ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಸಿ ಪಾಟೀಲ್ ಒಳ್ಳೆ ಪೊಲೀಸ್, ಒಳ್ಳೆ ಶಾಸಕನೂ ಆಗಲಿಲ್ಲ

|
Google Oneindia Kannada News

Recommended Video

Siddaramaiah tweet against Hirekerur assembly seat BJP candidate B. C. Patil | Oneindia Kannada

ಹಾವೇರಿ, ನವೆಂಬರ್ 28 : "ಬಿ. ಸಿ. ಪಾಟೀಲ್ ಒಳ್ಳೆ ಪೊಲೀಸು ಆಗಿರಲಿಲ್ಲ, ಒಳ್ಳೆ ಶಾಸಕನೂ ಆಗಲಿಲ್ಲ" ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ. ಡಿಸೆಂಬರ್ 5ರಂದು ನಡೆಯಲಿರುವ ಉಪ ಚುನಾವಣೆಯಲ್ಲಿ ಬಿ. ಸಿ. ಪಾಟೀಲ್ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.

ಹಾವೇರಿ ಜಿಲ್ಲೆಯ ಹಿರೇಕೆರೂರು ಕ್ಷೇತ್ರದ ಉಪ ಚುನಾವಣೆಗಾಗಿ ಸಿದ್ದರಾಮಯ್ಯ ಪ್ರಚಾರ ನಡೆಸಿದರು. ಕಾಂಗ್ರೆಸ್‌ನಿಂದ ಬಿ. ಎಚ್. ಬನ್ನಿಕೋಡ್ ಅಭ್ಯರ್ಥಿಯಾಗಿದ್ದಾರೆ. ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಸಿ. ಪಾಟೀಲ್ ವಿರುದ್ಧ ಸಿದ್ದರಾಮಯ್ಯ ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ.

ಹಿರೇಕೆರೂರು: ಜೆಡಿಎಸ್‌ಗೆ ಆಘಾತ, ನಾಮಪತ್ರ ಹಿಂಪಡೆದ ಅಭ್ಯರ್ಥಿಹಿರೇಕೆರೂರು: ಜೆಡಿಎಸ್‌ಗೆ ಆಘಾತ, ನಾಮಪತ್ರ ಹಿಂಪಡೆದ ಅಭ್ಯರ್ಥಿ

"ಮಾನವಿದ್ದರೆ ಅಲ್ವೇ ಮೊಕದ್ದಮೆ ಹೂಡುವುದು?. ತಾವಾಗಿಯೇ ಬಟ್ಟೆ ಬಿಚ್ಕೊಂಡರೆ ನಾವೇನು‌ ಮಾಡೋಕ್ಕಾಗುತ್ತೆ?" ಎಂದು ಬಿ. ಸಿ. ಪಾಟೀಲ್‌ಗೆ ಸಿದ್ದರಾಮಯ್ಯ ಖಡಕ್ ಮಾತುಗಳಲ್ಲಿ ತಿವಿದಿದ್ದಾರೆ. ಈ ಮೂಲಕ ಉಪ ಚುನಾವಣೆ ಕಾವನ್ನು ಹೆಚ್ಚಿಸಿದ್ದಾರೆ.

ಇ.ಡಿ ದಾಳಿ ಹಿಂದೆ ಸಿದ್ದರಾಮಯ್ಯ ಕೈವಾಡ: ಬಿ.ಸಿ ಪಾಟೀಲ್ ಇ.ಡಿ ದಾಳಿ ಹಿಂದೆ ಸಿದ್ದರಾಮಯ್ಯ ಕೈವಾಡ: ಬಿ.ಸಿ ಪಾಟೀಲ್

2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದ ಬಿ. ಸಿ. ಪಾಟೀಲ್ ಸಿದ್ದರಾಮಯ್ಯ ಆಪ್ತರಾಗಿದ್ದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಗೆ ಹೋಗಿದ್ದರು. ಈಗ ಬಿಜೆಪಿ ಸೇರಿ ಉಪ ಚುನಾವಣಾ ಕಣಕ್ಕಿಳಿದಿದ್ದಾರೆ.

15 ಕ್ಷೇತ್ರದ ಉಪ ಚುನಾವಣೆ; ಯಡಿಯೂರಪ್ಪಗೆ ಅಮಿತ್ ಶಾ ಕರೆ! 15 ಕ್ಷೇತ್ರದ ಉಪ ಚುನಾವಣೆ; ಯಡಿಯೂರಪ್ಪಗೆ ಅಮಿತ್ ಶಾ ಕರೆ!

