ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಳು ವರ್ಷದ ಕಂದಮ್ಮ ಓಡಾಡಲು ನೀವೆ ಊರುಗೋಲಾಗಿ

Google Oneindia Kannada News

ತನ್ನ ಏಳು ವರ್ಷದ ಅಣ್ಣನೊಂದಿನ ಪುಟಾಣಿ ಬಾಲಕಿ ಹಿದಾಯಳ ನೋಟ ನಿಮ್ಮ ಗಮನ ಸೆಳೆಯಬಹುದು. ಆದರೆ ಆ ಕೂಡಲೇ ಈ ಮಗು ಮೊಹಮ್ಮದ್ ಹಿಲಾಲ್‌ನ ದೇಹಾಕಾರದಲ್ಲಿ ವಿಭಿನ್ನತೆ ಕಂಡಾಗ ನೀವು ಆಘಾತದ ಸ್ಥಿತಿಗೆ ಒಳಗಾಗುತ್ತೀರಿ. ಹಿಲಾಲ್ ಅತ್ಯಂತ ಮುದ್ದಾದ ಮಗು. ಆದರೆ ಆತನಿನ್ನೂ ಆರು ತಿಂಗಳ ಕಂದಮ್ಮನಾಗಿದ್ದಾಗ ಅವನ ತಲೆ ದೊಡ್ಡದಾಗಿ ಬೆಳೆಯುತ್ತಿರುವುದನ್ನು ಪೋಷಕರು ಗಮನಿಸಿದರು. ಸ್ಥಳೀಯ ಆಸ್ಪತ್ರೆಯೊಂದರಲ್ಲಿ ತಪಾಸಣೆ ನಡೆಸಿದ ವೈದ್ಯರಿಗೆ ಅದು ಹೈಡ್ರೋಸೆಫಾಲಸ್ ಎಂದು ಪತ್ತೆಯಾಯಿತು. ಅಪರೂಪದ ಈ ಕಾಯಿಲೆ ಹಿಲಾಲ್‌ನ ಬದುಕಿನ ಖುಷಿಯನ್ನು ಕಿತ್ತುಕೊಂಡಿತು. ಏಳು ವರ್ಷಗಳಿಂದಲೂ ಅದು ಆತನನ್ನು ಕಾಡುತ್ತಲೇ ಇದೆ.

Recommended Video

ಪ್ರಶಂಸೆಗೆ ಕಾರಣವಾಯ್ತು ಕುಮಾರಸ್ವಾಮಿ ನಡೆ..!

'ಇದುವರೆಗೂ ನಾವು ಆತನಿಂದ ಕೇಳಿದ ಪದಗಳೆಂದರೆ ಅಮ್ಮ ಮತ್ತು ಅಪ್ಪ ಮಾತ್ರ. ಅದೂ ಆತನ ಅಸ್ಪಷ್ಟ ತೊದಲು ನುಡಿಯಲ್ಲಿ. ಏಳು ವರ್ಷವಾದಾಗ ಇತರೆ ಮಕ್ಕಳು ಆಡುವುದನ್ನು, ಶಾಲೆಗೆ ಹೋಗುವುದನ್ನು ಮತ್ತು ತಮ್ಮ ಸಹಜ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದನ್ನು ನೋಡುತ್ತೇವೆ. ನಮ್ಮ ಹಿಲಾಲ್ ಈ ಸ್ಥಿತಿಯಲ್ಲಿ ಇರುವುದು ನೋವುಂಟುಮಾಡುತ್ತಿದೆ. ಅವನಿಗೆ ಸರಿಯಾಗಿ ಮಾತನಾಡಲು ಸಾಧ್ಯವಿಲ್ಲ ಅಥವಾ ತಲೆಯನ್ನು ತಿರುಗಿಸಲಾಗದು ಅಥವಾ ಎದ್ದು ಓಡಾಡಲೂ ಆಗುವುದಿಲ್ಲ. ಆತನ ಭವಿಷ್ಯದ ಬಗ್ಗೆ ನಾವು ಅಪಾರ ಕನಸು ಕಂಡಿದ್ದೆವು. ಆದರೆ ಎಲ್ಲವೂ ಈಗ ಛಿದ್ರ ಛಿದ್ರವಾದಂತೆ ಅನಿಸುತ್ತಿದೆ' ಎಂದು ಹಿಲಾಲ್‌ನ ಕುಟುಂಬ ದುಃಖ ಹಂಚಿಕೊಂಡಿತು.

