ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲೋಕಸಭಾ ಚುನಾವಣೆಗೆ ಹಾವೇರಿಯಲ್ಲಿ ಕಾಂಗ್ರೆಸ್ ಪರಿವರ್ತನೆ ಕೂಗು

|
Google Oneindia Kannada News

ಹಾವೇರಿ, ಮಾರ್ಚ್ 9: ಲೋಕಸಭಾ ಚುನಾವಣೆ ಸನ್ನಿಹಿತವಾಗುತ್ತಿದ್ದಂತೆ ಪಕ್ಷಗಳ ಒಳಜಗಳ ಬದಿಗಿಟ್ಟು ಚುನಾವಣೆ ಸಿದ್ಧತೆಗೆ ಕಾಂಗ್ರೆಸ್ ಮುಖಂಡರು ಮುಂದಾಗಿದ್ದಾರೆ.

ಅದಕ್ಕೆ ನಾಂದಿಯೆಂಬಂತೆ ಹಾವೇರಿಯಲ್ಲಿ ಕಾಂಗ್ರೆಸ್ ಇಂದು ಪರಿವರ್ತನಾ ಸಮಾವೇಶವನ್ನು ಹಮ್ಮಿಕೊಂಡಿದೆ. ಈ ಸಮಾವೇಶದ ಮೂಲಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಲೋಕಸಭಾ ಚುನಾವಣಾ ಪ್ರಚಾರಕ್ಕೆ ರಣಕಹಳೆ ಊದಲು ಬರಲಿದ್ದಾರೆ.

ಹಾವೇರಿ : ಶನಿವಾರದ ರಾಹುಲ್ ಗಾಂಧಿ ಸಮಾವೇಶಕ್ಕೆ ವೇದಿಕೆ ಸಿದ್ಧಹಾವೇರಿ : ಶನಿವಾರದ ರಾಹುಲ್ ಗಾಂಧಿ ಸಮಾವೇಶಕ್ಕೆ ವೇದಿಕೆ ಸಿದ್ಧ

ಹಾವೇರಿಯ ಮುನ್ಸಿಪಲ್ ಮೈದಾನದಲ್ಲಿ ಈ ಐತಿಹಾಸಿಕ ಸಮಾವೇಶ ನಡೆಯುತ್ತಿದ್ದು, ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಲಕ್ಷಾಂತರ ಜನ ಭಾಗವಹಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್​ ವಹಿಸಲಾಗಿದೆ.

Rahul gandhi visit to Haveri and launch loksabha poll blitz :LIVE

ಈ ಮೊದಲು 2013ರಲ್ಲಿ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ರಾಹುಲ್ ಹಾವೇರಿಗೆ ಆಗಮಿಸಿದ್ದರು. ಈ ಬಾರಿ ಲೋಕಸಭಾ ಚುನಾವಣೆಯ ಮೊದಲ ಪ್ರಚಾರ ಭಾಷಣವನ್ನು ಹಾವೇರಿಯಿಂದಲೇ ಆರಂಭಿಸುತ್ತಿದ್ದಾರೆ. ಇಂದು ಲೋಕಸಭಾ ಚುನಾವಣಾ ದಿನಾಂಕವೂ ಪ್ರಕಟವಾಗುವ ಸಾಧ್ಯತೆ ಇದೆ.

ಸಮಾವೇಶಕ್ಕಾಗಿ ಬೃಹತ್​ ವೇದಿಕೆ ನಿರ್ಮಿಸಲಾಗಿದ್ದು, ಹಾವೇರಿ ಮತ್ತು ಗದಗ ಜಿಲ್ಲೆಗಳ ಕಾರ್ಯಕರ್ತರು ಮತ್ತು ಸಾರ್ವಜನಿಕರು ಆಗಮಿಸುವ ಹಿನ್ನೆಲೆಯಲ್ಲಿ 40 ಸಾವಿರಕ್ಕೂ ಹೆಚ್ಚು ಖುರ್ಚಿಗಳು, 10 ಎಲ್‌ಇಡಿ ಟಿ.ವಿ. ಪರದೆಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಭದ್ರತೆ ದೃಷ್ಟಿಯಿಂದ ಸುತ್ತಮುತ್ತಲೂ ಸಿ.ಸಿ. ಕ್ಯಾಮರಾ ಕಣ್ಗಾವಲು ಅಳವಡಿಸಲಾಗಿದೆ.

