ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Sankranthi Special: ಹುಬ್ಬಳ್ಳಿಯಿಂದ 10 ವಿಶೇಷ ರೈಲುಗಳ ಸಂಚಾರ; ವೇಳಾಪಟ್ಟಿ

|
Google Oneindia Kannada News

ಹುಬ್ಬಳ್ಳಿ, ಡಿಸೆಂಬರ್ 09: ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗ 10 ವಿಶೇಷ ರೈಲುಗಳನ್ನು ಓಡಿಸುವುದಾಗಿ ಘೋಷಣೆ ಮಾಡಿದೆ. ಕರ್ನಾಟಕ ಮತ್ತು ಇತರ ರಾಜ್ಯಗಳ ವಿವಿಧ ಪ್ರದೇಶಗಳಿಗೆ ರೈಲುಗಳು ಸಂಚಾರ ನಡೆಸಲಿವೆ.

ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಸಾಮಾನ್ಯ ರೈಲುಗಳ ಸಂಚಾರ ಸ್ಥಗಿತವಾಗಿದೆ. ಆದ್ದರಿಂದ, ಬೇಡಿಕೆ ಇರುವ ಮಾರ್ಗದಲ್ಲಿ ಭಾರತೀಯ ರೈಲ್ವೆ ವಿಶೇಷ ರೈಲುಗಳನ್ನು ಓಡಿಸುತ್ತಿದೆ.

ಬೆಂಗಳೂರಿಗೆ ಬರಲು ಹೊಸ 12 ರೈಲು; ವೇಳಾಪಟ್ಟಿ ಬೆಂಗಳೂರಿಗೆ ಬರಲು ಹೊಸ 12 ರೈಲು; ವೇಳಾಪಟ್ಟಿ

ವಿಶೇಷ ರೈಲುಗಳನ್ನು ಓಡಿಸುವಂತೆ ಹಲವು ನಗರದ ಜನರ ಬೇಡಿಕೆ ಇಡುತ್ತಿದ್ದಾರೆ. ನೈಋತ್ಯ ರೈಲ್ವೆ ಪ್ರಾಯೋಗಿಕವಾಗಿ 10 ದಿನಗಳ ಕಾಲ ರೈಲು ಓಡಿಸುತ್ತದೆ. ಪ್ರಯಾಣಿಕರ ಪ್ರತಿಕ್ರಿಯೆ ನೋಡಿಕೊಂಡು ಮುಂದಿನ ತೀರ್ಮಾನವನ್ನು ಕೈಗೊಳ್ಳುತ್ತದೆ.

ಮಂಗಳೂರು-ಶ್ರವಣಬೆಳಗೊಳ-ಬೆಂಗಳೂರು ರೈಲು ಮತ್ತೆ ಆರಂಭ ಮಂಗಳೂರು-ಶ್ರವಣಬೆಳಗೊಳ-ಬೆಂಗಳೂರು ರೈಲು ಮತ್ತೆ ಆರಂಭ

ಪ್ರಯಾಣಿಕರ ಅನುಕೂಲಕ್ಕಾಗಿ ಹುಬ್ಬಳ್ಳಿ ವಿಭಾಗದಿಂದ 10 ಪ್ಯಾಸೆಂಜರ್‌ ರೈಲುಗಳನ್ನು ಓಡಿಸುತ್ತಿದೆ. ಪ್ರಯಾಣಿಕರು ಈ ರೈಲುಗಳ ಸೇವೆಯನ್ನು ಬಳಸಿಕೊಳ್ಳಬೇಕು ಎಂದು ಕರೆ ನೀಡಲಾಗಿದೆ.

ಚೆನ್ನೈ-ಬೆಂಗಳೂರು ಡಬಲ್ ಡೆಕ್ಕರ್ ರೈಲು ವೇಳಾಪಟ್ಟಿ ಬದಲು ಚೆನ್ನೈ-ಬೆಂಗಳೂರು ಡಬಲ್ ಡೆಕ್ಕರ್ ರೈಲು ವೇಳಾಪಟ್ಟಿ ಬದಲು

ರೈಲುಗಳ ವಿವರಗಳು

ರೈಲುಗಳ ವಿವರಗಳು

ರೈಲು ನಂಬರ್ 07322 : ಧಾರವಾಡ-ಸೊಲ್ಹಾಪುರ ನಡುವೆ ಪ್ರತಿದಿನ. ಧಾರವಾಡದಿಂದ 17:40ಕ್ಕೆ ಹೊರಟು 3.30ಕ್ಕೆ ತಲುಪಲಿದೆ. ಉಣಕಲ್, ನವಲೂರು, ಮಿಂಚರಾಳ, ನಿಂಬಾಳ, ತಡವಾಳ ಹೊರತುಪಡಿಸಿ ಉಳಿದ ಕಡೆ ನಿಲುಗಡೆ ಇದೆ.

