಬೀಳಿಸುತ್ತಾರೆ ಎಂದು ಹೇಳಿದ್ದರು.

ಬಿಜೆಪಿ ಶಾಸಕರಿಗೇನು ತಲೆ ಕೆಟ್ಟಿದೆಯೇ?

ಬಿಜೆಪಿ ಶಾಸಕರಿಗೇನು ತಲೆ ಕೆಟ್ಟಿದೆಯೇ?

'ಕಾಂಗ್ರೆಸ್‌ಗೆ ಹೋಗಲು ಬಿಜೆಪಿ ಶಾಸಕರಿಗೇನು ತಲೆ ಕೆಟ್ಟಿದೆಯೇ?' ಎಂದು ಕೋಪದಿಂದ ಪ್ರಶ್ನಿಸಿದರು. 'ಬಿಜೆಪಿಯ ಒಬ್ಬನೇ ಒಬ್ಬ ಶಾಸಕ ಕೂಡ ಯಾವುದೇ ಪಕ್ಷ ಸೇರಿಕೊಳ್ಳುವುದಿಲ್ಲ. ಕುಮಾರಸ್ವಾಮಿ ಅವರ ಕುರಿತು ಅಸಮಾಧಾನ ಹೊಂದಿರುವ ಕಾಂಗ್ರೆಸ್‌ನ 20ಕ್ಕೂ ಹೆಚ್ಚು ಶಾಸಕರು ಮೇ 23ರ ಬಳಿಕ ಪಕ್ಷದಲ್ಲಿ ಮುಂದುವರಿಯುವುದಿಲ್ಲ ಎಂದು ಹೇಳಿದರು.

ವೇಣುಗೋಪಾಲ್‌ಗೆ ಏನು ಗೊತ್ತಿದೆ?

ವೇಣುಗೋಪಾಲ್‌ಗೆ ಏನು ಗೊತ್ತಿದೆ?

ಕೆ.ಸಿ ವೇಣುಗೋಪಾಲ್ ಅವರಿಗೆ ಕರ್ನಾಟಕದ ಬಗ್ಗೆ ಏನು ಗೊತ್ತಿದೆ? ಕರ್ನಾಟಕದ ಯಾವ ಮೂಲೆಗೆ ಅವರು ಹೋಗಿ ಬಂದಿದ್ದಾರೆ? ಹೋಗಲಿ ಲೋಕಸಭೆ ಚುನಾವಣೆಯಲ್ಲಿ ಅವರ ಪಕ್ಷ ಎಷ್ಟು ಸೀಟುಗಳನ್ನು ಗೆಲ್ಲುತ್ತದೆ ಎಂದು ಗೊತ್ತಿದೆಯೇ? ತಾಕತ್ತಿದ್ದರೆ ಹೇಳಲಿ ಎಂದು ಸವಾಲು ಹಾಕಿದರು.

ಜೆಡಿಎಸ್ ನಾಯಕರ ಹೇಳಿಕೆ ಗಮನಿಸಿದರೆ ಸರ್ಕಾರ ಶೀಘ್ರ ಪತನ: ಬಿಎಸ್ವೈಜೆಡಿಎಸ್ ನಾಯಕರ ಹೇಳಿಕೆ ಗಮನಿಸಿದರೆ ಸರ್ಕಾರ ಶೀಘ್ರ ಪತನ: ಬಿಎಸ್ವೈ

ಮುಂದೆ ಏನು ಬೇಕಾದರೂ ಆಗಬಹುದು

ಮುಂದೆ ಏನು ಬೇಕಾದರೂ ಆಗಬಹುದು

ಕಾಂಗ್ರೆಸ್ ಮತ್ತು ಜೆಡಿಎಸ್‌ನವರು ಒಬ್ಬರಿಗೊಬ್ಬರು ಚೂರಿ ಹಾಕಿದ್ದಾರೆ. ಜತೆಗೆ ತಮ್ಮ ಬೇಳೆ ಬೇಯಿಸಿಕೊಂಡಿದ್ದಾರೆ. ಎರಡೂ ಪಕ್ಷದರಿಗೆ ಲೋಕಸಭೆ ಚುನಾವಣೆಯಲ್ಲಿ ತಮಗೆ ಹಿನ್ನಡೆಯಾಗುವುದರ ಬಗ್ಗೆ ತಿಳಿದಿದೆ. ಅವರ ನಡುವಿನ ಕಿತ್ತಾಟ ಫಲಿತಾಂಶ ಪ್ರಕಟವಾದ ಬಳಿಕ ಉಲ್ಬಣವಾಗಲಿದೆ. ಮುಂದೆ ಏನು ಬೇಕಾದರೂ ಆಗಬಹುದು ಎಂದರು.

ಮೊದಲು ಅವರಪ್ಪ ಗೆದ್ದು ಬರಲಿ

ಮೊದಲು ಅವರಪ್ಪ ಗೆದ್ದು ಬರಲಿ

ಮೋದಿ ಅವರು ನೇಣು ಹಾಕಿಕೊಳ್ಳುವುದಾದರೆ ರಸ್ತೆ ಸರಿ ಮಾಡುತ್ತೇವೆ ಎಂದಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಯಡಿಯೂರಪ್ಪ, ಪ್ರಿಯಾಂಕ್ ಇತ್ತೀಚೆಗಷ್ಟೇ ರಾಜಕೀಯಕ್ಕೆ ಬಂದು ಸಚಿವರಾಗಿದ್ದಾರೆ. ಅವರ ಮಾತಿನ ಮೇಲೆ ಹಿಡಿತವಿರಬೇಕು. ಮೊದಲು ಅವರ ತಂದೆ (ಮಲ್ಲಿಕಾರ್ಜುನ ಖರ್ಗೆ) ಕಲಬುರಗಿಯಿಂದ ಗೆದ್ದುಬರಲಿ ಎಂದು ಗುಡುಗಿದರು.

ಕಾಂಗ್ರೆಸ್ ನ 20 ಶಾಸಕರು ರಾಜೀನಾಮೆ ನೀಡುತ್ತಾರೆ: ಬಿಎಸ್ ವೈಕಾಂಗ್ರೆಸ್ ನ 20 ಶಾಸಕರು ರಾಜೀನಾಮೆ ನೀಡುತ್ತಾರೆ: ಬಿಎಸ್ ವೈ

English summary
BJP leader BS Yeddyurappa asked Karnataka Congress In-charge KC Venugopal, what he knows about the state? Does he know how many seats Congress can win in the Lok Sabha Elections?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X