Newest FirstOldest First
2:24 PM, 9 Mar

ಐದು ವರ್ಷ ಮೋದಿ ನಿಮ್ಮನ್ನು ಮೂರ್ಖರನ್ನಾಗಿ ಮಾಡಿದ್ದಾರೆ.ನೀವು ನಮ್ಮ ಮೇಲೆ ನಂಬಿಕೆ ಇಡಿ, ನಿಮ್ಮ ಪರವಾಗಿ ಕೆಲಸ ಮಾಡುತ್ತೇವೆ, ನಿಮ್ಮ ದುಡ್ಡೆಲ್ಲಾ ಇವತ್ತು ದೊಡ್ಡ ದೊಡ್ಡವರಿಗೆ ಹೋಗುತ್ತಿದೆ, ಅದೆಲ್ಲವನ್ನೂ ತಡೆಯುತ್ತೇವೆ.
2:21 PM, 9 Mar

ಕರ್ನಾಟಕದಲ್ಲಿ ಎರಡು ವಿಚಾರಧಾರೆಯ ಹೊಡೆದಾಟ ಇದೆ, ಬಿಜೆಪಿ, ಆರ್‌ಎಸ್‌ಎಸ್, ನರೇಂದ್ರ ಮೋದಿ ಇನ್ನೊಂದೆಡೆ ರೈತರು, ಕಾಂಗ್ರೆಸ್, ಬಡಜನರು, ಯುವಕರ ಪರವಾಗಿ ಗೆಲುವು ಹಿಂದೂಸ್ತಾನಕ್ಕೆ ದೊರೆಯಲಿದೆ. ಇಬ್ಭಾಗ ಮಾಡುವ ಕೆಲಸ ನಾವು ಮಾಡುವುದಿಲ್ಲ-ರಾಹುಲ್
2:13 PM, 9 Mar

ಅನಿಲ್ ಅಂಬಾನಿ , ಲಲಿತ್ ಮೋದಿ, ನೀರವ್ ಮೋದಿ ಜೇಬಿಗೆ ಮೋದಿ 60-70 ಸಾವಿರ ಕೋಟಿ ಹಾಕಿದರೆ ನಾವು ಬಡವರಿಗೆ ಜೇಬಿಗೆ ಹಣ ಹಾಕ್ತೀವಿ.
2:11 PM, 9 Mar

2019ರಲ್ಲಿ ಕಾಂಗ್ರೆಸ್ ಅಧಿಕಾರ ಬಂದರೆ ಕನಿಷ್ಠ ಆದಾಯ ಕೊಡುವಂತಹ ಕಾನೂನನ್ನು ಮಾಡುತ್ತೇವೆ-ರಾಹುಲ್
2:08 PM, 9 Mar

ಕಪ್ಪು ಹಣ ನಿಯಂತ್ರಣಕ್ಕಾಗಿ ನೋಟು ರದ್ಧತಿ ಮಾಡಲಾಯಿತು. ಈ ವೇಳೆ ಸಾಲಿನಲ್ಲಿ ಯಾರು ನಿಂತಿದ್ದವರು, ಅನಿಲ್ ಅಂಬಾನಿ ಇದ್ದರಾ? ನೀರವ್ ಮೋದಿ ಇದ್ದರಾ? ವಿಜಯ ಮಲ್ಯ ಇದ್ದರಾ? ಯಾರು ಇದ್ದವರು, ಇದ್ದಿದ್ದು ದೇಶದ ಬಡ ಜನರು-ರಾಹುಲ್
2:04 PM, 9 Mar

70 ವರ್ಷದಿಂದ ಎಚ್‌ಎಎಲ್ ಮಿರಾಜ್, ಸುಖೋಯ್ ಹೀಗೆ ಸಾಕಷ್ಟು ವಿಮಾನಗಳನ್ನು ಉತ್ಪಾದನೆ ಮಾಡಿದೆ ಆದರೆ ಒಂದೂ ವಿಮಾನ ಉತ್ಪಾದಿಸದ ಅನಿಲ್ ಅಂಬಾನಿಗೆ 30 ಸಾವಿರ ಕೋಟಿ ನೀಡಿದ್ದಾರೆ- ರಾಹುಲ್
2:02 PM, 9 Mar

