ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಂಗ್ರೆಸ್ ಟೀಕೆಗೆ ಜೂ. 15ರಂದು ಉತ್ತರ: ಬಸವರಾಜ ಹೊರಟ್ಟಿ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಧಾರವಾಡ, ಮೇ 26: ಸೋಲಿನ ಭಯ ನನಗಿಲ್ಲ. ನಾನು ಈ ಹಿಂದೆ ಅನೇಕ ಪಕ್ಷಗಳಿಂದ ಚುನಾಯಿತನಾಗಿ ಬಂದಿದ್ದೇನೆ. ನನ್ನನ್ನು ಚುನಾಯಿತಗೊಳಿಸಿದವರು ಶಿಕ್ಷಕರು ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವರಾಜ ಹೊರಟ್ಟಿ ಅವರು ಅಧಿಕಾರ ದಾಹದಿಂದ ಮತ್ತೆ ಸಭಾಪತಿ ಆಗಬೇಕು ಎಂಬ ಆಸೆಯಿಂದ ಬಿಜೆಪಿ ಸೇರಿದ್ದಾರೆ. ಸೋಲಿನ ಭಯದಿಂದ ಹೊರಟ್ಟಿ ಅವರು ಬಿಜೆಪಿ ಸೇರಿದ್ದಾರೆ ಎಂಬ ಸಂದೇಶ ಈಗಾಗಲೇ ಶಿಕ್ಷಕರಿಗೆ ಹೋಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಹೇಳಿಕೆಗೆ ಪ್ರತಿಕ್ರಿಯೆ ಮಾತನಾಡಿದ ಅವರು, ನಮ್ಮ ವಿರೋಧ ಪಕ್ಷದವರು ನಮಗೇ ಮತ ಹಾಕಿ ಎಂದು ಹೇಳುವುದಿಲ್ಲ. ಏನಾದರೂ ಮಾತನಾಡಬೇಕು ಎಂಬ ಉದ್ದೇಶದಿಂದ ಈ ರೀತಿ ಹೇಳಿಕೆ ಕೊಟ್ಟಿದ್ದಾರೆ ಅಷ್ಟೇ ಎಂದು ಅಭಿಪ್ರಾಯಪಟ್ಟರು.

ಬಿಬಿಎಂಪಿ ಚುನಾವಣೆಗೆ ಸಿದ್ಧತೆ: ಮೇ 28ಕ್ಕೆ ಎಎಪಿಯ ಬೆಂಗಳೂರು ಕಾರ್ಯಕಾರಿಣಿ ಸಭೆಬಿಬಿಎಂಪಿ ಚುನಾವಣೆಗೆ ಸಿದ್ಧತೆ: ಮೇ 28ಕ್ಕೆ ಎಎಪಿಯ ಬೆಂಗಳೂರು ಕಾರ್ಯಕಾರಿಣಿ ಸಭೆ

ಇವರ ಹೇಳಿಕೆಗೆ ಜೂ.15ನೇ ತಾರೀಖಿಗೆ ಉತ್ತರ ಸಿಗುತ್ತದೆ ಎಂದರು. ಬಿಜೆಪಿ ಇನ್ನೂ ಹಲವರು ಬರುತ್ತಾರೆ ಎಂಬ ವಿಷಯ ಗೊತ್ತಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರು, ಬಿಜೆಪಿಗೆ ಇನ್ನೂ ಹಲವರು ಬರುತ್ತಾರೆ ಎಂದು ಹೇಳಿಕೆ ಕೊಟ್ಟಿದ್ದರೆ ಅದು ಅಧಿಕೃತ ವ್ಯಕ್ತಿ ಹೇಳಿದಂತೆ ಎಂದು ಬಸವರಾಜ ಹೊರಟ್ಟಿ ಸ್ಪಷ್ಟಪಡಿಸಿದರು.

