• search
 • Live TV
ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಣೇಬೆನ್ನೂರು ಲಾಕ್ ಡೌನ್: ಹಾವೇರಿ ಜಿಲ್ಲಾಧಿಕಾರಿಯಿಂದ ಸ್ಪಷ್ಟನೆ

|

ರಾಣೇಬೆನ್ನೂರು, ಜುಲೈ 13: ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಗರವನ್ನು ಒಂದು ವಾರದ ಕಾಲ ಲಾಕ್ ಡೌನ್ ಮಾಡಲು ಸ್ಥಳೀಯ ಶಾಸಕರು, ವ್ಯಾಪಾರಸ್ಥರ ಮಟ್ಟದಲ್ಲಿ ತೀರ್ಮಾನಿಸಲಾಗಿತ್ತು. ಆದರೆ ಇದಕ್ಕೆ ಸಂಬಂಧಿಸಿದಂತೆ ಹಾವೇರಿ ಜಿಲ್ಲಾಧಿಕಾರಿಯು ಪ್ರಕಟಣೆ ಹೊರಡಿಸಿ ಯಾವುದೇ ತರಹದ ಲಾಕ್ ಡೌನ್ ಆದೇಶವಿಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ.

   Steve Jobs , ಹೆತ್ತವರಿಗೆ ಬೇಡವಾಗಿದ್ದ ಕೂಸು , ಜಗತ್ತನ್ನೇ ಗೆದ್ದ ಕಥೆ | Oneindia Kannada

   ಹಾವೇರಿ ಜಿಲ್ಲಾಧಿಕಾರಿ ಕಚೇರಿ ಹೊರಡಿಸಿರುವ ಪ್ರಕಟಣೆಯಲ್ಲಿ ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜುಲೈ 14, 2020 ರಿಂದ ಜುಲೈ 20, 2020 ರವರೆಗೆ ಅತ್ಯವಶ್ಯಕ ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಸೇವೆಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಹರಿದಾಡುತ್ತಿದೆ. ಆದರೆ ಜಿಲ್ಲಾಡಳಿತದಿಂದ ಈ ರೀತಿ ಯಾವುದೇ ಆದೇಶ ಹೊರಡಿಸಿರುವುದಿಲ್ಲ.

   ಕೊರೊನಾ ವೈರಸ್ ಭೀತಿ: ಜುಲೈ 14 ರಿಂದ ರಾಣೇಬೆನ್ನೂರು ಸಂಪೂರ್ಣ ಬಂದ್

   ಕೋವಿಡ್೧೯ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಾವೇರಿ ಜಿಲ್ಲೆಯಾದ್ಯಂತ ಉಲ್ಲೇಖಿತ ಈ ಕಾರ್ಯಾಲಯದ ಆದೇಶದಂತೆ ನಿಷೇಧಾಜ್ಞೆಯು ಜುಲೈ 31, 2020 ರವರೆಗೆ ಜಾರಿಯಲ್ಲಿರುತ್ತದೆ. ಈ ಮೂಲಕ ಸಾರ್ವಜನಿಕ ಗಮನಕ್ಕೆ ತರಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

   English summary
   MLA and Merchants level were scheduled to lockdown the city of Ranebennur for a week. But the Haveri District Collector has made it clear that there is no such order.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X