ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ; ಕೋವಿಡ್ ರೋಗಿಗಳ ಸಾವಿಗೆ ಆಕ್ಸಿಜನ್ ಕೊರತೆ ಕಾರಣವಲ್ಲ

|
Google Oneindia Kannada News

ಹುಬ್ಬಳ್ಳಿ, ಮೇ 05; ಹುಬ್ಬಳ್ಳಿಯ ಲೈಫ್ ಲೈನ್ ಆಸ್ಪತ್ರೆಯಲ್ಲಿ ಬಹುದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಮಹಿಳೆ ಹಾಗೂ ಮೂರು ಜನ ಪುರುಷರು ಸೇರಿ 5 ಜನ ಕೋವಿಡ್ ಸೋಂಕಿತರು ಮಂಗಳವಾರ ಸಂಜೆ ಮೃತಪಟ್ಟಿದ್ದಾರೆ. ರೋಗಿಗಳ ಸಾವಿಗೆ ಆಕ್ಸಿಜನ್ ಕೊರತೆ ಕಾರಣವಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಯಶವಂತ ಮದೀನಕರ ಈ ಕುರಿತು ಪ್ರಕಟಣೆ ಹೊರಡಿಸಿದ್ದಾರೆ. "ಆಸ್ಪತ್ರೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಆಕ್ಸಿಜನ್ ಸೌಲಭ್ಯವಿದೆ. ಸ್ವತಃ ತಾವೇ ಆಸ್ಪತ್ರೆಯಲ್ಲಿ ಪರಿಶೀಲನೆ‌ ಮಾಡಿದ್ದು, ಆಕ್ಸಿಜನ್ ಕೊರತೆ ಆಗಿರುವುದು ಕಂಡಿಬಂದಿಲ್ಲ" ಎಂದು ಹೇಳಿದ್ದಾರೆ.

ಆಕ್ಸಿಜನ್, ಬೆಡ್; ಧಾರವಾಡದ ಜಿಲ್ಲೆಯ ಪರಿಸ್ಥಿತಿ ಹೇಗಿದೆ? ಆಕ್ಸಿಜನ್, ಬೆಡ್; ಧಾರವಾಡದ ಜಿಲ್ಲೆಯ ಪರಿಸ್ಥಿತಿ ಹೇಗಿದೆ?

ಲೈಫ್ ಲೈನ್ ಆಸ್ಪತ್ರೆಯಲ್ಲಿ ಒಟ್ಟು 21 ಜನ ಕೋವಿಡ್ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯಲ್ಲಿ ಆಕ್ಸಿಜನ್ ಇರುವ 30 ಜಂಬೂ ಸಿಲಿಂಡರ್ ಇವೆ. 2 ಕೆಎಲ್ ಸಾಮರ್ಥ್ಯದ ಒಂದು ಆಕ್ಸಿಜನ್ ಕಂಟೇನರ್ ಇದೆ ಹಾಗೂ ನೈಸರ್ಗಿಕವಾಗಿ ಗಾಳಿ ಬಳಸಿಕೊಂಡು ಪ್ರತಿ ನಿಮಿಷಕ್ಕೆ‌ 85 ಸಾವಿರ ಲೀಟರ್‌ ಆಕ್ಸಿಜನ್ ಉತ್ಪಾದಿಸುವ (O2 ಕಾನ್ಸ್‌ನ್‌ ಟ್ರೇಟೆಡ್) ಘಟಕವನ್ನು ಲೈಫ್ ಲೈನ್ ಆಸ್ಪತ್ರೆ ಹೊಂದಿದೆ.

ಆಕ್ಸಿಜನ್ ಲಭ್ಯತೆ ಬಗ್ಗೆ ಶ್ವೇತಪತ್ರ ಹೊರಡಿಸಿ; ಯು. ಟಿ. ಖಾದರ್ಆಕ್ಸಿಜನ್ ಲಭ್ಯತೆ ಬಗ್ಗೆ ಶ್ವೇತಪತ್ರ ಹೊರಡಿಸಿ; ಯು. ಟಿ. ಖಾದರ್

Oxygen shortage

ಪ್ರತಿ ಐಸಿಯುವಿನಲ್ಲಿ ಆಕ್ಸಿಜನ್ ಕೊರತೆ ಉಂಟಾದಲ್ಲಿ ಎಚ್ಚರಿಸಲು ಅಲಾರಮಿಂಗ್ ಸಿಸ್ಟಮ್‌ ಸಹ ಅಳವಡಿಸಲಾಗಿದೆ. ಆದ್ದರಿಂದ ಮಂಗಳವಾರ ಸಂಭವಿಸಿರುವ ಕೋವಿಡ್ ಸೋಂಕಿತರ ಸಾವಿಗೆ ಆಕ್ಸಿಜನ್ ಕೊರತೆ ಕಾರಣವಲ್ಲ ಎಂಬುದು‌ ಪ್ರಾಥಮಿಕ‌ ತನಿಖೆಯಿಂದ ತಿಳಿದು ಬಂದಿದೆ.

ಕರ್ನಾಟಕ; 9 ಜಿಲ್ಲೆಯಲ್ಲಿ ಆಕ್ಸಿಜನ್ ಉತ್ಪಾದನಾ ಪ್ಲಾಂಟ್‌ಗಳೇ ಇಲ್ಲ! ಕರ್ನಾಟಕ; 9 ಜಿಲ್ಲೆಯಲ್ಲಿ ಆಕ್ಸಿಜನ್ ಉತ್ಪಾದನಾ ಪ್ಲಾಂಟ್‌ಗಳೇ ಇಲ್ಲ!

ರೋಗಿಗಳ ಸಾವಿನ ಕುರಿತು ಡೆತ್ ಅಡಿಟ್ ಕಮಿಟಿಯಿಂದ ತನಿಖೆ ಮಾಡಲಾಗುವುದು ಎಂದು ಸಹ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಯಶವಂತ ಮದೀನಕರ ತಿಳಿಸಿದ್ದಾರೆ.

English summary
5 COVID patients died in Hubballi private hospital. District administration clarified that there is no oxygen shortage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X