Basavaraj Horatti Says Hes Not Afraid Of Defeat

"ಬಿಜೆಪಿಯಿಂದ ಶಿಕ್ಷಕರು ಭ್ರಮನಿರಸರಾಗಿದ್ದಾರೆ . ಯಾತಕ್ಕಾಗಿ ಬಿಜೆಪಿಗೆ ಮತ ಹಾಕಬೇಕು ಎಂಬ ಪ್ರಶ್ನೆ ಅವರಲ್ಲಿ ಮೂಡಿದೆ," ಎಂಬ ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಹೇಳಿಕೆಗೆ ಹೊರಟ್ಟಿ ಈ ರೀತಿಯಾಗಿ ತಿರುಗೇಟು ನೀಡಿದರು..

ಅಧಿಕಾರ ದಾಹದಿಂದ ಬಿಜೆಪಿಗೆ ಹೊರಟ್ಟಿ: ಸಲೀಂ ಟೀಕೆ

ಬಸವರಾಜ ಹೊರಟ್ಟಿ ಅವರು ಅಧಿಕಾರ ದಾಹದಿಂದ ಮತ್ತೆ ಸಭಾಪತಿ ಆಗಬೇಕು ಎಂಬ ಆಸೆಯಿಂದ ಬಿಜೆಪಿ ಸೇರಿದ್ದಾರೆ. ಸೋಲಿನ ಭಯದಿಂದ ಹೊರಟ್ಟಿ ಅವರು ಬಿಜೆಪಿ ಸೇರಿದ್ದಾರೆ ಎಂಬ ಸಂದೇಶ ಈಗಾಗಲೇ ಶಿಕ್ಷಕರಿಗೆ ಹೋಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಅವರು ಟೀಕಿಸಿದ್ದರು.

ಎರಡು ವರ್ಷಗಳಿಂದ ಶಿಕ್ಷಕರಿಗೆ ಅನ್ಯಾಯ

ಹೊರಟ್ಟಿ ಅವರ ಮೇಲೆ ಯಾವುದೇ ಕಳಂಕ ಇಲ್ಲ. ಆದರೆ ಬಿಜೆಪಿಯಿಂದ ಶಿಕ್ಷಕರು ಭ್ರಮನಿರಸರಾಗಿದ್ದಾರೆ . ಯಾತಕ್ಕಾಗಿ ಬಿಜೆಪಿಗೆ ಮತ ಹಾಕಬೇಕು ಎಂಬ ಪ್ರಶ್ನೆ ಅವರಲ್ಲಿ ಮೂಡಿದೆ . ಬೆಲೆ ಏರಿಕೆ , ಭ್ರಷ್ಟಾಚಾರ ಅಥವಾ ಜನ ವಿಶ್ವಾಸ ಇಲ್ಲದ ಪಕ್ಷಕ್ಕೆ ಮತ ಹಾಕಬೇಕಾ ಎಂಬ ಹಲವಾರು ಪ್ರಶ್ನೆಗಳು ಶಿಕ್ಷಕರ ತಲೆಯಲ್ಲಿವೆ ಎಂದಿದ್ದರು.

Basavaraj Horatti Says Hes Not Afraid Of Defeat

ಕಳೆದ ಎರಡು ವರ್ಷಗಳಿಂದ ಶಿಕ್ಷಕರಿಗೆ ಅನ್ಯಾಯವಾಗುತ್ತಿದೆ . ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸಾಧನೆ ಶೂನ್ಯವಾಗಿದ್ದು, ಆಪರೇಶನ್ ಕಮಲದೊಂದಿಗೆ ಉದಯವಾದ ಸರ್ಕಾರ ಭ್ರಷ್ಟಾಚಾರದಲ್ಲೇ ಮುಳುಗಿದ್ದು, ಭ್ರಷ್ಟಾಚಾರ ಮಾತ್ರ ವೃದ್ಧಿಯಾಗಿದೆ. ಸರ್ಕಾರದ ಶೇ.40 ಕಮಿಷನ್ ನಿಂದಾಗಿ ರಾಜ್ಯದ ಜತೆ ತಲೆತಗ್ಗಿಸುವಂತಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಆರೋಪಿಸಿದ್ದರು.

(ಒನ್ಇಂಡಿಯಾ ಸುದ್ದಿ)

English summary
New BJP turncoat Basavaraj Horatti has lashed out against MLC Salim Ahmed's statement that he has joined BJP for the sake of power. Horatti said Salim will get reply on Parishat polls counting day on June 15th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X