ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking; ನವೀನ್ ನಿವಾಸಕ್ಕೆ ಗುರುವಾರ ರಾಜ್ಯಪಾಲರ ಭೇಟಿ

|
Google Oneindia Kannada News

ಹಾವೇರಿ, ಮಾರ್ಚ್ 23; ರಷ್ಯಾ-ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಮೃತಪಟ್ಟ ಹಾವೇರಿಯ ನವೀನ್ ಶೇಖರಪ್ಪ ಗ್ಯಾನಗೌಡರ್ ನಿವಾಸಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿ ನೀಡಲಿದ್ದಾರೆ. ಮಾರ್ಚ್‌ 1ರಂದು ನವೀನ್ ಉಕ್ರೇನ್‌ನಲ್ಲಿ ರಷ್ಯಾ ಶೆಲ್ ದಾಳಿಗೆ ಸಿಲುಕಿ ಮೃತಪಟ್ಟಿದ್ದರು.

ದಾವಣಗೆರೆ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಗುರುವಾರ ಥಾವರ್ ಚಂದ್ ಗೆಹ್ಲೋಟ್ ಪಾಲ್ಗೊಳ್ಳಲಿದ್ದಾರೆ. ಬಳಿಕ ಮಧ್ಯಾಹ್ನ 2.15ಕ್ಕೆ ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಚಳಗೇರಿ ಗ್ರಾಮದಲ್ಲಿರುವ ನವೀನ್ ನಿವಾಸಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಲಿದ್ದಾರೆ.

ಎಸ್. ಎಸ್. ಹೈಟೆಕ್ ಆಸ್ಪತ್ರೆಗೆ ನವೀನ್ ಮೃತದೇಹ ಹಸ್ತಾಂತರ: ನೋವಿನಲ್ಲೂ ಸಾರ್ಥಕತೆ ಮೆರೆದ ತಾಯಿ...! ಎಸ್. ಎಸ್. ಹೈಟೆಕ್ ಆಸ್ಪತ್ರೆಗೆ ನವೀನ್ ಮೃತದೇಹ ಹಸ್ತಾಂತರ: ನೋವಿನಲ್ಲೂ ಸಾರ್ಥಕತೆ ಮೆರೆದ ತಾಯಿ...!

ಸೋಮವಾರ ಮುಂಜಾನೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನವೀನ್ ಮೃತ ದೇಹ ಆಗಮಿಸಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಇತರರು ಮೃತದೇಹ ಬರಮಾಡಿಕೊಂಡು ಅಂತಿಮ ನಮನ ಸಲ್ಲಿಸಿದ್ದರು. ಬಳಿಕ ಹಾವೇರಿಗೆ ಕಳಿಸಿಕೊಡಲಾಗಿತ್ತು.

ಹಾವೇರಿ ಮೂಲದ ನವೀನ್ ನಂಜನಗೂಡಿನ ಆದರ್ಶ ಶಾಲೆ ವಿದ್ಯಾರ್ಥಿ!ಹಾವೇರಿ ಮೂಲದ ನವೀನ್ ನಂಜನಗೂಡಿನ ಆದರ್ಶ ಶಾಲೆ ವಿದ್ಯಾರ್ಥಿ!

Thawarchand Gehlot To Visit Naveen Shekharappa House

ಚಳಗೇರಿ ಗ್ರಾಮದಲ್ಲಿ ನವೀನ್ ಕುಟುಂಬಸ್ಥರು ಮೃತದೇಹಕ್ಕೆ ಅಂತಿಮ ಪೂಜೆ ಸಲ್ಲಿಕೆ ಮಾಡಿದ ಬಳಿಕ ದೇಹವನ್ನು ದಾವಣಗೆರೆಯ ಎಸ್. ಎಸ್. ಹೈಟೆಕ್ ಆಸ್ಪತ್ರೆಗೆ ಹಸ್ತಾಂತರಿಸಲಾಗಿದೆ.

ನವೀನ್ ಮೃತದೇಹ ವಾಪಸ್: ಪ್ರಧಾನಿಗೆ ಕರೆ ಮಾಡಿ ಕೃತಜ್ಞತೆ ತಿಳಿಸಿದ ಬಸವರಾಜ ಬೊಮ್ಮಾಯಿನವೀನ್ ಮೃತದೇಹ ವಾಪಸ್: ಪ್ರಧಾನಿಗೆ ಕರೆ ಮಾಡಿ ಕೃತಜ್ಞತೆ ತಿಳಿಸಿದ ಬಸವರಾಜ ಬೊಮ್ಮಾಯಿ

ಮಾರ್ಚ್ 1ರಂದು ಉಕ್ರೇನ್‌ನ ಖಾರ್ಕಿವ್‌ ನಗರದಲ್ಲಿ ಆಹಾರ ತರಲು ಹೋದಾಗ ರಷ್ಯಾ ನಡೆಸಿದ ಶೆಲ್ ದಾಳಿಯಲ್ಲಿ ಎಂಬಿಬಿಎಸ್ ವಿದ್ಯಾರ್ಥಿ ನವೀನ್ ಮೃತಪಟ್ಟಿದ್ದರು. 20 ದಿನಗಳ ಬಳಿಕ ನವೀನ್ ಶೇಖರಪ್ಪ ಪಾರ್ಥಿವ ಶರೀರ ತಾಯ್ನಾಡಿಗೆ ತರಲಾಗಿತ್ತು.

