ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ ಕಾಲ್ ಮೂಲಕ ಹೆರಿಗೆ ಮಾಡಿದ ಹಾವೇರಿ ಮಹಿಳೆಯರು

By ಹಾವೇರಿ ಪ್ರತಿನಿಧಿ
|
Google Oneindia Kannada News

ಹಾವೇರಿ, ಜುಲೈ 29: ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದ ಗರ್ಭಿಣಿಗೆ ವಾಟ್ಸಾಪ್ ವಿಡಿಯೋ ಕಾಲ್ ಮೂಲಕ ಸುರಕ್ಷಿತ ಹೆರಿಗೆ ಮಾಡಿಸಿರುವ ಘಟನೆ ಹಾವೇರಿಯಲ್ಲಿ ನಡೆದಿದ್ದು, ಇವರ ಈ ಕೆಲ, ಧೈರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

Recommended Video

Rafael fighter jet lands in India | Oneindia Kannada

ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣದಲ್ಲಿ ಈ ಒಂದು ಸಂಗತಿ ನಡೆದಿದೆ. ಹಾವೇರಿಯ ಕಿತ್ತೂರು ಚನ್ನಮ್ಮ ರಸ್ತೆಯ ವೈದ್ಯರ ಓಣಿ ನಿವಾಸಿ ವಾಸವಿ ಫತ್ತೆಪೂರ ಎಂಬ ಗರ್ಭಿಣಿಗೆ ಭಾನುವಾರ ಮಧ್ಯಾಹ್ನ ಹೆರಿಗೆ ನೋವು ಕಾಣಿಸಿಕೊಂಡಿದೆ. ಆದರೆ ಸಂಡೇ ಲಾಕ್ ಡೌನ್ ಇದ್ದ ಕಾರಣ ಆ ಸಮಯದಲ್ಲಿ ಎಷ್ಟೇ ಪ್ರಯತ್ನಿಸಿದರೂ ವೈದ್ಯರು ಮತ್ತು ಆಂಬುಲೆನ್ಸ್ ಸಿಗಲಿಲ್ಲ. ಇನ್ನು ಕಾದು ಕೂತರೆ ಪರಿಸ್ಥಿತಿ ಕೈಮೀರಬಹುದು ಎಂದು ವಾಸವಿ ಅವರ ಅಕ್ಕಪಕ್ಕದ ಮಹಿಳೆಯರೇ ಸೇರಿ ಧೈರ್ಯ ಮಾಡಿ ಹೆರಿಗೆ ಮಾಡಿಸಲು ನಿರ್ಧರಿಸಿದ್ದಾರೆ.

ಮಧ್ಯರಾತ್ರಿ ಆಟೋ ಓಡಿಸಿಕೊಂಡು ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸಿದ ಆಶಾ ಕಾರ್ಯಕರ್ತೆಮಧ್ಯರಾತ್ರಿ ಆಟೋ ಓಡಿಸಿಕೊಂಡು ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸಿದ ಆಶಾ ಕಾರ್ಯಕರ್ತೆ

ಲಾಕ್ ಡೌನ್ ಆಗಿದ್ದ ಸಲುವಾಗಿ ಬೆಂಗಳೂರಿನಿಂದ ಹಾವೇರಿಗೆ ತೆರಳಿದ್ದ ಅಂಕಿತಾ, ಎಂಜಿನಿಯರ್ ಜ್ಯೋತಿ, ವಕೀಲೆ ಮಧುಲಿಕಾ ದೇಸಾಯಿ ಮತ್ತು ಇತರೆ ಮಹಿಳೆಯರು ಒಟ್ಟುಗೂಡಿ ಹೆರಿಗೆ ಮಾಡಲು ಮುಂದಾಗಿದ್ದಾರೆ. ಇದಕ್ಕೆ, ಅಂಕಿತಾ ಸ್ನೇಹಿತೆಯಾಗಿರುವ, ಹುಬ್ಬಳ್ಳಿಯ ಕಿಮ್ಸ್‌ ವೈದ್ಯೆ ಹಾವೇರಿಯ ಡಾ. ಪ್ರಿಯಾಂಕಾ ಮಂತಗಿ ಅವರ ಸಹಾಯ ಪಡೆದಿದ್ದಾರೆ. ಪ್ರಿಯಾಂಕಾ ಅವರಿಗೆ ಕರೆ ಮಾಡಿ ಪರಿಸ್ಥಿತಿ ವಿವರಿಸಿದ್ದಾರೆ. ವಾಟ್ಸಾಪ್ ವಿಡಿಯೋ ಕಾಲ್ ಮೂಲಕ ಪ್ರಿಯಾಂಕಾ ಅವರು ಹೆರಿಗೆಗೆ ಅಗತ್ಯ ಮಾರ್ಗದರ್ಶನಗಳನ್ನು ನೀಡಿದ್ದಾರೆ.

Haveri women Helped Pregnant Deliver Baby Through Video Call Instruction By Doctor

ಅದರಂತೆ ಈ ಮಹಿಳೆಯರು ಸೇರಿ ಸಹಜ ಹೆರಿಗೆ ಮಾಡಿಸಿದ್ದು, ಮಗು ಮತ್ತು ತಾಯಿ ಆರೋಗ್ಯವಾಗಿದ್ದಾರೆ. ಮಹಿಳೆಯರ ಸಮಯ ಪ್ರಜ್ಞೆ, ವೈದ್ಯರ ಸಹಕಾರದ ಕುರಿತು ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ.

English summary
Haveri women helped a pregnant to deliver a baby following doctors instruction through watsapp video call
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X