ಐದು ವರ್ಷದಿಂದ ಕೇವಲ ಭಾಷಣವನ್ನೇ ಮಾಡುತ್ತಿದ್ದೀರಾ ಎಷ್ಟು ಜನರಿಗೆ ಉದ್ಯೋಗ ನೀಡಿದ್ದೀರಿ? ಸಣ್ಣ ವ್ಯಾಪಾರಸ್ಥರು, ಉದ್ಯೋಗಸ್ಥರನ್ನು ಸರ್ವನಾಶ ಮಾಡಿದ್ದೀರಲ್ಲ ಯಾಕೆ ಅದರ ಬಗ್ಗೆ ಮಾತನಾಡುತ್ತಿಲ್ಲ- ರಾಹುಲ್
Advertisement
2:01 PM, 9 Mar

ಭಯೋತ್ಪಾದನೆ ವಿರುದ್ಧ ನಾವು ನಮ್ಮ ತಲೆಯನ್ನು ಬಾಗಿಸಲು ಹೋಗುವುದಿಲ್ಲ ತಲೆ ಎತ್ತಿ ನಿಲ್ಲುತ್ತೇವೆ, ಜೈಷ್ ಉಗ್ರ ಸಂಘಟನೆ ಮುಖಂಡನನ್ನು ಯಾಕೆ ಪಾಕಿಸ್ತಾನಕ್ಕೆ ಕಳುಹಿಸಿದ್ದು ಎಂದು ಮೋದಿಯವರು ಮುಂದಿನ ಭಾಷಣದಲ್ಲಿ ಹೇಳಬೇಕು-ರಾಹುಲ್ ಗಾಂಧಿ
1:59 PM, 9 Mar

ಜೈಷ್ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್, ಹಿಂದೂಸ್ತಾನದ ಜೈಲಿನಿಂದ ಪಾಕಿಸ್ತಾನಕ್ಕೆ ಯಾರು ಕಳುಹಿಸಿದ್ದು? ಬಿಜೆಪಿ ಸರ್ಕಾರವು ಪಾಕಿಸ್ತಾನಕ್ಕೆ ಕಳುಹಿಸಿತ್ತು-ರಾಹುಲ್ ಗಾಂಧಿ
1:56 PM, 9 Mar

ಕಾಂಗ್ರೆಸ್ ಅಧಿಕಾರಕ್ಕೆ ಬಂದ ರಾಜ್ಯಗಳಲ್ಲಿ ರೈತರ ಸಾಲಮನ್ನಾ ಮಾಡಿದ್ದೇವೆ- ರಾಹುಲ್ ಗಾಂಧಿ
1:56 PM, 9 Mar

ಐದು ವರ್ಷಗಳಿಂದ ಮೋದಿ ಅಧಿಕಾರ ನಡೆಸುತ್ತಿದ್ದಾರೆ ಆದರೆ 40 ವರ್ಷಗಳಲ್ಲೇ ಅತಿ ಹೆಚ್ಚು ನಿರುದ್ಯೋಗ ಸಮಸ್ಯೆ ಇದೆ-ರಾಹುಲ್ ಗಾಂಧಿ
1:52 PM, 9 Mar

ಚೌಕಿದಾರ್ ಆಗುತ್ತೇನೆ ಎಂದು ಹೇಳುವ ಮೋದಿಯನ್ನು ಪ್ರಧಾನಿ ಯಾಕೆ ಮಾಡ್ತೀರ ಚೌಕಿದಾರನನ್ನಾಗಿ ಮಾಡಿ-ರಾಹುಲ್ ಗಾಂಧಿ
Advertisement
1:51 PM, 9 Mar

ಲೋಕಸಭಾ ಚುನಾವಣೆ ಹತ್ತಿರವಾಗಿದೆ,ಐದು ವರ್ಷದಿಂದ ಮೋದಿ ಸರ್ಕಾರವಿದೆ., ಕೆಲವು ದಿನಗಳ ಹಿಂದೆ ಮೋದಿ 'ಕರ್ನಾಟಕದ ಸರ್ಕಾರ ರೈತರಿಗೆ ಲಾಲಿಪಾಪ್ ನೀಡಿದ್ದಾರೆ' ಎಂದು ಹೇಳಿದ್ದಾರೆ ಹಾಗಾದರೆ 11 ಸಾವಿರ ಕೋಟಿಯ ಲಾಲಿ ಪಾಪ್ ನೀಡಿದ್ದಾರೆಯೇ? ರಾಹುಲ್ ಪ್ರಶ್ನೆ
1:47 PM, 9 Mar