Hilal Needs Your Help To Get Rid From His Rare Disease

ಹೈಡ್ರೋಸೆಫಾಲಸ್- ಹಿಲಾಲ್‌ನ ಜೀವಕ್ಕೆ ಮಾರಕವಾಗುವಂತಹ ಕಾಯಿಲೆ. ಮಿದುಳಿನಲ್ಲಿ ಅತಿಯಾದ ದ್ರವ ಸೇರಿಕೊಂಡ ಸ್ಥಿತಿ ಇದು. ಬಾಹ್ಯದಿಂದ ಆತನ ತಲೆ ಊದಿಕೊಂಡಿದೆ. ಆಂತರಿಕವಾಗಿ ಅವನ ಮಿದುಳಿನೊಳಗಿನ ಅತೀವ ಒತ್ತಡ ಆತನ ಚಟುವಟಿಕೆಗಳಿಗೆ ತೊಂದರೆ ಉಂಟುಮಾಡುತ್ತಿದೆ. ಹಿಲಾಲ್ ಆರು ತಿಂಗಳ ಮಗುವಾಗಿದ್ದಾಗ ಆತನನ್ನು ಈ ಸಮಸ್ಯೆಯಿಂದ ಗುಣಪಡಿಸುವಂತಹ ಯಾವುದೇ ಗಂಭೀರ ಶಸ್ತ್ರಚಿಕಿತ್ಸೆಗೆ ಒಳಪಡಿಸಲು ಸಾಧ್ಯವಿಲ್ಲದಷ್ಟು ತೀರಾ ಚಿಕ್ಕವನಾಗಿದ್ದ. ಆ ಶಸ್ತ್ರಚಿಕಿತ್ಸೆ ಅಪಾಯಕಾರಿಯಾಗಿದ್ದು, ಆತನ ಅಂಗಾಂಗಗಳು ವಿಫಲವಾಗುವ ಅಥವಾ ಆತ ಕೋಮಕ್ಕೆ ಜಾರುವ ಅಪಾಯವಿತ್ತು. ಆತನ ಪೋಷಕರು ಭಯಭೀತರಾಗಿದ್ದರು. ಅದೇನೇ ಆದರೂ ಅವರಿಗೆ ತಮ್ಮ ಮಗುವನ್ನು ಕಳೆದುಕೊಳ್ಳಲು ಇಷ್ಟವಿರಲಿಲ್ಲ. ಆದರೆ ಈಗ ಚೆನ್ನೈನ ಫೋರ್ಟಿಸ್ ಮಲರ್ ಆಸ್ಪತ್ರೆಯ ವೈದ್ಯರು, ಹಿಲಾಲ್‌ಗೆ ಈಗ ಸರ್ಜರಿ ಮಾಡಲು ಸೂಕ್ತ ಕಾಲ. ಇಲ್ಲದಿದ್ದರೆ, ಆತನ ಆರೋಗ್ಯ ಸ್ಥಿತಿ ಮತ್ತು ಸಮಸ್ಯೆಗಳು ಅವರ ನಿಯಂತ್ರಣ ತಪ್ಪಿ ಹೋಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

'ನಮ್ಮ ಹಿಲಾಲ್‌ನಂತೆಯೇ ದೆಹಲಿಯ ಮಗುವೊಂದು ಸಮಸ್ಯೆ ಹೊಂದಿದ್ದರೂ ಅದರಿಂದ ಗುಣವಾದ ಯಶಸ್ವಿ ಕಥೆಯನ್ನು ಕಂಡು ಕೇಳಿದ ಬಳಿಕ ನಮ್ಮಲ್ಲಿ ಆಶಾಕಿರಣದ ಭಾವನೆ ಮರುಕಳಿಸಿದೆ. ನಮ್ಮ ಮಗು ಕೂಡ ಗುಣವಾಗಬಲ್ಲದು ಎಂದು ಅನಿಸಿದೆ. ಅವನೂ ಆತನಿಗೆ ಯೋಗ್ಯವಾದ ಬದುಕನ್ನು ಬದುಕಬಲ್ಲ. ಅವನು ತನ್ನ ತಂಗಿ ಹಿದಾಯಳಂತೆಯೇ ನೋಡಬಲ್ಲ ಮತ್ತು ಸಹಜವಾಗಿರಬಲ್ಲ. ನಮ್ಮ ಹಿಲಾಲ್‌ಗೆ ಚಿಕಿತ್ಸೆ ನೀಡುವಲ್ಲಿ ಮತ್ತೊಂದು ದೊಡ್ಡ ಸವಾಲು ಇದೆ ಎಂಬುದು ನಮಗೆ ಅರಿವಾಗುವವರೆಗೂ ಯಾವುದೇ ಪೋಷಕರು ತಮ್ಮ ಮಕ್ಕಳನ್ನು ಕಾಣುವಂತೆ ನಾವು ಕನಸುಗಳನ್ನು ಕಟ್ಟುತ್ತಲೇ ಹೋದೆವು. ಅದು ನಮ್ಮ ಆರ್ಥಿಕ ಸ್ಥಿತಿ. ಒಂದು ಕಡೆ ವೈದ್ಯರು ಹೇಳುತ್ತಾರೆ, ಸರ್ಜರಿಯನ್ನು ಆದಷ್ಟು ಶೀಘ್ರದಲ್ಲಿಯೇ ಮಾಡಬೇಕು ಎಂದು. ಇನ್ನೊಂದೆಡೆ, ಅಷ್ಟು ಕಡಿಮೆ ಅವಧಿಯಲ್ಲಿ ನಾವು 10 ಲಕ್ಷ ರೂಪಾಯಿಯನ್ನು ಎಲ್ಲಿಂದ ಹೊಂದಿಸಿ ತರುವುದು ಎಂಬ ಬಗ್ಗೆ ನಮಗೆ ಕಿಂಚಿತ್ತೂ ತಿಳಿದಿಲ್ಲ' ಎಂದು ಹಿಲಾಲ್‌ನ ತಂದೆ ಅಬುಬಕರ್ ಕಣ್ಣೀರು ಸುರಿಸುತ್ತಾ ಗದ್ಗದಿತರಾದರು. ಹಿಲಾಲ್‌ನ ತಾಯಿ ತಮ್ಮ ಕಣ್ಣೀರನ್ನು ಹತ್ತಿಕ್ಕಿಕೊಂಡು, ಪವಾಡವೊಂದು ಆತನನ್ನು ಕಾಪಾಡಲಿದೆ ಎಂಬ ಭರವಸೆಯೊಂದಿಗೆ ಸಣ್ಣನೆ ನಗುತ್ತಾ ಹಿಲಾಲ್‌ಗೆ ಮುತ್ತಿಕ್ಕಿದರು.

