ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೂಸ್ಟರ್ ಡೋಸ್; ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದೇನು?

|
Google Oneindia Kannada News

ಹುಬ್ಬಳ್ಳಿ, ಡಿಸೆಂಬರ್ 01; "ಡಿಸೆಂಬರ್ 2ರಂದು ನವದೆಹಲಿಗೆ ತೆರಳುತ್ತಿದ್ದು, ಕೇಂದ್ರ ಆರೋಗ್ಯ ಸಚಿವರನ್ನು ಭೇಟಿಯಾಗಿ ಆರೋಗ್ಯ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ಲಸಿಕೆ ನೀಡುವ ಕುರಿತು ಚರ್ಚಿಸಲಾಗುವುದು" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬುಧವಾರ ಹುಬ್ಬಳ್ಳಿಗೆ ಆಗಮಿಸಿದ ಮುಖ್ಯಮಂತ್ರಿಗಳು ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು, "ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿದೇಶಗಳಿಂದ ಆಗಮಿಸುವ ಪ್ರಯಾಣಿಕರನ್ನು ಕಡ್ಡಾಯವಾಗಿ ಕೋವಿಡ್ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಜನತೆ ಆತಂಕ ಪಡುವ ಅಗತ್ಯವಿಲ್ಲ" ಎಂದರು.

 ಹೊಸ ಕೋವಿಡ್ ರೂಪಾಂತರಿ ವಿರುದ್ಧ ಬೂಸ್ಟರ್ ಡೋಸ್ ಸಿದ್ಧಪಡಿಸಲಿದೆ ಮಾಡೆರ್ನಾ ಹೊಸ ಕೋವಿಡ್ ರೂಪಾಂತರಿ ವಿರುದ್ಧ ಬೂಸ್ಟರ್ ಡೋಸ್ ಸಿದ್ಧಪಡಿಸಲಿದೆ ಮಾಡೆರ್ನಾ

Basavaraj Bommai On Booster Dose For Health Workers

ರಾಜ್ಯದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡುವ ಕುರಿತು ಚರ್ಚೆ ನಡೆಯುತ್ತಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, "ಕೇಂದ್ರ ಆರೋಗ್ಯ ಸಚಿವರನ್ನು ಭೇಟಿಯಾಗಿ ಬೂಸ್ಟರ್ ಡೋಸ್ ಲಸಿಕೆ ನೀಡುವ ಕುರಿತು ಚರ್ಚಿಸಲಾಗುವುದು" ಎಂದು ತಿಳಿಸಿದರು.

ಭಾರತದಲ್ಲಿ ಮೊದಲು 2 ಡೋಸ್ ನೀಡಿ, ಬೂಸ್ಟರ್ ಡೋಸ್ ಚಿಂತೆ ಬಿಡಿ! ಭಾರತದಲ್ಲಿ ಮೊದಲು 2 ಡೋಸ್ ನೀಡಿ, ಬೂಸ್ಟರ್ ಡೋಸ್ ಚಿಂತೆ ಬಿಡಿ!

"ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಕೋವಿಡ್ ಸೋಂಕಿನ ವಿರುದ್ಧದ ಮೊದಲ ಮತ್ತು ಎರಡನೇ ಡೋಸ್ ನೀಡಿ 6-7 ತಿಂಗಳುಗಳಾಗಿರುವುದರಿಂದ ಈಗ ಬೂಸ್ಟರ್ ಡೋಸ್ ನೀಡಬಹುದೇ? ಎಂಬುದರ ಕುರಿತು ಚರ್ಚಿಸಲಾಗುವುದು" ಎಂದು ಸ್ಪಷ್ಟಪಡಿಸಿದರು.

 ದೇಶದಲ್ಲಿ ಬೂಸ್ಟರ್ ಡೋಸ್ ನೀಡುವ ಕುರಿತು ಚಿಂತನೆ ಇಲ್ಲ: ನೀತಿ ಆಯೋಗ ದೇಶದಲ್ಲಿ ಬೂಸ್ಟರ್ ಡೋಸ್ ನೀಡುವ ಕುರಿತು ಚಿಂತನೆ ಇಲ್ಲ: ನೀತಿ ಆಯೋಗ

"ಬೆಂಗಳೂರು ಹಾಗೂ ಮಂಗಳೂರು ವಿಮಾನ ನಿಲ್ದಾಣಗಳಿಗೆ ಆಗಮಿಸುವ ವಿದೇಶಿ ಪ್ರಯಾಣಿಕರನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಗುತ್ತಿದೆ. ವರದಿ ನೆಗೆಟಿವ್ ಇದ್ದರೂ ಸಹ ಕನಿಷ್ಠ ಒಂದು ವಾರ ಕಾಲ ತಮ್ಮ ಮನೆಗಳಲ್ಲಿಯೇ ಇರಲು ಅಂತಹ ಪ್ರಯಾಣಿಕರಿಗೆ ಸೂಚಿಸಲಾಗಿದೆ. ಅವರ ಚಲನ ವಲನಗಳ ಮೇಲೆಯೂ ನಿಗಾವಹಿಸಲಾಗಿದೆ" ಎಂದರು.

