ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊವಿಡ್ ರೋಗಿಗಳ ಜೊತೆ ಬ್ಯಾಡ್ಮಿಂಟನ್ ಆಡಿದ ಹುಬ್ಬಳ್ಳಿ ವೈದ್ಯರು

|
Google Oneindia Kannada News

ಹುಬ್ಬಳ್ಳಿ, ಜುಲೈ 21: ಕೊರೊನಾ ವೈರಸ್ ರೋಗಿಗಳನ್ನು ಕೊವಿಡ್ ಕೇಂದ್ರಗಳಲ್ಲಿ ಹಾಗೂ ಆಸ್ಪತ್ರೆಗಳಲ್ಲಿ ಸರಿಯಾಗಿ ನೋಡಿಕೊಳ್ಳುತ್ತಿಲ್ಲ, ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ ಎಂಬ ಅನೇಕ ಘಟನೆಗಳು ನಡೆದಿವೆ.

Recommended Video

Drone Prathap in Police Custody, what next..? | Oneindia Kannada

ಇಂತಹದ ನಡುವೆ ಕೊವಿಡ್ ರೋಗಿಗಳನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿರುವ ವೈದ್ಯರು ಹಾಗೂ ಆಸ್ಪತ್ರೆಗಳ ಸಹ ಗಮನ ಸೆಳೆಯುತ್ತಿದೆ. ಹುಬ್ಬಳ್ಳಿಯ ಕೊರೊನಾ ಆಸ್ಪತ್ರೆಯಲ್ಲಿ ಕೊವಿಡ್ ರೋಗಿಗಳ ಜೊತೆ ಸ್ವತಃ ವೈದ್ಯರು ಬ್ಯಾಡ್ಮಿಂಟನ್ ಆಟ ಆಡುತ್ತಿದ್ದಾರೆ.

ಕೋವಿಡ್ ಶುಭಶುದ್ದಿ: ಕರ್ನಾಟಕದಲ್ಲಿ ಶುರುವಾಗಲಿವೆ ಪ್ಲಾಸ್ಮಾ ಬ್ಯಾಂಕ್‌!ಕೋವಿಡ್ ಶುಭಶುದ್ದಿ: ಕರ್ನಾಟಕದಲ್ಲಿ ಶುರುವಾಗಲಿವೆ ಪ್ಲಾಸ್ಮಾ ಬ್ಯಾಂಕ್‌!

ಕೊವಿಡ್ ರೋಗಿಗಳು ಮತ್ತು ವೈದ್ಯರು ಬ್ಯಾಡ್ಮಿಂಟನ್ ಆಡುತ್ತಿರುವ ಫೋಟೋ ವೈರಲ್ ಆಗಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Badminton Match Between the Doctors and Under Treatment covid19 Patients at a Centre in Hubballi

ಇತ್ತೀಚಿಗಷ್ಟೆ ಕೊವಿಡ್ ಕೇಂದ್ರಗಳಲ್ಲಿರುವ ಸೋಂಕಿತರು ಸಿನಿಮಾ ಹಾಡುಗಳಿಗೆ ಸಖತ್ ಆಗಿ ಡ್ಯಾನ್ಸ್ ಮಾಡಿರುವ ವಿಡಿಯೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಕೆಲವು ಕಡೆ ರೋಗಿಗಳ ಜೊತೆ ವೈದ್ಯರು ಸೇರಿ ಡ್ಯಾನ್ಸ ಮಾಡಿರುವ ಘಟನೆಗಳು ನಡೆದಿದೆ. ಇಂತಹ ಫೋಟೋ ಮತ್ತು ವಿಡಿಯೋಗಳು ಸಾಮಾನ್ಯ ಜನರ ಆತ್ಮವಿಶ್ವಾಸ ಹೆಚ್ಚಿಸುತ್ತಿದೆ.

ಹಾಗಂತ ಎಲ್ಲ ಕಡೆಯೂ ಹೀಗೆ ಇದೆ ಎಂದು ಹೇಳಲು ಸಾಧ್ಯವಿಲ್ಲ. ಈಗಲೂ ಅನೇಕ ಕಡೆ ಬೆಡ್ ಸಮಸ್ಯೆ ಇದೆ. ಕೊರೊನಾ ಬಿಟ್ಟು ಇತರೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿಲ್ಲ. ಇದರ ಮಧ್ಯೆಯೂ ಅಲ್ಲೊಂದು ಇಲ್ಲೊಂದು ಪಾಸಿಟಿವ್ ಘಟನೆಗಳು ಸಮಾಧಾನ ತರುತ್ತಿದೆ.

English summary
A badminton match between the doctors and under treatment Covid19 patients at a centre in Hubballi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X