ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲೋಕಸಭಾ ಚುನಾವಣೆ : ಹಾವೇರಿಯಲ್ಲಿ ಶಪಥ ಮಾಡಿದ ಯಡಿಯೂರಪ್ಪ!

|
Google Oneindia Kannada News

Recommended Video

Lok Sabha Elections : 2019 ಹಾವೇರಿಯಲ್ಲಿ ಶಪಥ ಮಾಡಿದ ಯಡಿಯೂರಪ್ಪ! | Oneindia Kannada

ಹಾವೇರಿ, ಫೆಬ್ರವರಿ 25 : 'ಲೋಕಸಭಾ ಚುನಾವಣೆಯಲ್ಲಿ 22 ಸ್ಥಾನಗಳನ್ನು ಗೆಲ್ಲುವ ತನಕ ಮನೆ ಸೇರುವುದಿಲ್ಲ. ಮನೆಯ ಯೋಚನೆಯನ್ನೂ ಮಾಡುವುದಿಲ್ಲ' ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಶಪಥ ಮಾಡಿದರು.

ಸೋಮವಾರ ಹಾವೇರಿಯಲ್ಲಿ ಮೋದಿ ವಿಜಯ ಸಂಕಲ್ಪ ಯಾತ್ರೆ ಹಾಗೂ ಶಕ್ತಿ ಕೇಂದ್ರ ಪ್ರಮುಖರ ಸಮಾವೇಶವನ್ನು ಆಯೋಜನೆ ಮಾಡಲಾಗಿತ್ತು. ಸಮಾವೇಶ ಉದ್ದೇಶಿಸಿ ಮಾತನಾಡಿದ ಯಡಿಯೂರಪ್ಪ ಅವರು ಈ ಸಂಕಲ್ಪ ಮಾಡಿದರು.

20 ಸೀಟು ಗೆದ್ದರೆ ಗದ್ದುಗೆಯ ಮೇಲೆ ಯಡಿಯೂರಪ್ಪ : ಶಾ ಅಭಯಹಸ್ತ20 ಸೀಟು ಗೆದ್ದರೆ ಗದ್ದುಗೆಯ ಮೇಲೆ ಯಡಿಯೂರಪ್ಪ : ಶಾ ಅಭಯಹಸ್ತ

'ನಮ್ಮ ತಪ್ಪಿನಿಂದಾಗಿ ಬಹಳ ಹತ್ತಿರದಲ್ಲಿ ಅಧಿಕಾರ ವಂಚಿತರಾಗಿದ್ದೇವೆ. ಹೆಚ್ಚು ಸ್ಥಾನಗಳನ್ನು ಪಡೆದ ನಾವು ವಿರೋಧ ಪಕ್ಷದಲ್ಲಿ ಕುಳಿತಿದ್ದೇವೆ. ಕಡಿಮೆ ಸ್ಥಾನ ಪಡೆದ ಜೆಡಿಎಸ್ ಅಧಿಕಾರ ನಡೆಸುತ್ತಿದೆ' ಎಂದು ಯಡಿಯೂರಪ್ಪ ವಿಧಾನಸಭೆ ಚುನಾವಣೆಯ ಹಿನ್ನಡೆಯನ್ನು ನೆನಪಿಸಿಕೊಂಡರು.

ಲೋಕಸಭಾ ಚುನಾವಣೆ : ಹಲವು ಕಾರ್ಯಕ್ರಮ ಘೋಷಿಸಿದ ಕರ್ನಾಟಕ ಬಿಜೆಪಿಲೋಕಸಭಾ ಚುನಾವಣೆ : ಹಲವು ಕಾರ್ಯಕ್ರಮ ಘೋಷಿಸಿದ ಕರ್ನಾಟಕ ಬಿಜೆಪಿ

ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 20+ ಸ್ಥಾನಗಳಲ್ಲಿ ಜಯಗಳಿಸಬೇಕು ಎಂದು ಪಕ್ಷದ ಹೈಕಮಾಂಡ್ ಸಹ ರಾಜ್ಯ ಘಟಕಕ್ಕೆ ಟಾರ್ಗೆಟ್ ನೀಡಿದೆ. ಯಡಿಯೂರಪ್ಪ ಅವರು 22 ಸ್ಥಾನಗಳನ್ನುಗಳಿಸುತ್ತೇವೆ ಎಂದು ಇಂದು ಘೋಷಣೆ ಮಾಡಿದ್ದಾರೆ.....