ರೈಲು ನಂಬರ್ 07321 : ಸೊಲ್ಹಾಪುರ-ಧಾರವಾಡ ನಡುವೆ ಪ್ರತಿದಿನ ಸಂಚಾರ. 00:40 ಹೊರಡಲಿದ್ದು, 11:05ಕ್ಕೆ ಆಗಮಿಸಲಿದೆ. ತಡವಾಳ, ನಿಂಬಾಳ, ಮಿಂಚನಾಳ, ನವಲೂರು, ಉಣಕಲ್ ಹೊರತುಪಡಿಸಿ ಉಳಿದ ಕಡೆ ನಿಲುಗಡೆ.

ಹುಬ್ಬಳ್ಳಿ-ಸೊಲ್ಹಾಪುರ

ಹುಬ್ಬಳ್ಳಿ-ಸೊಲ್ಹಾಪುರ

ರೈಲು ನಂಬರ್ 07332 : ಹುಬ್ಬಳ್ಳಿ-ಸೊಲ್ಹಾಪುರ ನಡುವೆ ಪ್ರತಿದಿನ ಸಂಚಾರ ನಡೆಸಲಿದೆ. 13:00 ಗಂಟೆಗೆ ಹೊರಡಲಿದ್ದು, 22:40ಕ್ಕೆ ತಲುಪಲಿದೆ.

ಸೊಲ್ಹಾಪುರ-ಹುಬ್ಬಳ್ಳಿ ನಡುವೆ 07331 ರೈಲು ಪ್ರತಿದಿನ ಸಂಚಾರ ನಡೆಸಲಿದೆ. 4:45ಕ್ಕೆ ಹೊರಡಲಿದ್ದು, 15:15ಕ್ಕೆ ತಲುಪಲಿದೆ.

ಹುಬ್ಬಳ್ಳಿ-ಬಳ್ಳಾರಿ ರೈಲು

ಹುಬ್ಬಳ್ಳಿ-ಬಳ್ಳಾರಿ ರೈಲು

07337 ರೈಲು ಪ್ರತಿ ದಿನ ಹುಬ್ಬಳ್ಳಿ-ಬಳ್ಳಾರಿ ನಡುವೆ ಸಂಚಾರ ನಡೆಸಲಿದೆ. 8:00 ಗಂಟೆಗೆ ಹೊರಡಲಿದ್ದು, 13:00 ಗಂಟೆಗೆ ತಲುಪಲಿದೆ. ಕುಸುಗಲ್, ಹೆಬಸೂರ, ಅಣ್ಣಿಗೇರಿ, ಹುಲಕೋಟಿ, ಗದಗ, ಕೊಪ್ಪಳ, ಗಿಣಿಗೇರಾ ಮುಂತಾದ ಕಡೆ ನಿಲುಗಡೆ ಇದೆ.

07338 ಬಳ್ಳಾರಿ-ಹುಬ್ಬಳ್ಳಿ ನಡುವೆ ಪ್ರತಿದಿನ ಸಂಚಾರ ನಡೆಸಲಿದೆ. 16:00ಕ್ಕೆ ಹೊರಟು, 21:00ಕ್ಕೆ ತಲುಪಲಿದೆ.

Recommended Video

Shimoga: ಗ್ರಾಮದಲ್ಲಿ ಪತ್ತೆಯಾಯ್ತು 8 ಅಡಿ ಉದ್ದದ ಕಾಳಿಂಗ ಸರ್ಪ! | Oneindia Kannada
ವಾಸ್ಕೋ ಡ ಗಾಮಾ-ಕುಲೇಮ್

ವಾಸ್ಕೋ ಡ ಗಾಮಾ-ಕುಲೇಮ್

07342 ನಂಬರ್ ರೈಲು ವಾಸ್ಕೋ ಡ ಗಾಮಾ ಕುಲೇಮ್ ನಡುವೆ ಪ್ರತಿದಿನ ಸಂಚಾರ ನಡೆಸಲಿದೆ. 7:30ಕ್ಕೆ ಹೊರಟು 9:10ಕ್ಕೆ ತಲುಪಲಿದೆ. 07341 ರೈಲು ಕುಲೇಮ್ ಮತ್ತು ವಾಸ್ಕೋ ಡ ಗಾಮ ನಡುವೆ ಪ್ರತಿದಿನ ಸಂಚಾರ ನಡೆಸಲಿದೆ. 6.30ಕ್ಕೆ ಹೊರಟು, 8.20ಕ್ಕೆ ತಲುಪಲಿದೆ.

07343 ವಾಸ್ಕೋ ಡ ಗಾಮ-ಕುಲೇಮ್ ನಡುವೆ ಪ್ರತಿದಿನ ಸಂಚಾರ ನಡೆಸಲಿದೆ. 17.30ಕ್ಕೆ ಹೊರಟು, 19:10ಕ್ಕೆ ತಲುಪಲಿದೆ. ಕುಲೇಮ್-ವಾಸ್ಕೊ ಡ ಗಾಮ ನಡುವೆ 07344 ನಂಬರ್ ರೈಲು ಸಂಚಾರ ನಡೆಸಲಿದೆ. 17:15ಕ್ಕೆ ಹೊರಟು, 19:00 ತಲುಪಲಿದೆ.

English summary
South Western railways running 10 more special trains from Hubballi division, Karnataka. Here are the list of trains.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X