ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೊಲ್ಲಾಪುರ-ಧಾರವಾಡ ಪ್ಯಾಸೆಂಜರ್ ರೈಲು ಓಡಿಸಿದ ಮಹಿಳೆಯರು

|
Google Oneindia Kannada News

ಹುಬ್ಬಳ್ಳಿ, ಮಾರ್ಚ್ 09: ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಸೋಮವಾರ ನೈಋತ್ಯ ರೈಲ್ವೆ ಮಹಿಳಾ ಸಿಬ್ಬಂದಿಗಳನ್ನು ಗೌರವಿಸಿತು. ಸೊಲ್ಲಾಪುರ-ಧಾರವಾಡ ಪ್ಯಾಸೆಂಜರ್‌ ರೈಲನ್ನು ಮಹಿಳೆಯರೇ ಓಡಿಸುವ ಮೂಲಕ ಸಂಭ್ರಮಿಸಿದರು.

ಹುಬ್ಬಳ್ಳಿಯಲ್ಲಿರುವ ನೈಋತ್ಯ ರೈಲ್ವೆ ವಿಭಾಗೀಯ ಕಚೇರಿ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ವಿನೂತನವಾಗಿ ಆಚರಣೆ ಮಾಡಿತು. ಮಹಿಳೆಯರು 07321 ಸೊಲ್ಲಾಪುರ-ಧಾರವಾಡ ಪ್ಯಾಸೆಂಜರ್‌ ರೈಲನ್ನು ಓಡಿಸಲು ಅವಕಾಶ ನೀಡಿತು.

ಬೆಂಗಳೂರಿನಿಂದ ಹುಬ್ಬಳ್ಳಿ, ಹೊಸಪೇಟೆಗೆ ಸಾಮಾನ್ಯ ದರದ ರೈಲು, ವೇಳಾಪಟ್ಟಿ ಬೆಂಗಳೂರಿನಿಂದ ಹುಬ್ಬಳ್ಳಿ, ಹೊಸಪೇಟೆಗೆ ಸಾಮಾನ್ಯ ದರದ ರೈಲು, ವೇಳಾಪಟ್ಟಿ

women

ಹುಬ್ಬಳ್ಳಿ-ಧಾರವಾಡ ನಡುವೆ ರೈಲನ್ನು ಮಹಿಳೆಯರೇ ಓಡಿಸಿದರು. ಟಿಕೆಟ್ ವಿತರಣೆ, ಟಿಕೆಟ್ ಪರಿಶೀಲನೆ, ಭದ್ರತಾ ಸಿಬ್ಬಂದಿ ಸೇರಿದಂತೆ ರೈಲಿನ ಎಲ್ಲಾ ಸಿಬ್ಬಂದಿಗಳು ಮಹಿಳೆಯರೇ ಆಗಿದ್ದರು. ರೈಲ್ವೆ ಇಂತಹ ವ್ಯವಸ್ಥೆ ಮಾಡುವ ಮೂಲಕ ಮಹಿಳೆಯರಿಗೆ ಗೌರವ ಸಲ್ಲಿಸಿತು.

 ಬೆಂಗಳೂರಿನ ಸಬ್‌ಅರ್ಬನ್ ರೈಲು ಕಾರಿಡಾರ್‌ಗಳಿಗೆ ಹೂವುಗಳ ಹೆಸರು ಬೆಂಗಳೂರಿನ ಸಬ್‌ಅರ್ಬನ್ ರೈಲು ಕಾರಿಡಾರ್‌ಗಳಿಗೆ ಹೂವುಗಳ ಹೆಸರು

ಮಹಿಳಾ ದಿನದ ಅಂಗವಾಗಿ ರಂಗೋಲಿ, ಅಲಂಕಾರಿಕ ಉಡುಪು ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು.

ಬಜೆಟ್; ದಿ. ಸುರೇಶ್ ಅಂಗಡಿ ಕನಸಿನ ಯೋಜನೆಗೆ ಅನುದಾನ ಬಜೆಟ್; ದಿ. ಸುರೇಶ್ ಅಂಗಡಿ ಕನಸಿನ ಯೋಜನೆಗೆ ಅನುದಾನ

ವೇದಿಕೆ ಕಾರ್ಯಕ್ರಮದಲ್ಲಿ ನೈಋತ್ಯ ರೈಲ್ವೆ ಜನರಲ್ ಮ್ಯಾನೇಜರ್ ಅಜಯ್ ಕುಮಾರ್ ಸಿಂಗ್ ಉದ್ಘಾಟಿಸಿದರು. ಹುಬ್ಬಳ್ಳಿ ಮಾತ್ರವಲ್ಲ ಸೋಮವಾರ ಭಾರತೀಯ ರೈಲ್ವೆ ದೇಶದ ವಿವಿಧ ನಿಲ್ದಾಣಗಳಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಕಾರ್ಯಕ್ರಮ ಆಯೋಜನೆ ಮಾಡಿತ್ತು.

train

Recommended Video

Karnataka Budget 2021 : ಯಡಿಯೂರಪ್ಪ ಅವರ 2021 ಬಜೆಟ್ ! | Oneindia Kannada

ಬೆಂಗಳೂರು, ಮುಂಬೈ ಸೇರಿದಂತೆ ದೇಶದ ವಿವಿಧ ನಗರದಲ್ಲಿ ಸಂಪೂರ್ಣ ಮಹಿಳಾ ಸಿಬ್ಬಂದಿಗಳೇ ರೈಲನ್ನು ಓಡಿಸುವ ಮೂಲಕ ಅವಕಾಶ ಕೊಟ್ಟರೇ ನಾವು ಈ ಕೆಲಸ ಮಾಡಲಿದ್ದೇವೆ ಎಂದು ತೋರಿಸಿದರು.

English summary
On the occasion of International Women's Day Solapur-Dharwad special express train operated by women crew. Train run by all women crew including locopilot, gurd, TTE, RPF women personnel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X