ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾವೇರಿಯಲ್ಲಿ ವಿದೇಶದಿಂದ ಬಂದ ಇಬ್ಬರು ಕೊರೊನಾ ಶಂಕಿತರಿಗೆ ಚಿಕಿತ್ಸೆ

|
Google Oneindia Kannada News

ಹಾವೇರಿ, ಮಾರ್ಚ್ 16: ಹಾವೇರಿ ಜಿಲ್ಲೆಯಲ್ಲಿ ಇಬ್ಬರು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ವಿದೇಶದಿಂದ ವಾಪಸಾಗಿರುವ ಇಬ್ಬರಲ್ಲಿ ಕೊರೊನಾ ಲಕ್ಷಣಗಳು ಕಂಡುಬಂದಿರುವ ಕಾರಣ ಚಿಕಿತ್ಸೆ ನೀಡಲಾಗುತ್ತಿದೆ.

60 ವರ್ಷದ ವೃದ್ಧ ಮತ್ತು 3 ವರ್ಷದ ಮೊಮ್ಮಗನಲ್ಲಿ ಕಾಣಿಸಿಕೊಂಡಿರೋ ಲಕ್ಷಣಗಳು ಕಾಣಿಸಿಕೊಂಡಿವೆ. ಶಂಕಿತರ ಕಫ ಮಾದರಿ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ತೆರೆಯಲಾಗಿರೋ ಪ್ರತ್ಯೇಕ ವಾರ್ಡ್ ನಲ್ಲಿ ಅಜ್ಜ, ಮೊಮ್ಮಗನಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಇಬ್ಬರ ರಕ್ತ ಮತ್ತು ದ್ರವ ಮಾದರಿ ಪಡೆದು ಶಿವಮೊಗ್ಗದ ಲ್ಯಾಬ್ ಗೆ ಕಳುಹಿಸಿದ್ದಾರೆ. ಸೋಮವಾರ ಮಧ್ಯಾಹ್ನ ಅಥವಾ ಮಂಗಳವಾರ ವರದಿ ಬರುವ ಸಾಧ್ಯತೆ ಇದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಂದ್ರ ದೊಡ್ಡಮನಿ ಮಾಹಿತಿ ನೀಡಿದ್ದಾರೆ.

corona

ಈ ಇಬ್ಬರು ಹಜ್ ಯಾತ್ರೆಯಿಂದ ಊರಿಗೆ ಮರಳಿದ್ದರು. ಫೆಬ್ರುವರಿ 16,2020ರಂದು ಹಜ್ ಯಾತ್ರೆಗೆ ತೆರಳಿದ್ದ ಅಜ್ಜ, ಅಜ್ಜಿ ಮತ್ತು ಮೊಮ್ಮಗ., ಮಾರ್ಚ್ 7 ರಂದು ಹುಬ್ಬಳ್ಳಿ ಮಾರ್ಗವಾಗಿ ಹಾನಗಲ್ ಗೆ ಬಂದಿದ್ದರು.

ಅಯ್ಯೋ ಪಾಪ.. ಆಗಷ್ಟೇ ಹುಟ್ಟಿದ ಹಸುಗೂಸಿಗೂ ಕೊರೊನಾ ಸೋಂಕು!ಅಯ್ಯೋ ಪಾಪ.. ಆಗಷ್ಟೇ ಹುಟ್ಟಿದ ಹಸುಗೂಸಿಗೂ ಕೊರೊನಾ ಸೋಂಕು!

ಕಳೆದ ಮೂರ್ನಾಲ್ಕು ದಿನಗಳಿಂದ ಅಜ್ಜ ಮತ್ತು ಮೊಮ್ಮಗನಿಗೆ ಜ್ವರ, ಕೆಮ್ಮು ಮತ್ತು ನೆಗಡಿ ಕಾಣಿಸಿಕೊಂಡಿದ್ದರಿಂದ ಜಿಲ್ಲಾಸ್ಪತ್ರೆಯ ವಿಶೇಷ ವಾರ್ಡ್ ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಜ್ಜಿಯಲ್ಲಿ ಕಾಣಿಸದ ಕೊರೊನಾ ಲಕ್ಷಣಗಳು., ಶಂಕಿತರ ಸ್ಯಾಂಪಲ್ಸ್ ಪಡೆದು ಶಿವಮೊಗ್ಗಗೆ ಕಳಿಸಿರೋ ಜಿಲ್ಲಾಸ್ಪತ್ರೆ ವೈದ್ಯರು ಇದೀಗ ವರದಿಗಾಗಿ ಕಾಯುತ್ತಿದ್ದಾರೆ.

English summary
Two people Who Return From Hajj Yatra Admitted In Haveri district Hospital They are getting Treament to Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X