ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಕ್‌ಡೌನ್‌ನಿಂದ ಮದುವೆ ಮುಂದಕ್ಕೆ: ಯುವಕ ಆತ್ಮಹತ್ಯೆ

|
Google Oneindia Kannada News

ಬೆಂಗಳೂರು, ಮೇ 25: ಕೊರೊನಾ ಲಾಕ್‌ಡೌನ್‌ನಿಂದ ತನ್ನ ಮದುವೆ ಮುಂದಕ್ಕೆ ಹೋಯ್ತು ಎನ್ನುವ ಕಾರಣಕ್ಕೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

Recommended Video

ಯಡಿಯೂರಪ್ಪನವರೇ ಹೆಣ್ಣು ಮಕ್ಕಳ ಶಾಪಕ್ಕೆ ಗುರಿಯಾಗಬೇಡಿ,ಮದ್ಯ ಮಾರಾಟ ನಿಲ್ಲಿಸಿ | Oneindia Kannada

ಶರಣಪ್ಪ ಫಕ್ಕೀರಪ್ಪ ಹಡಪದ ಹುಬ್ಬಳ್ಳಿಯ ದೇವಾಂಗ ಪೇಟೆ ನಿವಾಸಿಯಾಗಿದ್ದಾರೆ. 29 ವರ್ಷದ ಈ ಯುವಕ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಚಿಕ್ಕಮಗಳೂರು: ಐಸೋಲೇಷನ್ ನಲ್ಲಿದ್ದ ವ್ಯಕ್ತಿ ಆತ್ಮಹತ್ಯೆಗೆ ಶರಣುಚಿಕ್ಕಮಗಳೂರು: ಐಸೋಲೇಷನ್ ನಲ್ಲಿದ್ದ ವ್ಯಕ್ತಿ ಆತ್ಮಹತ್ಯೆಗೆ ಶರಣು

ಕುಟುಂಬದವರು ತಮ್ಮ ಮದುವೆಯನ್ನು ಮುಂದಕ್ಕೆ ಹಾಕಿದರು ಎನ್ನುವ ಕಾರಣಕ್ಕೆ ಈ ಯುವಕ ಸಾವಿನ ಹಾದಿ ಹಿಡಿದಿದ್ದಾರೆ. ಶರಣಪ್ಪ ಫಕ್ಕೀರಪ್ಪ ಹಡಪಗೆ ಮದುವೆ ನಿಶ್ಚಯ ಆಗಿತ್ತು. ಆದರೆ, ಲಾಕ್‌ಡೌನ್ ಇದ್ದ ಕಾರಣ ಮನೆಯವರು ಕಾರ್ಯಕ್ರಮವನ್ನು ಮುಂದಕ್ಕೆ ಹಾಕಿದರು.

29 Year Old Hubli Boy Committed Suicide For Postponed His Marriage

ಸರ್ಕಾರ ಕಡಿಮೆ ಜನರನ್ನು ಇಟ್ಟುಕೊಂಡು ಮದುವೆ ಮಾಡಲು ಅವಕಾಶ ನೀಡಿದ್ದರೂ, ಈ ಸಮಯದಲ್ಲಿ ಮದುವೆ ಬೇಡ ಎಂದು ಕುಟುಂಬದವರು ತೀರ್ಮಾನ ಮಾಡಿದರು. ಆದರೆ, ಇದು ಮದುಮಗ ಶರಣಪ್ಪ ಫಕ್ಕೀರಪ್ಪ ಹಡಪಗೆ ಇಷ್ಟ ಇರಲಿಲ್ಲ.

ಮದುವೆ ಮುಂದಕ್ಕೆ ಹಾಕಿದ್ದ ಕಾರಣ ಕುಟುಂಬದವರ ಜೊತೆಗೆ ಶರಣಪ್ಪ ಫಕ್ಕೀರಪ್ಪ ಹಡಪದ ಜಗಳ ಮಾಡಿಕೊಂಡಿದ್ದರು. ಇದೇ ವಿಷಯಕ್ಕೆ ಗಲಾಟೆಯಾಗಿ ಮನೆ ಬಿಟ್ಟು ಹೋಗಿದ್ದ. ಏನೋ ಸಿಟ್ಟಿನಲ್ಲಿ ಮನೆ ಬಿಟ್ಟು ಹೋಗಿರೋಬಹುದು ಎಂದು ಮನೆಯವರು ಸುಮ್ಮನಾಗಿದ್ದರು. ಆದರೆ, ಯುವಕ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

English summary
A 29 year old boy committed suicide for postponed his marriage in Hubli. parents postponed marriage due to lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X