ನಾಪತ್ತೆಯಾಗಿದ್ದ ಪೂಜಿತಾ ಹುಬ್ಬಳ್ಳಿಯಲ್ಲಿ ಪತ್ತೆಯಾಗಿದ್ದು ಹೇಗೆ?

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಆಗಸ್ಟ್ 28 : ಬೆಂಗಳೂರಿನಿಂದ ನಾಪತ್ತೆಯಾಗಿದ್ದ 8ನೇ ತರಗತಿ ವಿದ್ಯಾರ್ಥಿನಿ ಎಂ.ಕೆ.ಪೂಜಿತಾ ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ರವಿವಾರ ಪತ್ತೆಯಾಗಿದ್ದಾಳೆ.

ದಾದರ್‌ನಿಂದ-ಬೆಂಗಳೂರಿಗೆ ತೆರಳುತ್ತಿದ್ದ ರೈಲಿನ ಕಾಯ್ದಿರಿಸಿದ ಬೋಗಿಯ ಸ್ಲೀಪರ್ ಕೋಚ್‌ನಲ್ಲಿ ಮಲಗಿದ್ದಾಗ ಆಕೆಯನ್ನು, ಸಂಬಂಧಿ ವಿನೋದ್ ಎಂಬುವವರು ಪತ್ತೆ ಹಚ್ಚಿದ್ದಾರೆ.[ಹುಬ್ಬಳ್ಳಿಯಲ್ಲಿ ಸುರಕ್ಷಿತವಾಗಿ ಪತ್ತೆಯಾದ ಪೂಜಿತ]

All is well Bengaluru girl Pujitha traced in Hubballi

ರೈಲ್ವೆ ಪೊಲೀಸರು ಕೆಲ ದಾಖಲಾತಿಗಳಿಗೆ ಸಹಿ ಹಾಕಿಸಿಕೊಂಡು ನಂತರ ಪೂಜಿತಾಳನ್ನು ಅವರ ಪೋಷಕರಿಗೆ ಒಪ್ಪಿಸಿದ್ದಾರೆ. ಸದ್ಯ, ಪೂಜಿತಾ ಅವರ ದೊಡ್ಡಮ್ಮ ಸವಿತಾ ಹಳ್ಳದ್ ಎಂಬುವವರ ಮನೆಯಲ್ಲಿದ್ದಾಳೆ.[ಪೂಜಿತಾ ನಿಗೂಢ ನಾಪತ್ತೆ]

ಸಂಜೆಯ ಹೊತ್ತಿಗೆ ಬೆಂಗಳೂರಿನಿಂದ ಪೂಜಿತಾ ತಂದೆ-ತಾಯಿ ಬಂದ ನಂತರ ಬೆಂಗಳೂರಿಗೆ ತೆರಳಲಿದ್ದಾಳೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
All is well. Poojitha was traced in Hubballi on Sunday, August 28, 2016. It is said that she was found in a Mumbai bound train by her relatives. 13-year-old girl M.K.Puujita missing from Bengaluru.
Please Wait while comments are loading...