• search
 • Live TV
ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹುಬ್ಬಳ್ಳಿ; ಎಲ್ಲಾ ಕೋವಿಡ್ ಮಾದರಿ ವರದಿ ನೆಗೆಟಿವ್!

|

ಹುಬ್ಬಳ್ಳಿ, ನವೆಂಬರ್ 18: ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಮಂಗಳವಾರ ಜಿಲ್ಲೆಯಲ್ಲಿ 5 ಹೊಸ ಪ್ರಕರಣಗಳು ಮಾತ್ರ ದಾಖಲಾಗಿವೆ.

ನವೆಂಬರ್ 15ರಂದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ 453 ಮಾದರಿಗಳ ಕೋವಿಡ್ ಪರೀಕ್ಷೆಯನ್ನು ನಡೆಸಲಾಗಿದೆ. ಎಲ್ಲಾ ಮಾದರಿಗಳ ವರದಿ ನೆಗೆಟಿವ್ ಬಂದಿದೆ.

ಕರ್ನಾಟಕ; 1336 ಹೊಸ ಕೋವಿಡ್ ಪ್ರಕರಣ ಪತ್ತೆ

ಕಿಮ್ಸ್‌ನಲ್ಲಿ ನವೆಂಬರ್ 15ರಂದು 296 ಗಂಟಲು, ಮೂಗಿನ ದ್ರವದ ಮಾದರಿಗಳನ್ನು ಪಡೆಯಲಾಗಿತ್ತು. ಇದಕ್ಕೂ ಮೊದಲು ಬಾಕಿ ಇದ್ದ 157 ಮಾದರಿ ಸೇರಿ ಒಟ್ಟು 453 ಮಾದರಿ ಪರೀಕ್ಷೆ ಮಾಡಲಾಗಿತ್ತು.

ಬೆಂಗಳೂರು; 4 ಸಾವಿರದ ದಾಟಿದ ಕೋವಿಡ್ ಸಾವಿನ ಸಂಖ್ಯೆ

ಧಾರವಾಡದ ಮಾನಸಿಕ ಆರೋಗ್ಯ ಮತ್ತು ನರರೋಗ ಸಂಶೋಧನಾ ಕೇಂದ್ರ (ಡಿಮ್ಹಾನ್ಸ್‌)ನಲ್ಲಿ 673 ಮಾದರಿಗಳ ಪರೀಕ್ಷೆ ನಡೆಸಲಾಗಿದ್ದು, 2 ಮಾತ್ರ ಪಾಸಿಟಿವ್ ಆಗಿದೆ.

   Lakshmi Vilas Bank ನಿಷೇಧಕ್ಕೊಳಗಾಗಿದೆ , ಹಾಗಿದ್ದರೆ ಜನರ ದುಡ್ಡು ಎಲ್ಲಿ | Oneindia Kannada

   ಹುಬ್ಬಳ್ಳಿ-ಧಾರವಾಡ ಮಂದಿಗೆ ರೈಲ್ವೆಯಿಂದ ಸಿಹಿ ಸುದ್ದಿ

   ಡಿಮ್ಹಾನ್ಸ್ ನೋಡೆಲ್ ಅಧಿಕಾರಿ ಡಾ. ರಾಘವೇಂದ್ರ ನಾಯಕ್ ಈ ಕುರಿತು ಮಾಹಿತಿ ನೀಡಿದರು. "ನವೆಂಬರ್ 14ರಂದು 1265 ಮಾದರಿಗಳ ಪರೀಕ್ಷೆ ಮಾಡಲಾಗಿದ್ದು, 8 ಪ್ರಕರಣ ಮಾತ್ರ ಪಾಸಿಟಿವ್ ಬಂದಿದೆ" ಎಂದು ಹೇಳಿದರು.

   ನವೆಂಬರ್ 17ರ ಮಂಗಳವಾರ ಧಾರವಾಡ ಜಿಲ್ಲೆಯಲ್ಲಿ 5 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಜಿಲ್ಲೆಯಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 119, ಜಿಲ್ಲೆಯಲ್ಲಿ ಇದುವರೆಗೂ ದಾಖಲಾದ ಕೋವಿಡ್ ಪ್ರಕರಣಗಳ ಒಟ್ಟು ಸಂಖ್ಯೆ 21,173. ಇದುವರೆಗೂ 589 ಜನರು ಮೃತಪಟ್ಟಿದ್ದಾರೆ.

   English summary
   Karnataka Institute of Medical Science (KIMS) in Hubballi tested 453 COVID 19 samples on November 15, 2020 all tested negative.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X