ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಪರಿಣಾಮ; ಹುಬ್ಬಳ್ಳಿಯಲ್ಲಿ ಹನ್ನೊಂದು ಕೈದಿಗಳ ಬಿಡುಗಡೆ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಏಪ್ರಿಲ್ 01: ಏಳು ವರ್ಷ ಹಾಗೂ ಏಳು ವರ್ಷಕ್ಕಿಂತ ಕಡಿಮೆ ಶಿಕ್ಷೆಗೆ ಒಳಗಾದ ಅಪರಾಧ ಪ್ರಕರಣ ಹೊಂದಿದ್ದ 11 ಜನ ಕೈದಿಗಳನ್ನು ಇಲ್ಲಿನ ಉಪ ಕಾರಾಗೃಹದಿಂದ ಇಂದು ಬಿಡುಗಡೆ ಮಾಡಲಾಗಿದೆ.

ಕೊರೊನೊ ಸೋಂಕು ವ್ಯಾಪಕವಾಗಿ ಹರಡುವ ಆತಂಕವಿರುವ ಕಾರಣ ಕಾರಾಗೃಹದಲ್ಲಿರುವ ಕೈದಿಗಳ ಸಂಖ್ಯೆ ಕಡಿಮೆ ಮಾಡುವ ಉದ್ದೇಶದಿಂದ ಏಳು ವರ್ಷಗಳಿಗಿಂತ ಕಡಿಮೆ ಶಿಕ್ಷೆ ಎದುರಿಸುತ್ತಿರುವ ಕೈದಿಗಳ ಪಟ್ಟಿ ಸಿದ್ಧಪಡಿಸುವಂತೆ ಎಲ್ಲ ಜೈಲುಗಳ ಮುಖ್ಯಸ್ಥರಿಗೆ ಮೇಲಧಿಕಾರಿಗಳು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಇಲ್ಲಿನ ಉಪ ಕಾರಾಗೃಹದ ಅಧೀಕ್ಷಕ ಅಶೋಕ ಭಜಂತ್ರಿ ಅವರು 34 ಜನ ಕೈದಿಗಳ ಪಟ್ಟಿ ಕಳುಹಿಸಿದ್ದರು. ಇದರಲ್ಲಿ 11 ಕೈದಿಗಳ ಬಿಡುಗಡೆಗೆ ಮೇಲಧಿಕಾರಿಗಳು ಸಮ್ಮತಿ ಸೂಚಿಸಿದ್ದಾರೆ.

11 Prisoners Released From Hubballi Prison oday

'ಏಳು ವರ್ಷಕ್ಕಿಂತ ಕಡಿಮೆ ಶಿಕ್ಷೆಗೆ ಒಳಗಾದ ಇನ್ನಷ್ಟು ಕೈದಿಗಳ ಪಟ್ಟಿಯನ್ನು ಮತ್ತೆ ಮೇಲಧಿಕಾರಿಗಳಿಗೆ ಕಳುಹಿಸಲಾಗುವುದು. ಅವರ ಅನುಮತಿ ಸಿಕ್ಕ ಬಳಿಕ ಮತ್ತಷ್ಟು ಕೈದಿಗಳನ್ನು ಬಿಡುಗಡೆ ಮಾಡಲಾಗುವುದು. ಇದು ನಿರಂತರವಾಗಿ ನಡೆಯುವ ಪ್ರಕ್ರಿಯೆ. ಕೈದಿಗಳನ್ನು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗುತ್ತಿದೆ' ಎಂದು ಭಜಂತ್ರಿ ತಿಳಿಸಿದ್ದಾರೆ.

English summary
The 11 prisoners who are 7 and below seven years imprisonment released today by hubballi prison.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X