ಮೋದಿ ನೀಡಿದ ಆಶ್ವಾಸನೆ ಬಗ್ಗೆ ಮಾತನಾಡುವುದಿಲ್ಲ, ಕೇವಲ ಭಾವನಾತ್ಮಕ ವಿಚಾರಗಳನ್ನೇ ಹೇಳಿಕೊಂಡು ಜನರ ಮನಸ್ಥಿತಿಯನ್ನ ಬೇರೆಡೆಗೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.ಸಿದ್ದರಾಮಯ್ಯ
1:46 PM, 9 Mar

ಈ ಚುನಾವಣೆ ಪ್ರಜಾಪ್ರಭುತ್ವ, ಸರ್ವಾಧಿಕಾರಿ ಧೋರಣೆ ನಡುವಿನ ಚುನಾವಣೆ. ಮೋದಿ ಅಧಿಕಾರ ಅವಧಿಯಲ್ಲಿ ಯಾವತ್ತು ಜನಪರವಾಗಿ ಮಾತನಾಡಿಲ್ಲ- ಸಿದ್ದರಾಮಯ್ಯ
1:45 PM, 9 Mar

ಇಡೀ ದೇಶದ ರೈತರ ಸಾಲ ಮನ್ನಾ ಮಾಡುತ್ತೇವೆ ಎನ್ನುವ ಭರವಸೆಯನ್ನು ರಾಹುಲ್ ಗಾಂಧಿ ನೀಡಲಿದ್ದಾರೆ- ಸಿದ್ದರಾಮಯ್ಯ
1:42 PM, 9 Mar

ನರೇಗ ಹಣ ಇನ್ನೂ ಜನರ ಕೈ ತಲುಪಿಲ್ಲ. ಮೋದಿಯವರ ನಿಷ್ಠೆ ಜನರಿಗಾಗಿ ಅಲ್ಲ ಉದ್ಯಮಿಗಳಿಗಾಗಿ. ಮೋದಿಯವರು ಅಂಬಾನಿ, ಅದಾನಿ ರಿಮೋಟ್ ಕಂಟ್ರೋಲ್ ಪ್ರಧಾನಿ. ಇಂಥವರನ್ನ ತೊಲಗಿಸಿ, ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಮಾಡಲು ಪಣ ತೊಡಬೇಕಿದೆ. ದಿನೇಶ್ ಗುಂಡೂರಾವ್
1:41 PM, 9 Mar

ಮೋದಿ ಸರ್ಕಾರದ ವೈಫಲ್ಯ, ಜನ ವಿರೋಧಿ ಆಡಳಿತ, ಕೋಮು ಸೌಹಾರ್ಧತೆ ಕದಡಲು ಯತ್ನಿಸುತ್ತಿರುವ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಮಹಾಘಟಬಂಧನ್ ನಿರ್ಧರಿಸಿದೆ. ರಾಹುಲ್ ಗಾಂಧಿ ಅವರ ಕೈ ಬಲ ಪಡಿಸುವ ಮೂಲಕ ದೇಶಕ್ಕೆ ಅಭಿವೃದ್ಧಿ ಪರ ಸರ್ಕಾರವನ್ನು ನೀಡುವ ಜವಾಬ್ಧಾರಿ ನಮ್ಮ ಮೇಲಿದೆ-ಡಿಕೆ ಶಿವಕುಮಾರ್
1:41 PM, 9 Mar

ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಬಿಜೆಪಿ ಸರ್ಕಾರವನ್ನ ಅಸ್ಥಿರಗೊಳಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಬಿಜೆಪಿ ಹೊರತಾದ ಯಾವುದೇ ಪಕ್ಷ ಸರ್ಕಾರ ರಚಿಸುವುದು ಅವರಿಗೆ ಬೇಕಾಗಿಲ್ಲ. ಈ ಕಾರಣಕ್ಕೆ ಸರ್ಕಾರ ಬೀಳಿಸಲು ಪ್ರಯತ್ನಿಸುತ್ತಿದ್ದಾರೆ. ಇದರಲ್ಲಿ ಬಿಜೆಪಿ ಸಫಲ ಆಗುವುದಿಲ್ಲ. ಡಿಕೆ ಶಿವಕುಮಾರ್
1:40 PM, 9 Mar