ನವೀನ್ ಶೇಖರಪ್ಪ ಗ್ಯಾನಗೌಡರ್ ಮೃತಪಟ್ಟಾಗ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಕರೆ ಮಾಡಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದಿಂದ ಕುಟುಂಬದಕ್ಕೆ 25 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದರು, ಪರಿಹಾರದ ಚೆಕ್ ಸಹ ಹಸ್ತಾಂತರ ಮಾಡಲಾಗಿದೆ.

ಶವವನ್ನು ತರುವ ಭರವಸೆ; ನವೀನ್ ಶೇಖರಪ್ಪ ಗ್ಯಾನಗೌಡರ್ ಕುಟುಂಬದ ಬೇಡಿಕೆಯಂತೆ ಶವವನ್ನು ತರಲು ಪ್ರಯತ್ನ ನಡೆಸುವುದಾಗಿ ಬಸವರಾಜ ಬೊಮ್ಮಾಯಿ ಹೇಳಿದ್ದರು. ಅಂತಿಮವಾಗಿ ಶವವನ್ನು ತರಲಾಗಿದೆ.

ಸೋಮವಾರ ಬೆಂಗಳೂರಿನಲ್ಲಿ ನವೀನ್ ಮೃತದೇಹಕ್ಕೆ ಅಂತಿಮ ನಮನ ಸಲ್ಲಿಸಿದ ಬಳಿಕ ಮಾತನಾಡಿದ್ದ ಬಸವರಾಜ ಬೊಮ್ಮಾಯಿ, "ಉಕ್ರೇನ್‌ನಿಂದ ನವೀನ್ ಮೃತ ದೇಹವನ್ನು ತರುವ ಅಸಾಧ್ಯವಾದ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿಯವರ ಭಗೀರಥ ಪ್ರಯತ್ನದಿಂದ ಸಾಧಿಸಿ, ಐತಿಹಾಸಿಕ ಕೆಲಸವನ್ನು ಮಾಡಲಾಗಿದೆ" ಎಂದು ಹೇಳಿದ್ದರು.

Recommended Video

ಬೆಂಗಳೂರಿನಲ್ಲೂ ಮುಸ್ಲಿಂ ವ್ಯಾಪಾರಕ್ಕೆ ಬ್ರೇಕ್ ಬೀಳೋ ಆತಂಕ | Oneindia Kannada

"ಉಕ್ರೇನ್ ಸುತ್ತಲಿನ ಎಲ್ಲಾ ದೇಶಗಳ ಸಂಪರ್ಕವನ್ನು ಬೆಳೆಸಿ ರಾಜತಾಂತ್ರಿಕವಾಗಿ ವಿಮಾನನಿಲ್ದಾಣದಲ್ಲಿ ವಿಶೇಷ ವಿಮಾನಗಳಿಗೆ ಅನುಮತಿ ಪಡೆದು ಶವವನ್ನು ತರಲಾಗಿದೆ. ಇಡೀ ಪ್ರಕ್ರಿಯೆ ಸಮನ್ವಯದ ಆಧಾರದ ಮೇಲೆಯೇ ಆಗಿದೆ. ನವೀನ್ ವೈದ್ಯಕೀಯ ಶಿಕ್ಷಣ ಮುಗಿಸಿ ಹಿಂದಿರುಗುವ ವೇಳೆಗೆ ಅವನ ತಂದೆತಾಯಿಗಳು ಬರಮಾಡಿಕೊಳ್ಳಬೇಕಿತ್ತು. ಆದರೆ ನವೀನ್ ಮೃತದೇಹವನ್ನು ಬರಮಾಡಿಕೊಳ್ಳಬೇಕಿರುವುದು ಅತ್ಯಂತ ನೋವಿನ ಸಂಗತಿ" ಎಂದು ತಿಳಿಸಿದ್ದರು.

English summary
Thawarchand Gehlot governor of Karnataka will visit Naveen Shekharappa Gyangoudar house on March 24th. Haveri district Chalageri village Naveei killed during Ukraine and Russia war on 1st March.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X