ನನ್ನ ಯಡಿಯೂರಪ್ಪ ಭೇಟಿ ಆಕಸ್ಮಿಕವಷ್ಟೇ ಎಂದ ಸಿದ್ದರಾಮಯ್ಯನನ್ನ ಯಡಿಯೂರಪ್ಪ ಭೇಟಿ ಆಕಸ್ಮಿಕವಷ್ಟೇ ಎಂದ ಸಿದ್ದರಾಮಯ್ಯ

22 ಸೀಟು ಗೆಲ್ಲಿಸುವುದು ಗುರಿ

22 ಸೀಟು ಗೆಲ್ಲಿಸುವುದು ಗುರಿ

'ಸೂರ್ಯ-ಚಂದ್ರ ಇರುವುದು ಎಷ್ಟು ಸತ್ಯವೋ ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗುವುದು ಅಷ್ಟೇ ಸತ್ಯ. ಅದಕ್ಕಾಗಿ ಕರ್ನಾಟಕದಿಂದ 22 ಸೀಟುಗಳನ್ನು ಗೆಲ್ಲಿಸುವುದು ನಮ್ಮ ಜವಾಬ್ದಾರಿ' ಎಂದು ಯಡಿಯೂರಪ್ಪ ಹಾವೇರಿಯಲ್ಲಿ ನಡೆದ ಮೋದಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಹೇಳಿದರು.

ಮನೆ ಸೇರುವುದಿಲ್ಲ

ಮನೆ ಸೇರುವುದಿಲ್ಲ

'ಲೋಕಸಭಾ ಚುನಾವಣೆಯಲ್ಲಿ 22 ಸೀಟು ಗೆಲ್ಲುವ ತನಕ ಮನೆ ಸೇರುವುದಿಲ್ಲ. ಚುನಾವಣೆ ಮುಗಿಯುವ ತನಕ ಮನೆಯ ಯೋಚನೆಯನ್ನೂ ಮಾಡುವುದಿಲ್ಲ. ಪ್ರಧಾನಿ ಮೋದಿಗೆ ಸರಿಸಾಟಿ ಯಾರೂ ಇಲ್ಲ. ಅವರನ್ನು ಮತ್ತೆ ಪ್ರಧಾನಿಯನ್ನಾಗಿ ಮಾಡೋಣ' ಎಂದು ಯಡಿಯೂರಪ್ಪ ಕರೆ ನೀಡಿದರು.

ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿವೆ

ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿವೆ

'ನಮ್ಮ ತಪ್ಪಿನಿಂದ ಬಹಳ ಹತ್ತಿರದಿಂದ ಅಧಿಕಾರ ವಂಚಿತರಾಗಿದ್ದೇವೆ. ಹೆಚ್ಚು ಸೀಟು ಪಡೆದು ವಿರೋಧ ಪಕ್ಷದಲ್ಲಿ ಕುಳಿತಿದ್ದೇವೆ. ಕಡಿಮೆ ಸೀಟು ಪಡೆದ ಜೆಡಿಎಸ್ ಅಧಿಕಾರ ನಡೆಸುತ್ತಿದೆ. ನಾನು ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಲು ಜೆಡಿಎಸ್-ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿವೆ' ಎಂದು ಯಡಿಯೂರಪ್ಪ ಆರೋಪಿಸಿದರು.

ಮನೆಯ ಮುಂದೆ ಕಮಲದ ದೀಪ ಹಚ್ಚೋಣ

ಮನೆಯ ಮುಂದೆ ಕಮಲದ ದೀಪ ಹಚ್ಚೋಣ

'ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಈ ಬಾರಿ ಮನೆಯ ಮುಂದೆ ಕಮಲದ ದೀಪ ಹಚ್ಚುವ ಮೂಲಕ ದೀಪಾವಳಿ ಆಚರಿಸಬೇಕು' ಎಂದು ಯಡಿಯೂರಪ್ಪ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.

English summary
Karnataka BJP president B.S.Yeddyrappa tacked a vow to win 22 seats in 2019 Lok Sabha Election. Yeddyurappa addressed party rally in Haveri on February 25, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X