ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೇಸಿಎಂ ಅಭಿಯಾನ; ಹಾವೇರಿಯಲ್ಲಿ 10 ಜನ ಮಠಾಧೀಶರು ಸಿಎಂ ಬೊಮ್ಮಯಿ ಪರ ಬ್ಯಾಟಿಂಗ್

By ಹಾವೇರಿ ಪ್ರತಿನಿಧಿ
|
Google Oneindia Kannada News

ಹಾವೇರಿ, ಸೆಪ್ಟೆಂಬರ್‌, 30: ಹಾವೇರಿ ಜಿಲ್ಲಾ‌ ಒಕ್ಕೂಟದ ಮಠಾಧೀಶರು ಸಿಎಂ ಬಸವರಾಜ ಬೊಮ್ಮಾಯಿ ಅವರ ಪರ ಬ್ಯಾಟಿಂಗ್ ಮಾಡಿದ್ದಾರೆ. ಶಿಗ್ಗಾಂವಿ ವಿರಕ್ತಮಠದ ಸಂಗನಬಸವ ಸ್ವಾಮೀಜಿಯವರ ನೇತೃತ್ವದಲ್ಲಿ ಸುದ್ದಿಗೋಷ್ಠಿಯನ್ನು ಮಾಡಿದ್ದು, ಕಾಂಗ್ರೆಸ್ ನಡೆಸಿದ ಪೇಸಿಎಂ ಅಭಿಯಾನವನ್ನು ಖಂಡಿಸಿದ್ದಾರೆ.

ಹಾವೇರಿ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿಪೇಸಿಎಂ ಅಭಿಯಾನ ಮಾಡುತ್ತಿರುವ ಕಾಂಗ್ರೆಸ್‌ ನಾಯಕರ ವಿರುದ್ಧ 10 ಜನ ಮಠಾಧೀಶರು ಅಸಮಾಧಾನ ಹೊರಹಾಕಿದರು. ಪೇ‌ ಸಿಎಂ ಅಭಿಯಾನ ವೈಯಕ್ತಿಕವಾಗಿ ಒಬ್ಬ ಮುಖ್ಯಮಂತ್ರಿಯನ್ನು ಇಟ್ಟುಕೊಂಡು ಟಾರ್ಗೆಟ್ ಮಾಡಿದ ಹುನ್ನಾರವಾಗಿದೆ. ಇಂತಹ ಹುನ್ನಾರ ಯಾವುದೇ ರಾಜಕಾರಣಿಗಳು ಈವರೆಗೂ ಮಾಡಿಲ್ಲ. ರಾಜಕೀಯವಾಗಿ ತಪ್ಪುಗಳು ಆದಲ್ಲಿ ಕಾನೂನುಬದ್ಧವಾಗಿ ಕ್ರಮಕ್ಕೆ ಮುಂದಾಗಬೇಕು. ಅವರಿಗೆ ಬೇಕಾದ ಶಿಕ್ಷೆ ಕೊಟ್ಟು, ಜನರ ಹೃದಯವನ್ನು ಗೆಲ್ಲುವ ಕೆಲಸ ಎಲ್ಲ ಪಕ್ಷಗಳು ಮಾಡಬೇಕು ಎಂದು ಒಕ್ಕೊರಲಿನಿಂದ ಹೇಳಿದರು.

ಹಾವೇರಿ: 20 ಕೋಟಿ ರೂಪಾಯಿ ವೆಚ್ಚದ ಮೆಗಾ ಡೇರಿಗೆ ಸಿಎಂ ಬೊಮ್ಮಾಯಿ ಶಂಕುಸ್ಥಾಪನೆಹಾವೇರಿ: 20 ಕೋಟಿ ರೂಪಾಯಿ ವೆಚ್ಚದ ಮೆಗಾ ಡೇರಿಗೆ ಸಿಎಂ ಬೊಮ್ಮಾಯಿ ಶಂಕುಸ್ಥಾಪನೆ

ಮೊದಲು ಜನರ ಸಮಸ್ಯೆಗಳನ್ನು ಆಲಿಸಬೇಕು:

"ದೊಡ್ಡ- ದೊಡ್ಡ ಜ್ವಲಂತ ಸಮಸ್ಯೆಗಳನ್ನು ಬಿಟ್ಟು ಸಣ್ಣತನದ ವಿಚಾರ ಇಟ್ಟುಕೊಂಡು ರಾಜಕಾರಣ ಮಾಡುವುದನ್ನು ಬಿಡಬೇಕು. ಇದನ್ನು ನೋಡಿದರೆ ಬೇಸವಾಗುತ್ತದೆ ಎಂದು ಮಠಾಧೀಶರು ಅಸಮಾಧಾನ ಹೊರಹಾಕಿದ್ದಾರೆ. ಇನ್ನು ನಾವು ಆಯ್ಕೆ ಮಾಡಿ ಕಳುಹಿಸಿದ ಚುನಾಯಿತ ಪ್ರತಿನಿಧಿಗಳು ಏನು ಮಾಡುತ್ತೀದ್ದಾರೋ? ಎನ್ನುವ ಪ್ರಶ್ನೆ ಜನರಲ್ಲಿ ಮೂಡುತ್ತಿದೆ. ಮುತ್ಸದ್ದಿ ರಾಜಕಾರಣಿಗಳು ಸಣ್ಣತನಕ್ಕೆ ಇಳಿತಿಯುತ್ತಿರುವುದನ್ನು ನೋಡಿ ಮುಂದೆ ಸಮಾಜದ ಜನರು ಅವಹೇಳನ ಮಾಡುವ ಸ್ಥಿತಿ ಬರಬಾರದು. ಸಣ್ಣ ವಿಚಾರಗಳನ್ನು ಕೈಬಿಟ್ಟು ಜ್ವಲಂತ ಸಮಸ್ಯೆಗಳ ಬಗ್ಗೆ ಗಮನಹರಿಸಿ," ಎಂದು ಪ್ರತಿಪಕ್ಷಗಳಿಗೆ ಶಿಗ್ಗಾಂವಿ ವಿರಕ್ತಮಠದ ಸಂಗನಬಸವ ಸ್ವಾಮೀಜಿಯವರು ಕಿವಿಮಾತನ್ನು ಹೇಳಿದರು.

PayCM campaign; Haveri mutts swamijis batting for CM Basavaraj Bommai

ಯಾವುದೇ ಪಕ್ಷಕ್ಕೆ ನಮ್ಮ ಬೆಂಬಲವಿಲ್ಲ

ಇನ್ನು ನಾವು ಯಾವುದೇ ರಾಜಕೀಯ‌ ಪಕ್ಷವನ್ನು ಬೆಂಬಲಿಸಲು ಬಂದಿಲ್ಲ. 3 ವರ್ಷದಿಂದ ಅನ್ನ ಕೊಡುವ ರೈತನಿಗೆ ಅನ್ನವಿಲ್ಲದ ಪರಿಸ್ಥಿತಿ ಬಂದಿದೆ. ಎಲ್ಲರೂ ಸೇರಿಕೊಂಡು ಇಂತಹ ಸಮಸ್ಯೆಗಳನ್ನು ಬಗೆಹರಿಸಿ ಜನರ ಹೃದಯವನ್ನು ಗೆಲ್ಲಿವ ಕೆಲಸ ಮಾಡಬೇಕು. ಈಗಿನ ಮುಖ್ಯಮಂತ್ರಿಗಳು ಅಧಿಕಾರಕ್ಕೆ ಬಂದು ಸ್ವಲ್ಪ ದಿನಗಳಾಗಿವೆ. ಮುಖ್ಯಮಂತ್ರಿಗಳ ತೇಜೋವಧೆ ಮಾಡಬಾರದು ಎಂದು ಪ್ರತಿಪಕ್ಷಗಳಿಗೆ, ಹಾವೇರಿ ಜಿಲ್ಲಾ ಮಠಾಧೀಶರ ಒಕ್ಕೂಟದ ಶಿಗ್ಗಾಂವಿ ವಿರಕ್ತಮಠದ ಸಂಗನಬಸವ ಸ್ವಾಮೀಜಿಗಳು ಹೇಳಿದರು.

English summary
mutt seer of Haveri District Union spoke for support chief minister Basavaraja Bommai. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X