ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯದ 5 ಜಿಲ್ಲೆಗಳಲ್ಲಿ ಸದ್ಯದಲ್ಲಿಯೇ ಭಯೋತ್ಪಾದನೆ ನಿಗ್ರಹ ಪಡೆ ರಚನೆ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಮಾರ್ಚ್ 04:ರಾಜ್ಯದಲ್ಲಿ ಭಯೋತ್ಪಾದಕ ಚಟುವಟಿಕೆಗಳ ಮೇಲೆ ನಿಗಾವಹಿಸಲು ರಾಜ್ಯದ ಐದು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಭಯೋತ್ಪಾದನೆ ನಿಗ್ರಹ ಪಡೆ ರಚಿಸಲು ಪೊಲೀಸ್ ಇಲಾಖೆ ನಿರ್ಧರಿಸಿದೆ.

ಬೆಂಗಳೂರು, ಮೈಸೂರು, ಬೆಳಗಾವಿ, ಮಂಗಳೂರು ಹಾಗೂ ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಸದ್ಯದಲ್ಲಿಯೇ ತಲಾ ಒಂದೊಂದು ಭಯೋತ್ಪಾದನೆ ನಿಗ್ರಹ ದಳ ರಚಿಸಲಾಗುತ್ತಿದೆ. ಶೀಘ್ರದಲ್ಲಿಯೇ ಎಟಿಎಸ್ ಸ್ಥಾಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಪೊಲೀಸ್ ಮಹಾನಿರ್ದೇಶಕಿ ನೀಲ್ ಮಣಿ ಎನ್ ರಾಜು, ಪೊಲೀಸ್ ಕಮೀಷನರೇಟ್ ಗಳಿಗೆ ಆದೇಶ ಹೊರಡಿಸಿದ್ದಾರೆ.

ಮಸೂದ್ ಸತ್ತಿದ್ದಾನೆ ಎಂಬ ಸುದ್ದಿ ಸುಳ್ಳು: ಜೈಷ್ ನಿಂದಲೇ ಸ್ಪಷ್ಟನೆಮಸೂದ್ ಸತ್ತಿದ್ದಾನೆ ಎಂಬ ಸುದ್ದಿ ಸುಳ್ಳು: ಜೈಷ್ ನಿಂದಲೇ ಸ್ಪಷ್ಟನೆ

ಎಲ್ಲಾ ತಂಡಕ್ಕೂ ಅಗತ್ಯ ಸಂಖ್ಯೆಯ ಸಿಬ್ಬಂದಿ ಒದಗಿಸುವಂತೆ ಹಾಗೂ ಸಹಾಯಕ ಪೊಲೀಸ್ ಕಮೀಷನರ್ ರಾಂಕಿಗಿಂತ ಕಡಿಮೆ ಇರದ ಅಧಿಕಾರಿಗಳನ್ನು ಇದರ ಮುಖ್ಯಸ್ಥರನ್ನಾಗಿ ನೇಮಿಸುವಂತೆ ಅವರು ನಿರ್ದೇಶಿಸಿದ್ದಾರೆ.

Anti Terrorism Squad will be created in 5 districts of the karnataka

 ಏರ್ ಸ್ಟ್ರೈಕ್ ನಂತರ ಬಾಲಕೋಟ್ ಜೈಷ್ ತಾಣ ಏನಾಗಿದೆ? ಚಿತ್ರ ನೋಡಿ ಏರ್ ಸ್ಟ್ರೈಕ್ ನಂತರ ಬಾಲಕೋಟ್ ಜೈಷ್ ತಾಣ ಏನಾಗಿದೆ? ಚಿತ್ರ ನೋಡಿ

ಪೊಲೀಸ್ ಮಹಾನಿರ್ದೇಶಕರ ಆದೇಶದ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಈಗಾಗಲೇ ಪ್ರಕ್ರಿಯೆ ಆರಂಭಿಸಿದ್ದು, ಈ ಮಾಸಾಂತ್ಯದೊಳಗೆ ಕಾರ್ಯಾಚರಣೆ ಆರಂಭಿಸುವ ಸಾಧ್ಯತೆ ಇದೆ. ಗುಪ್ತಚರ ಮಾಹಿತಿ ಹಾಗೂ ಕಾರ್ಯಾಚರಣೆ ಎಟಿಎಸ್ ನ ಪ್ರಮುಖ ಅಂಶಗಳಾಗಿವೆ. ಇವುಗಳು ರಾಜ್ಯ ಗುಪ್ತಚರ ಮತ್ತು ಆಂತರಿಕ ಭದ್ರತಾ ವಿಭಾಗದೊಂದಿಗೆ ನಿತ್ಯ ಮಾಹಿತಿ ವಿನಿಮಯ ಮಾಡಿಕೊಳ್ಳಲಿವೆ.

English summary
Anti Terrorism Squad will be created in 5 districts of the Karnataka state. Bengaluru, Mysuru, Belagavi, Mangaluru and Hubballi-Dharwad police commissionerates will have one ATS unit each to crack down on sleeper cells.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X