• search
  • Live TV
ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಣೇಬೆನ್ನೂರು; ಹನ್ನೊಂದು ಮಕ್ಕಳಿದ್ದರೂ ಬೀದಿಪಾಲಾದ ಪುಟ್ಟವ್ವ ಎಂಬ ವೃದ್ಧೆ

By ಹಾವೇರಿ ಪ್ರತಿನಿಧಿ
|
Google Oneindia Kannada News

ಹಾವೇರಿ, ಸೆಪ್ಟೆಂಬರ್‌ 22: ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ಪುಟ್ಟವ್ವ ಎಂಬ 78 ವರ್ಷದ ಅಜ್ಜಿಗೆ 11 ಜನ ಮಕ್ಕಳಿದ್ದಾರೆ. ಆದರೆ ಒಬ್ಬರು ಮಕ್ಕಳು ಸರಿಯಾಗಿ ನೋಡಿಕೊಳ್ಳದ ಕಾರಣ ಪುಟ್ಟವ್ವ ಬೀದಿಗೆ ಬಂದು ಕಣ್ಣೀರಿಟ್ಟಿದ್ದಾರೆ. ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿ ಮೆಟ್ಟಿಲುಗಳ ಮೇಲೆ 78 ವರ್ಷ ವಯಸ್ಸಿನ ಪುಟ್ಟವ್ವ ಕೊಟ್ಟೂರು ಎಂಬ ಹೆಸರಿನ ಅಜ್ಜಿ ಕುಳಿತ್ತಿದ್ದರು. ಈ ಅಜ್ಜಿ 11 ಜನ ಮಕ್ಕಳನ್ನು ಹೆತ್ತಿದ್ದಾರೆ. 11 ಜನ ಮಕ್ಕಳಿದ್ದರೂ ಕೂಡ ತಾಯಿಯನ್ನು ನೋಡಿಕೊಳ್ಳುವುದಕ್ಕೆ ಯಾರೂ ದಿಕ್ಕಿಲ್ಲದಂತರ ಆಗಿದೆ.

ಹೆತ್ತ ಮಕ್ಕಳು ಸರಿಯಾಗಿ ನೋಡಿಕೊಳ್ಳದ ಕಾರಣ ವೃದ್ದೆ ಪುಟ್ಟವ್ವ ಬೀದಿಗೆ ಬಂದಿದ್ದಾರೆ. ನನ್ನನ್ನು ನೋಡಿಕೊಳ್ಳುವುದಕ್ಕೆ ಯಾರೂ ಇಲ್ಲ ಎಂದು ಪುಟ್ಟವ್ವ ಗೋಳು ತೋಡಿಕೊಳ್ಳುತ್ತಿದ್ದಾರೆ. ಈ ಅಜ್ಜಿ ಹಾವೇರಿ ಜಿಲ್ಲಾಧಿಕಾರಿ ಕಚೇರಿ ಕಡೆ ಬಂದಿದ್ದಾರೆ. ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ದಯಾಮರಣ ಅರ್ಜಿ ಸಲ್ಲಿಸುವುದಕ್ಕೆ ಬಂದಿದ್ದರು. ನನ್ನ ಯಜಮಾನನಿಗೆ ಸೇರಬೇಕಾದ ಆಸ್ತಿಯನ್ನು ನನಗೆ ಕೊಟ್ಟುಬಿಡಿ ಎಂದು ಮಕ್ಕಳನ್ನು ಪುಟ್ಟವ್ವ ಅಂಗಲಾಚುತ್ತಿದ್ದಾರೆ. ಆದರೂ ಪುಟ್ಟವ್ವನ ಗೋಳಿಗೆ ಇದುವರೆಗೂ ಯಾರೂ ತಲೆ ಕೆಡಿಸಿಕೊಂಡಿಲ್ಲ. ಮಕ್ಕಳಿಂದ ಬೇಸತ್ತು ಇಂದು ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ಕೊಟ್ಟಿದ್ದು, ಮೆಟ್ಟಿಲು ಹತ್ತಲಾಗದೇ ವೃದ್ಧೆ ಪುಟ್ಟವ್ವ ಕೆಳಗಡೆ ಕುಳಿತುಕೊಂಡು ಕಣ್ಣೀರಿಟ್ಟಿದ್ದಾರೆ.

