ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿಯಲ್ಲಿ ಪೊಲೀಸ್ ಮೇಲೆ ಆಟೋ ಚಾಲಕನ ದೌರ್ಜನ್ಯ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಮಾರ್ಚ್ 20: ಆಟೋ‌ ಚಾಲಕರ ಮೇಲೆ ಪೊಲೀಸರು ದೌರ್ಜನ್ಯ ನಡೆಸುವುದು ಸಾಮಾನ್ಯ, ಆದರೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಇದು ಉಲ್ಟಾ ಆಗಿದೆ‌. ರಸ್ತೆ ನಿಯಮ ಪಾಲನೆ ಮಾಡುವಂತೆ ಹೇಳಲು ಹೋದ ಟ್ರಾಫಿಕ್ ಪೊಲೀಸ್ ಮೇಲೆಯೇ ಆಟೋ ಚಾಲಕನೊಬ್ಬ ದೌರ್ಜನ್ಯ ಎಸಗಿದಲ್ಲದೆ ಕಾಲಿನಿಂದ ಒದ್ದು ಆತನ ಮೇಲೆ ಆಟೋ ಹತ್ತಿಸಿಕೊಂಡು ಹೋದ ಘಟನೆ ನಡೆದಿದೆ.

ಕಳೆದ ಎರಡು ದಿನಗಳ ಹಿಂದೆ ನಗರದ ಚೆನ್ನಮ್ಮ ಸರ್ಕಲ್ ನ ಪೆಟ್ರೋಲ್ ಬಂಕ್ ಬಳಿ ಸಾರಿಗೆ ನಿಯಮಗಳನ್ನು ಪಾಲಿಸುವಂತೆ ಹೇಳಲು ಹೋಗಿದ್ದ ಟ್ರಾಫಿಕ್ ಪೊಲೀಸ್ ಮೇಲೆ ಆಟೋ ಚಾಲಕ ದೌರ್ಜನ್ಯ ಎಸಗಿದ್ದಾನೆ.

ಆಟೋ ಬಳಿ ಬಂದ ಟ್ರಾಫಿಕ್ ಪೊಲೀಸ್ ಸರಿಯಾಗಿ ಸಾರಿಗೆ ನಿಯಮ ಪಾಲಿಸುವಂತೆ ಹೇಳುತ್ತಿದಂತೆ ಆಟೋ ಚಾಲಕ ಪೊಲೀಸ್ ನನ್ನು ಕಾಲಿನಿಂದ ಒದ್ದು ಆಟೋ ಚಾಲನೆ ಮಾಡಿಕೊಂಡು ಹೋಗಿದ್ದಾನೆ. ಈ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

Auto Driver Assault On Police In Hubballi

ಆಟೋ ಚಾಲಕರು ಎಲ್ಲೆಂದರಲ್ಲಿ ಆಟೋ ನಿಲ್ಲಿಸುವುದು, ಸಂಚಾರಿ ನಿಯಮವನ್ನು ಪಾಲಿಸುತ್ತಿಲ್ಲ. ಇವರು ಮಾಡಿದ್ದೇ ಕಾನೂನು, ಆಡಿದ್ದೇ ಆಟವಾಗಿದೆ. ಇನ್ನು ಆಟೋಗೆ ಮೀಟರ್ ಇದ್ದರೂ ಹಾಕುವುದಿಲ್ಲ. ಇನ್ನು ಕೆಲ ಆಟೋಗಳಿಗೆ ಮೀಟರ್ ಇಲ್ಲ . ಸಮವಸ್ತ್ರ ಹಾಕುವುದಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ಇದನ್ನು ಕೇಳಲು‌ ಹೋದ ಪೊಲೀಸರ ಮೇಲೆಯೇ ಆಟೋ ಹತ್ತಿಸುವ ದೃಶ್ಯವಂತೂ ಬೆಚ್ಚಿ ಬೀಳಿಸುತ್ತದೆ. ಸಂಚಾರಿ ನಿಯಮವನ್ನು ಎಲ್ಲರೂ ಪಾಲಿಸಬೇಕು. ಆಟೋ ಚಾಲಕರ ಗೂಂಡಾ ವರ್ತನೆಗೆ ಬ್ರೇಕ್ ಹಾಕಿ ತಕ್ಕ ಪಾಠ ಕಲಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

English summary
Auto driver was assault on Traffic policeman in Hubballi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X