ಒಳ್ಳೆ ಪೊಲೀಸು, ಶಾಸಕ ಆಗಲಿಲ್ಲ

ಒಳ್ಳೆ ಪೊಲೀಸು, ಶಾಸಕ ಆಗಲಿಲ್ಲ

"ಬಿ.ಸಿ ಪಾಟೀಲ್ ಒಳ್ಳೆ ಪೊಲೀಸು ಆಗಿರಲಿಲ್ಲ, ಒಳ್ಳೆ ಶಾಸಕನೂ ಆಗಲಿಲ್ಲ. ಮತ ನೀಡಿ ಗೆಲ್ಲಿಸಿದ ಜನರನ್ನು ಕೇಳದೆ ಬಿಜೆಪಿ ಬಳಿ ಹಣ ತಗೊಂಡು ಪಕ್ಷಾಂತರ ಮಾಡಿ, ಈಗ ಅನರ್ಹ ಎಂಬ ಕಳಂಕ ಹೊತ್ತುಕೊಂಡು ತಿರುಗುತ್ತಿದ್ದಾರೆ. ಮತ್ತೆ ಯಾವ ಮುಖ ಹೊತ್ತುಕೊಂಡು ಜನರ ಬಳಿ ಮತ ನೀಡಿ ಎಂದು ಕೇಳುತ್ತಾರೋ?" ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಹಿರೇಕೆರೂರು ಅಭಿವೃದ್ಧಿ

ಹಿರೇಕೆರೂರು ಅಭಿವೃದ್ಧಿ

"ರಟ್ಟೆಹಳ್ಳಿಯನ್ನು ತಾಲೂಕು ಮಾಡಿದ್ದು, ಸರ್ವಜ್ಞ ಪ್ರಾಧಿಕಾರ ರಚಿಸಿದ್ದು, ತಾಲೂಕಿನ‌ ಕೆರೆಗಳನ್ನು ತುಂಬಿಸಿದ್ದು ನಾನು ಎಂದು ಬಿ.ಸಿ ಪಾಟೀಲ್ ಹೇಳುತ್ತಿದ್ದಾರೆ. ಇದನ್ನೆಲ್ಲ ನಾನು ಮುಖ್ಯಮಂತ್ರಿಯಾಗಿದ್ದಾಗ ಕ್ಷೇತ್ರದ ಅಭಿವೃದ್ಧಿಗೆ ನೀಡಿದ್ದೆ, ಆಗ ಬಿ.ಸಿ ಪಾಟೀಲ್ ಶಾಸಕರೂ ಆಗಿರಲಿಲ್ಲ" ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಬಟ್ಟೆ ಬಿಚ್ಕೊಂಡರೆ ನಾವೇನು‌ ಮಾಡೋಕ್ಕಾಗುತ್ತೆ?

ಬಟ್ಟೆ ಬಿಚ್ಕೊಂಡರೆ ನಾವೇನು‌ ಮಾಡೋಕ್ಕಾಗುತ್ತೆ?

"ನಾನು ದುಡ್ಡು ತಗೊಂಡು ಬಿಜೆಪಿ ಸೇರಿದ್ದೀನಿ ಎಂದು ಹೇಳುತ್ತಿರುವ ಸಿದ್ದರಾಮಯ್ಯನವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡ್ತೀನಿ ಎಂದು ಬಿ.ಸಿ ಪಾಟೀಲ್ ಹೇಳುತ್ತಿದ್ದಾರಂತೆ. ಮಾನವಿದ್ದರೆ ಅಲ್ವೇ ಮೊಕದ್ದಮೆ ಹೂಡುವುದು?. ತಾವಾಗಿಯೇ ಬಟ್ಟೆ ಬಿಚ್ಕೊಂಡರೆ ನಾವೇನು‌ ಮಾಡೋಕ್ಕಾಗುತ್ತೆ?" ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ಬೇರೆ ಸಾಕ್ಷಿಗಳು ಬೇಕಾ?

ಬೇರೆ ಸಾಕ್ಷಿಗಳು ಬೇಕಾ?

"ಇದೇ ಬಿ.ಸಿ ಪಾಟೀಲ್ ತಮ್ಮ ಮತ್ತು ಯಡಿಯೂರಪ್ಪ ನಡುವಿನ ಸಂಭಾಷಣೆಯನ್ನು ರೆಕಾರ್ಡ್ ಮಾಡಿ ತಂದು ಉಗ್ರಪ್ಪನವರಿಗೆ ಕೊಟ್ಟಿರಲಿಲ್ವೇ?. ಅದರಲ್ಲಿ ನಾವು ನಾಲ್ಕು ಜನ ಬರ್ತೀವಿ ಎಷ್ಟು ಕೊಡ್ತೀರ, ಏನೇನ್ ಕೊಡ್ತೀರ ಅಂತ ಕೇಳಿಲ್ಲವೇ?. ಹಣ ತಗೊಂಡು ಬಿಜೆಪಿ ಸೇರಿದ್ದೀರಿ ಅನ್ನೋಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಾ Mr. ಬಿ.ಸಿ ಪಾಟೀಲ್?" ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

English summary
Opposition leader of Karnataka Siddaramaiah tweet against Hirekerur assembly seat BJP candidate B. C. Patil.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X