ಗದಗ ಜಿಲ್ಲೆಯಲ್ಲಿ ಜಾನುವಾರುಗಳಿಗೆ ರೋಗ ಬಾಧೆ; ಅನ್ನದಾತ ಕಂಗಾಲುಗದಗ ಜಿಲ್ಲೆಯಲ್ಲಿ ಜಾನುವಾರುಗಳಿಗೆ ರೋಗ ಬಾಧೆ; ಅನ್ನದಾತ ಕಂಗಾಲು

ಹೆತ್ತಮ್ಮನನ್ನು ಬೀದಿಗೆ ತಳ್ಳಿದ ಪಾಪಿ ಮಕ್ಕಳು

ಹನ್ನೊಂದು ಮಕ್ಕಳಿದ್ದರೂ ಯಾರೂ ನನ್ನನ್ನು ನೋಡಿಕೊಳ್ಳುತ್ತಿಲ್ಲ. ನನಗೆ ಜೀವನವೇ ಬೇಡವಾಗಿದೆ‌. ದಯಾಮರಣ ನೀಡಿ ಎಂದು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸಿದ್ದರು. 25 ಎಕರೆ ಜಮೀನಿದ್ದು, ರಾಣೇಬೆನ್ನೂರಿನಲ್ಲಿ 7 ಗಂಡು ಮಕ್ಕಳಿಗೆ 7 ಮನೆಗಳಿವೆ. ಆದರೆ ಆ ಮನೆಗಳಲ್ಲಿ ಜಾಗ ಇಲ್ಲದಂತಾಗಿದೆ ಎಂದು ಕಣ್ಣೀರಿಟ್ಟಿದ್ದಾರೆ. ಗಂಡನ ಹೆಸರಿಗೆ ಇರುವ ಆಸ್ತಿಯನ್ನು ನನ್ನ ಹೆಸರಿಗೆ ಮಾಡಿಕೊಳ್ಳಲು ಬಿಡುತ್ತಿಲ್ಲ ಎಂದು ಗೋಳಾಡಿದ್ದಾರೆ. ಕೂಡಲೇ ವಿಷಯ ತಿಳಿದು ಸ್ಥಳಕ್ಕೆ ಬಂದ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಆಶು ನದಾಫ್‌, ಅಜ್ಜಿಗೆ ಸಮಾಧಾನ ಪಡಿಸಿದರು. ನಿಮ್ಮ ಜೊತೆ ನಾವಿದ್ದೇವೆ. ನೀವು ಇಷ್ಟ ಪಟ್ಟರೆ ಒಳ್ಳೆ ವೃದ್ಧಾಶ್ರಮಕ್ಕೆ ಸೇರಿಸುತ್ತೇವೆ ಎಂದು ಭರವಸೆ ನೀಡಿದರು.‌ ಮಕ್ಕಳು ಆಸ್ತಿ ವಿಚಾರದಲ್ಲಿ ಗಲಾಟೆ ಮಾಡಿದರೆ ಕಂದಾಯ ಉಪವಿಭಾಗಾಧಿಕಾರಿಗಳಿಗೆ ತಿಳಿಸುತ್ತೇವೆ. ಅವರೇ ನಿಮಗೆ ನ್ಯಾಯ ದೊರಕಿಸಿಕೊಡುತ್ತಾರೆ ಎಂದು ಭರವಸೆ ನೀಡಿದರು.

ಅಜ್ಜಿಗೆ 11 ಜನ ಮಕ್ಕಳಲ್ಲಿ ನಾಲ್ವರು ಹೆಣ್ಣು ಮಕ್ಕಳಿದ್ದಾರೆ. ಹೆಣ್ಣು ಮಕ್ಕಳಿಗೆ ಮದುವೆ ಆಗಿ ಸಂಸಾರ ನಡೆಸುತ್ತಿದ್ದಾರೆ. ಅವರ ಬಳಿ ಹೋದರೆ ಗಂಡ- ಹೆಂಡತಿ ನಡುವೆ ಬರಬೇಡ ಅಂತಾ ಹೇಳುತ್ತಾರೆ ಎಂದು ವೃದ್ದೆ ಕಣ್ಣೀರು ಹಾಕಿದರು. ಸದ್ಯ ಕಿರಿ ಮಗ ಗೋವಿಂದ್ ನೋಡಿಕೊಳ್ಳುವುದಕ್ಕೆ ಮುಂದಾದರೂ, ಹಿರಿಯ ಮಕ್ಕಳು ಬಿಡುತ್ತಿಲ್ಲ. ತೊಂದರೆ ಕೊಡುತ್ತಿದ್ದಾರೆ ಎಂದು ಅಜ್ಜಿ ನೋವು ತೋಡಿಕೊಂಡರು.

English summary
78 year old Puttava of Ranebennur come to street because children not taken care Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X