ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೀರಶೈವ-ಲಿಂಗಾಯತ ವಿವಾದ: ಚರ್ಚೆಗೆ ಮತ್ತೊಮ್ಮೆ ಆಹ್ವಾನ ಕೊಟ್ಟ ಹೊರಟ್ಟಿ

|
Google Oneindia Kannada News

ಹುಬ್ಬಳ್ಳಿ, ಡಿಸೆಂಬರ್ 30: ಇಂದು (ಡಿಸೆಂಬರ್ 30) ಹುಬ್ಬಳ್ಳಿಯ ಮೂರು ಸಾವಿರಮಠದಲ್ಲಿ ನಡೆಯಬೇಕಿದ್ದ ವೀರಶೈವ ಹಾಗೂ ಲಿಂಗಾಯತ ಆಂತರಿಕ ಚರ್ಚೆ ರದ್ದಾದ ಹಿನ್ನೆಲೆಯಲ್ಲಿ ಜೆಡಿಎಸ್ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮತ್ತೊಂದು ದಿನಾಂಕ ನಿಗದಿಪಡಿಸಿದ್ದಾರೆ.

ಲಿಂಗಾಯತ-ವೀರಶೈವ ಬಹಿರಂಗ ಚರ್ಚೆ: ಭದ್ರತೆಗೆ ಪೊಲೀಸ್ ನಕಾರಲಿಂಗಾಯತ-ವೀರಶೈವ ಬಹಿರಂಗ ಚರ್ಚೆ: ಭದ್ರತೆಗೆ ಪೊಲೀಸ್ ನಕಾರ

ಶನಿವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೊರಟ್ಟಿ, "ಜನವರಿ 28, 29, 31 ರಂದು ಈ ಮೂರು ದಿನಗಳಲ್ಲಿ ಯಾವ ದಿನವಾದ್ರು ಆಂತರಿಕ ಚರ್ಚೆಗೆ ಬೆಳಗಾವಿಯ ನಾಗನೂರು ಮಠಕ್ಕೆ ಬನ್ನಿ" ಎಂದು ದಿಂಗಾಲೇಶ್ವರ ಶ್ರೀಗೆ ಆಹ್ವಾನ ನೀಡಿದರು.

ಇದು ಬಹಿರಂಗ ಚರ್ಚೆ ಅಲ್ಲ. ಇದು ಕೇವಲ ಆಂತರಿಕ ಚರ್ಚೆ ಮಾಡೋಣ. ಸೌಹಾರ್ದಯುತ ಚರ್ಚೆಗೆ ನಾವು ಸಿದ್ಧ ಎಂದು ಹೊರಟ್ಟಿ ಹೇಳಿದರು. ಈಗಾಗಲೇ ಲಿಂಗಾಯತ ಪರವಾಗಿ ವಾದ ಮಾಡಲು ಹೊರಟ್ಟಿ ಐದು ಜನರ ಹೆಸರನ್ನು ಸಹ ಪ್ರಕಟಿಸಿದ್ದಾರೆ.

Basavaraj Horatti once again invite to Dingaleshwar Swamiji for debate about Veerashaiva and Lingayat

ನಾವು ಲಿಂಗಾಯತ ಹಾಗೂ ವೀರಶೈವ ಬೇರೆ ಎಂದು ಹೇಳಿದ್ದೇವೆ ಆದರೆ, ದಿಂಗಾಲೇಶ್ವರ ಸ್ವಾಮಿಗಳು ಇದನ್ನು ಒಪ್ಪುತ್ತಿಲ್ಲ. ಇದರ ಬಗ್ಗೆ ಸ್ಪಷ್ಟನೆ ನೀಡುವಂತೆ ಕೇಳಿದ್ದೇವೆ.

ಲಿಂಗಾಯತ ಪರ ಐದು ಜನರ ತಂಡ ಪ್ರಕಟಿಸಿದ ಬಸವರಾಜ್ ಹೊರಟ್ಟಿ ಲಿಂಗಾಯತ ಪರ ಐದು ಜನರ ತಂಡ ಪ್ರಕಟಿಸಿದ ಬಸವರಾಜ್ ಹೊರಟ್ಟಿ

ಹೀಗಾಗಿ ಡಿ. 30 ರಂದು ಬೆಳಗ್ಗೆ 11 ಗಂಟೆಗೆ ಮೂರು ಸಾವಿರ ಮಠದಲ್ಲಿ ಬಹಿರಂಗ ಚರ್ಚೆ ಏರ್ಪಡಿಸಲಾಗಿದೆ. ಇದರ ಹಿನ್ನೆಲೆ ಮೂರು ಸಾವಿರಮಠಕ್ಕೆ ಭೇಟಿ ನೀಡಿರುವುದಾಗಿ ಬಸವರಾಜ ಹೊರಟ್ಟಿ ಇತ್ತೀಚೆಗೆ ಹೇಳಿದ್ದರು. ಆದರೆ, ಸ್ಥಳಿಯ ಪೊಲೀಸರು ಹಾಗೂ ಮಠದ ಅಧಿಕಾರಿಗಳು ನಿರಾಕರಿಸಿದ್ದರಿಂದ ರದ್ದುಗೊಂಡಿತ್ತು.

ವೀರಶೈವ ಹಾಗೂ ಲಿಂಗಾಯತ ಬೇರೆ ಬೇರೆ ಎನ್ನುವ ಕಿತ್ತಾಟಕ್ಕೆ ತುಮೂರಿನ ಸಿದ್ದಗಂಗಾ ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ

English summary
Lingayat leader and JDS MLC Basavaraj Horatti once again invite to Dingaleshwar Swamiji for debate about Veerashaiva and Lingayat. Veerashaiva's come to Naganur Mutt, Belagavi on January 28, 29, 31 in one day for debate said Horatti in Hubballi on December 30.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X