ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಹುಲ್ ಗಾಂಧಿ ಸವಾಲಿಗೆ ತಿರುಗೇಟು ಕೊಟ್ಟ ಯಡಿಯೂರಪ್ಪ!

By Gururaj
|
Google Oneindia Kannada News

Recommended Video

ರಾಹುಲ್ ಮಾತಿಗೆ ಬಿ.ಎಸ್.ವೈ ಟಾಂಗ್..! | Oneindia Kannada

ಹಾವೇರಿ, ಆಗಸ್ಟ್ 13 : 'ಫ್ರೆಂಚ್ ಸರ್ಕಾರದ ಜೊತೆಗಿನ ರಫೆಲ್ ಯುದ್ದ ವಿಮಾನ ಖರೀದಿ ಒಪ್ಪಂದದ ಕುರಿತು ಚರ್ಚೆಗೆ ಬರುವಂತೆ' ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬೀದರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸವಾಲು ಹಾಕಿದ್ದರು.

ಹಾವೇರಿಯಲ್ಲಿ ರಾಹುಲ್ ಗಾಂಧಿ ಅವರ ಸವಾಲಿಗೆ ತಿರುಗೇಟು ಕೊಟ್ಟಿರುವ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, 'ಪ್ರಧಾನಿ ಮೋದಿ ಅವರಿಗೆ ಪಂಥಹ್ವಾನ ನೀಡುವ ಮೊದಲು ನಿಮ್ಮ ಪಕ್ಷದ ಗತಿ ಏನಾಗಿದೆ ನೋಡಿಕೊಳ್ಳಿ' ಎಂದು ಟೀಕಿಸಿದ್ದಾರೆ.

ರಫೇಲ್‌ ಬಗ್ಗೆ ಮೋದಿ ನನ್ನೊಂದಿಗೆ ಚರ್ಚೆಗೆ ಕೂರಲಿ: ರಾಹುಲ್ ಚಾಲೆಂಜ್ರಫೇಲ್‌ ಬಗ್ಗೆ ಮೋದಿ ನನ್ನೊಂದಿಗೆ ಚರ್ಚೆಗೆ ಕೂರಲಿ: ರಾಹುಲ್ ಚಾಲೆಂಜ್

'ಜೆಡಿಎಸ್ ಅಧ್ಯಕ್ಷ ದೇವೇಗೌಡರೇ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂದು ಹೇಳಿದ್ದಾರೆ. ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ' ಎಂದು ಹೇಳಿದರು.

Yeddyurappa

'ಭಾರತ ಸದ್ಯ ಪ್ರಪಂಚದ ಆರ್ಥಿಕತೆಯಲ್ಲಿ 6ನೇ ಸ್ಥಾನದಲ್ಲಿದೆ. ಕೆಲವೇ ದಿನಗಳಲ್ಲಿ 3ನೇ ಸ್ಥಾನಕ್ಕೆ ಬರುತ್ತದೆ. ಮೋದಿ ಅವರ ನಾಯಕತ್ವದಲ್ಲಿ ದೇಶ ಅಭಿವೃದ್ಧಿ ಆಗುತ್ತಿದೆ. ಅವರಿಗೆ ಸವಾಲು ಹಾಕುವ ಮುನ್ನ ನಿಮ್ಮ ಪಕ್ಷದ ಸ್ಥಿತಿ ನೋಡಿಕೊಳ್ಳಿ' ಎಂದು ಲೇವಡಿ ಮಾಡಿದರು.

ಬೀದರ್‌ನಿಂದ ಲೋಕಸಭೆಗೆ ರಾಹುಲ್ ಗಾಂಧಿ ಸ್ಪರ್ಧೆ?ಬೀದರ್‌ನಿಂದ ಲೋಕಸಭೆಗೆ ರಾಹುಲ್ ಗಾಂಧಿ ಸ್ಪರ್ಧೆ?

'ಕಳೆದ ಮೂರು ತಿಂಗಳಿನಿಂದ ರಾಜ್ಯ ಸರ್ಕಾರ ಬದುಕಿದೆಯೇ?. ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಭ್ರಷ್ಟಾಚಾರ ಹೆಚ್ಚಾಗಿದೆ. ಸರ್ಕಾರ ವರ್ಗಾವಣೆ ದಂಧೆ ನಡೆಸುತ್ತಿದೆ. ರೈತರ ಜಮೀನಿಗೆ ಹೋಗಿ ನಾಟಿ ಮಾಡುವುದಲ್ಲ. ಬೀದರ್ ಸೇರಿದಂತೆ ಇತರ ಜಿಲ್ಲೆಗಳ ರೈತರ ಸ್ಥಿತಿಯನ್ನು ನೋಡಿ' ಎಂದು ಮಖ್ಯಮಂತ್ರಿಗಳನ್ನು ಆಗ್ರಹಿಸಿದರು.

English summary
The former Chief Minister of Karnataka and BJP state president B.S. Yeddyurappa on Monday attacked on AICC president Rahul Gandhi for his comment on Narendra Modi. In a Bidar Rahul Gandhi attacked on Prime Minister Narendra Modi on the Rafale deal said that, One who committed theft could not look me in the eye.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X