ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ-ಬೆಂಗಳೂರು ಜನ ಶತಾಬ್ಧಿ ರೈಲು ವೇಳಾಪಟ್ಟಿ ಬದಲು

|
Google Oneindia Kannada News

ಹುಬ್ಬಳ್ಳಿ, ಆಗಸ್ಟ್ 18 : ಹುಬ್ಬಳ್ಳಿ-ಬೆಂಗಳೂರು ನಡುವೆ ಪ್ರತಿದಿನ ಸಂಚಾರ ನಡೆಸುವ ಜನ ಶತಾಬ್ಧಿ ಎಕ್ಸ್‌ಪ್ರೆಸ್ ರೈಲಿನ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗಿದೆ. ಹಾವೇರಿ ತನಕ ರೈಲಿನ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ನೈಋತ್ಯ ರೈಲ್ವೆ ಕುರಿತು ಆದೇಶ ಹೊರಡಿಸಿದೆ. ಹುಬ್ಬಳ್ಳಿ-ಬೆಂಗಳೂರು ಜನ ಶತಾಬ್ಧಿ ಎಕ್ಸ್‌ಪ್ರೆಸ್ ರೈಲಿನ ವೇಳಾಪಟ್ಟಿ ಆಗಸ್ಟ್ 18ರಿಂದ ಜಾರಿಗೆ ಬರುವಂತೆ ಬದಲಾವಣೆಯಾಗಲಿದೆ.

ಬೆಳಗಾವಿ-ಗೋವಾ ನಡುವೆ ಆ.16ರಿಂದ ರೈಲು ಸಂಚಾರಬೆಳಗಾವಿ-ಗೋವಾ ನಡುವೆ ಆ.16ರಿಂದ ರೈಲು ಸಂಚಾರ

ಹುಬ್ಭಳ್ಳಿಯಿಂದ ಪ್ರತಿನಿತ್ಯ ಮಧ್ಯಾಹ್ನ 2ಗಂಟೆಗೆ ಹೊರಟು ರಾತ್ರಿ 9.25ಕ್ಕೆ ಬೆಂಗಳೂರನ್ನು ರೈಲು ತಲುಪುತ್ತಿತ್ತು. ಇನ್ನು ಮುಂದೆ 2.20ಕ್ಕೆ ಅಂದರೆ 20 ನಿಮಿಷ ತಡವಾಗಿ ಹುಬ್ಬಳ್ಳಿಯಿಂದ ಹೊರಡುವ ರೈಲು 9.50ಕ್ಕೆ ಬೆಂಗಳೂರಿಗೆ ತಲುಪಲಿದೆ.

ಬೆಳಗಾವಿ-ಧಾರವಾಡ-ಹುಬ್ಬಳ್ಳಿ ನಡುವೆ ಹೈಸ್ಪೀಡ್ ರೈಲುಬೆಳಗಾವಿ-ಧಾರವಾಡ-ಹುಬ್ಬಳ್ಳಿ ನಡುವೆ ಹೈಸ್ಪೀಡ್ ರೈಲು

Bengaluru Hubballi Jan Shatabdi Train Timings Rescheduled

ಬೆಂಗಳೂರಿನಿಂದ ನಿಗದಿತ ಸಮಯ ಬೆಳಗ್ಗೆ 6ಕ್ಕೆ ಹೊರಡುವ ರೈಲು ಮಧ್ಯಾಹ್ನ 1.45ಕ್ಕೆ ಹುಬ್ಬಳ್ಳಿಗೆ ತಲುಪಲಿದೆ. ಹಾವೇರಿ ತನಕ ರೈಲಿನ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬೆಳಗಾವಿ-ಬೆಂಗಳೂರು ಎಕ್ಸ್‌ಪ್ರೆಸ್ ರೈಲಿಗೆ ಹೆಚ್ಚುವರಿ ಬೋಗಿ ಸೇರ್ಪಡೆಬೆಳಗಾವಿ-ಬೆಂಗಳೂರು ಎಕ್ಸ್‌ಪ್ರೆಸ್ ರೈಲಿಗೆ ಹೆಚ್ಚುವರಿ ಬೋಗಿ ಸೇರ್ಪಡೆ

ಹುಬ್ಬಳ್ಳಿಯಿಂದ ಹೊರಡುವ ರೈಲು ಮಧ್ಯಾಹ್ನ 3.23ಕ್ಕೆ ಹಾವೇರಿಗೆ, 3.48ಕ್ಕೆ ರಾಣೆಬೆನ್ನೂರಿಗೆ, ಸಂಜೆ 4.10ಕ್ಕೆ ಹರಿಹರ, 4.28ಕ್ಕೆ ದಾವಣಗೆರೆ, 5.04ಕ್ಕೆ ಚಿಕ್ಕಜಾಜೂರು, 5.58ಕ್ಕೆ ಬೀರೂರು, 6.40ಕ್ಕೆ ಅರಸೀಕೆರೆ, 8.18ಕ್ಕೆ ತುಮಕೂರು, 9.20ಕ್ಕೆ ಯಶವಂತಪುರಕ್ಕೆ ಬಂದು ಸೇರಲಿದೆ.

English summary
South Western Railway changed the timings of the Jan Shatabdi train between Bengaluru and Hubballi. New schedule come to effect from August 18, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X