ಮೋದಿಯವರು ಕೆಲಸ ಮಾಡದೇ ಕೇವಲ ಪ್ರಚಾರದಲ್ಲಿ ತೊಡಗಿದ್ದಾರೆ. ದೇಶದ ಜನರ ಕನಸಿನ ಅಚ್ಚೇ ದಿನ್ ತಂದು ಕೊಡಿವಲ್ಲಿ ಮೋದಿ ಸರ್ಕಾರ ವೈಫಲ್ಯವಾಗಿದೆ. ದೇಶಕ್ಕೆ ಮೊದಲ ಬಾರಿಗೆ ಬರಿ ಸುಳ್ಳುಗಳನ್ನೇ ಹೇಳುವ ವ್ಯಕ್ತಿ ಪ್ರಧಾನಿ ಆಗಿದ್ದಾರೆ. ಮೋದಿ ಓರ್ವ ಸುಳ್ಳಿನ ಸರದಾರ.-ದಿನೇಶ್ ಗುಂಡೂರಾವ್
1:40 PM, 9 Mar

ಸರ್ಕಾರ 22 ಲಕ್ಷ ರೈತರ 8165ರೂ ಕೋಟಿ ಸಾಲ ಮನ್ನಾ ಮಾಡಿತ್ತು. ಸಮ್ಮಿಶ್ರ ಸರ್ಕಾರ ಈಗಾಗಲೆ ರೈತರ ಸಾಲ‌ಮನ್ನಾ ಮಾಡಿ ಆ ಹಣವನ್ನ ರೈತರ ಖಾತೆಗೆ ಜಮೆ ಮಾಡಲಾಗಿದೆ. ಮೋದಿಯವರು ಈ ಮಾಹಿತಿ ಇಲ್ಲದೇ, ಕರ್ನಾಟಕದಲ್ಲಿ ರೈತರ ಸಾಲ ಮನ್ನಾ ಮಾಡಿಲ್ಲ ಎಂದು ಹೇಳುತ್ತಿದ್ದಾರೆ-ದಿನೇಶ್ ಗುಂಡೂರಾವ್
1:22 PM, 9 Mar

ಶಾಲು ಹೊದಿಸಿ, ಗಧೆ ಕೊಟ್ಟು ರಾಹುಲ್ ಗಾಂಧಿಗೆ ಸನ್ಮಾನ
1:20 PM, 9 Mar

ಹಾವೇರಿಯಿಂದಲೇ ಪ್ರಚಾರ ಆರಂಭಿಸಿ 2013ರಲ್ಲಿ ಕಾಂಗ್ರೆಸ್ ಬಹುಮತ ಪಡೆದು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು.
1:18 PM, 9 Mar

ಕಾಂಗ್ರೆಸ್ ಪರಿವರ್ತನಾ ಸಮಾವೇಶ ವೇದಿಕೆಗೆ ಆಗಮಿಸಿದ ರಾಹುಲ್ ಗಾಂಧಿ
1:11 PM, 9 Mar

ಕಾಂಗ್ರೆಸ್ ಪರಿವರ್ತನಾ ಸಮಾವೇಶ ನಡೆಯಲಿರುವ ಹಾವೇರಿಗೆ ಬಂದಿಳಿದ ರಾಹುಲ್ ಗಾಂಧಿ
1:04 PM, 9 Mar

ಕಾಂಗ್ರೆಸ್ ಸಮಾವೇಶಕ್ಕೆ 1 ಲಕ್ಷ ಜನರ ನಿರೀಕ್ಷೆ
12:57 PM, 9 Mar

ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಸೇರಿದಂತೆ ಹಲವು ನಾಯಕರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
12:55 PM, 9 Mar

ಹಾವೇರಿಯ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮ
12:55 PM, 9 Mar

ಸಿದ್ದರಾಮಯ್ಯ ಜೊತೆ ಹೆಲಿಕಾಪ್ಟರ್‌ನಲ್ಲಿ ಹಾವೇರಿಗೆ ರಾಹುಲ್ ಪ್ರಯಾಣ
12:55 PM, 9 Mar

ದೆಹಲಿಯಿಂದ ವಿಶೇಷ ವಿಮಾನದಲ್ಲಿ ರಾಹುಲ್ ಆಗಮನ
READ MORE

English summary
Congress president, Rahul Gandhi is all set to begin his party's election campaign in the state for the coming Lok Sabha poll from the BJP's stronghold of Haveri on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X