Hilal Needs Your Help To Get Rid From His Rare Disease

ಸಹಾಯ ಮಾಡುವುದು ಹೇಗೆ?

ಮನೆಯಂಗಳದಲ್ಲಿ ಕೋಳಿಗಳನ್ನು ಸಾಕುತ್ತಿರುವ ಹಿಲಾಲ್‌ನ ತಂದೆಗೆ ಅಲ್ಪ ಆದಾಯ ಬರುತ್ತದೆ. ಮಗನ ಆರೋಗ್ಯ ಸುಧಾರಣೆಗಾಗಿ ಹಿಲಾಲ್‌ನ ತಾಯಿ ತಮ್ಮ ಬದುಕನ್ನು ತ್ಯಾಗಮಾಡಿದ್ದಾರೆ. ಆ ಕುಟುಂಬಕ್ಕೆ ನಿರಂತರವಾಗಿ ಆದಾಯ ಬರುವ ಯಾವುದೇ ಮೂಲವಿಲ್ಲ. ಹಿಲಾಲ್‌ಗೆ ವೆಂಟ್ರಿಕ್ಯುಲೊಪೆರಿಟೊನಿಯಲ್ (ವಿಪಿ) ಎಂಬ ಹೆಸರಿನ ಶಸ್ತ್ರಚಿಕಿತ್ಸೆಯ ಪ್ರಕ್ರಿಯೆ ತುರ್ತು ಅಗತ್ಯವಿದೆ. ಇನ್ನೂ ವಿಳಂಬ ಮಾಡಿದರೆ ಮಗು ಗಂಭೀರ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ನೀವು ಹಿಲಾಲ್‌ನ ಸ್ಥಿತಿಯ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಇಲ್ಲಿ ಪಡೆಯಬಹುದು. ಇಂಪ್ಯಾಕ್ಟ್‌ಗುರುವಿನಲ್ಲಿ ದೇಣಿಗೆ ನೀಡುವ ಮೂಲಕ ಆತನ ಚಿಕಿತ್ಸೆಯನ್ನು ಸಾಧ್ಯವಾಗಿಸಿ. ಹಿಲಾಲ್‌ನ ಕಥೆಯನ್ನು ಫೇಸ್‌ಬುಕ್, ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಂಗಳಲ್ಲಿ ಹಂಚಿಕೊಳ್ಳುವ ಮೂಲಕ ನೀವು ಕೂಡ ನೆರವು ನೀಡಬಹುದು.

ನೆಫ್ಟ್/ಆರ್‌ಟಿಜಿಎಸ್/ಐಎಂಪಿಎಸ್ ಮೂಲಕ ನೇರ ಬ್ಯಾಂಕ್ ವರ್ಗಾವಣೆ ಮಾಡಲು ಈ ಕೆಳಗಿನ ಮಾಹಿತಿ ಅನುಸರಿಸಿ.

- Account number : 700701707029728
- Account name : MUHAMMOD HILAL - [Impact Guru]
- IFSC code : YESB0CMSNOC
(The digit after B is Zero and the letter after N is O for Orange) OR For UPI Transaction: supportmuhammod1@yesbankltd

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X