ಧಾರವಾಡ ಎಸ್‌ಡಿಎಂ; ಧಾರವಾಡದ ಎಸ್‌ಡಿಎಂ ಕ್ಯಾಂಪಸ್‌ನಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡ ಬಗ್ಗೆ ಮಾತನಾಡಿದ ಮುಖ್ಯಮಂತ್ರಿಗಳು, "ಧಾರವಾಡ ಎಸ್‌ಡಿಎಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕಾಣಿಸಿಕೊಂಡ ಕೋವಿಡ್ ನಿಯಂತ್ರಿಸಲು ಆಸ್ಪತ್ರೆ ಸುತ್ತಮುತ್ತ 500 ಮೀಟರ್ ವ್ಯಾಪ್ತಿಯಲ್ಲಿನ 1 ಸಾವಿರ ಜನರನ್ನೂ ಸೇರಿ, ಸುಮಾರು 7 ಸಾವಿರ ಜನರನ್ನು ತಪಾಸಣೆ ಮಾಡಲಾಗಿದೆ. ಅವರಲ್ಲಿ 306 ಜನರಲ್ಲಿ ಸೋಂಕು ದೃಢವಾಗಿದೆ. ಏಳು ದಿನಗಳ ನಂತರ ಮತ್ತೆ ಅವರನ್ನು ಪರೀಕ್ಷೆ ಮಾಡಿದಾಗ ಇಬ್ಬರಲ್ಲಿ ಮಾತ್ರ ಸೋಂಕು ಕಂಡು ಬಂದಿದೆ" ಎಂದು ತಿಳಿಸಿದರು.

"ಕೋವಿಡ್ ಕಾರಣದಿಂದಾಗಿ ಹೊಸ ತಾಲೂಕುಗಳಿಗೆ ಅಗತ್ಯ ಸೌಕರ್ಯ ಕಲ್ಪಿಸುವಲ್ಲಿ ವಿಳಂಬವಾಗಿದೆ. ಕಚೇರಿ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಕೋವಿಡ್ ನಿಯಂತ್ರಣಕ್ಕೆ ಮತ್ತೆ ಲಾಕ್ ಡೌನ್ ಮಾಡುವ ವಿಚಾರ ಇಲ್ಲ, ಆತಂಕ ಪಡಬೇಕಾಗಿಲ್ಲ. ಆರ್ಥಿಕ ಚಟುವಟಿಕೆಗಳಿಂದ ಜನತೆ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ" ಎಂದು ಮುಖ್ಯಮಂತ್ರಿಗಳು ಹೇಳಿದರು.

ಆರೋಗ್ಯ ಸಚಿವರ ಹೇಳಿಕೆ; ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಸಹ ಬೂಸ್ಟರ್ ಡೋಸ್ ನೀಡುವ ಕುರಿತು ಮಾತನಾಡಿದ್ದಾರೆ, "ಬೂಸ್ಟರ್ ಡೋಸ್‌ನ ವೈಜ್ಞಾನಿಕವಾದ ಸಾಧಕ-ಬಾಧಕಗಳ ಬಗ್ಗೆ ಮುಖ್ಯಮಂತ್ರಿಗಳು ಕೇಂದ್ರ ಆರೋಗ್ಯ ಸಚಿವರ ಜೊತೆ ಚರ್ಚೆ ಮಾಡಲಿದ್ದಾರೆ" ಎಂದರು.

"ಟೆಮಿ ಮೆಡಿಸಿನ್, ಪರೀಕ್ಷೆಗಳ ಸಂಖ್ಯೆ ಹೆಚ್ಚಳ ಮಾಡುವುದು, ಮಾಸ್ಕ್ ಕಡ್ಡಾಯವಾಗಿ ಧರಿಸುವುದು ಮತ್ತು ಮಾರ್ಗಸೂಚಿಗಳನ್ನು ಪಾಲನೆ ಮಾಡುವುದನ್ನು ಕಠಿಣವಾಗಿ ಜಾರಿಗೆ ತರಲಾಗುತ್ತದೆ. ಜನರು ಸರ್ಕಾರದ ಜೊತೆ ಕೈ ಜೋಡಿಸಿದರೆ ಬೇಗ ಆತಂಕದಿಂದ ಹೊರಬರಬಹುದು" ಎಂದು ಡಾ. ಕೆ. ಸುಧಾಕರ್ ಹೇಳಿದರು.

"ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಎರಡು ಡೋಸ್ ಲಸಿಕೆ ಪಡೆಯದವರಿಗೆ ಸರ್ಕಾರದಿಂದ ಕೊಡುಗ ಸೌಲಭ್ಯಗಳನ್ನು ಕಡಿತ ಮಾಡಬೇಕು ಮತ್ತು ದಂಡ ಹಾಕಬೇಕು ಎಂದು ಸಲಹೆ ನೀಡಿತ್ತು. ಆದರೆ ಸರ್ಕಾರ ಅದನ್ನು ಮಾಡುವುದಿಲ್ಲ. ಬದಲಾಗಿ ಮನವೊಲಿಸಿ ಪಡೆಯುವಂತೆ ಮಾಡಲಾಗುತ್ತದೆ" ಎಂದು ಸಚಿವರು ಸ್ಪಷ್ಟಪಡಿಸಿದರು.

Recommended Video

ಕೆಲವೇ ದಿನಗಳಲ್ಲಿ Virat Kohli ಬಗ್ಗೆ BCCI ನಿಂದ ಶಾಕಿಂಗ್ ನ್ಯೂಸ್!! | Oneindia Kannada

English summary
Will discuss about booster dose of the vaccine for health workers with union health minister during New Delhi visit on December 2 said Karnataka chief minister Basavaraj Bommai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X