ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ಹಾವೇರಿ ಜಿಲ್ಲೆಗೂ ಪ್ರವೇಶ ಮಾಡಿದ ಕೊರೊನಾ

|
Google Oneindia Kannada News

ಹಾವೇರಿ, ಮೇ 4; ಕೊರೊನಾ ವಿಷಯವಾಗಿ ಹಸಿರು ವಲಯದಲ್ಲಿದ್ದ ಹಾವೇರಿ ಜಿಲ್ಲೆಗೆ ಇದೇ ಮೊದಲ ಬಾರಿಗೆ ಮಾರಕ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿದೆ. ಹಾವೇರಿ ಜಿಲ್ಲೆಯ ಸವಣೂರಿನ 32 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಏಪ್ರಿಲ್ 29 ರಂದು ಮುಂಬೈನಿಂದ ಲಾರಿಯೊಂದರಲ್ಲಿ ಬಂದಿದ್ದ ವ್ಯಕ್ತಿಗೆ ಸೋಂಕು ತಗುಲಿದೆ ಎಂದು ಹಾವೇರಿ ಜಿಲ್ಲಾಧಿಕಾರಿ ಕೃಷ್ಣಾ ಬಾಜಪೇಯಿ ತಿಳಿಸಿದ್ದಾರೆ. ವಿಶೇಷವೆಂದರೆ ಸೋಂಕು ಕಾಣಿಸಿಕೊಂಡ ವ್ಯಕ್ತಿಗೆ ಯಾವುದೇ ಕೊರೊನಾ ಲಕ್ಷಣ ಇರಲಿಲ್ಲ. ನಿಯಮಗಳ ಪ್ರಕಾರ ಹೊರಗಿನಿಂದ ಬಂದವರಿಗೆ ತಪಾಸಣೆ ಮಾಡುವ ರೀತಿ ಮಾಡಿದಾಗ ಈ ವ್ಯಕ್ತಿಗೆ ಸೋಂಕು ದೃಡಪಟ್ಟಿದೆ.

ಸೋಂಕು ತಗುಲಿಸಿಕೊಂಡ ವ್ಯಕ್ತಿ ಮುಂಬೈನಿಂದ ಬಂದು ನೇರವಾಗಿ ಆತನ ಮನೆಗೆ ತೆರಳಿದ್ದ. ಎಲ್ಲೂ ಹೋಗಿರಲಿಲ್ಲ. ಹೀಗಾಗಿ ಸದ್ಯ ಆತನ ಪ್ರಾಥಮಿಕ ಸಂಪರ್ಕಕ್ಕೆ ಆತನ ತಾಯಿ ಹಾಗೂ ಅಣ್ಣ ಮಾತ್ರ ಬಂದಿದ್ದರು ಎಂದು ಹಾವೇರಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಅವರಿಬ್ಬರನ್ನೂ ಕೋವಿಡ್ ತಪಾಸಣೆಗೆ ಕಳುಹಿಸಿದ್ದು, ವರದಿ ಇನ್ನೂ ಬಂದಿಲ್ಲ ಎಂದಿದ್ದಾರೆ.

1 Covid19 Case Tested Positive In Haveri District

ಇಷ್ಟು ದಿನ ಕೊರೊನಾ ಇಲ್ಲದೇ ತಣ್ಣಗಿದ್ದ ಹಾವೇರಿ ಜಿಲ್ಲೆ ಈಗ ಒಂದು ಪ್ರಕರಣ ದಾಖಲಾಗುವ ಮೂಲಕ ಹಸಿರುವ ವಲಯದಿಂದ ಕಿತ್ತಳೆ ವಲಯಕ್ಕೆ ಬಂದಂತಾಗಿದೆ. ಸೋಂಕು ಕಾಣಿಸಿಕೊಂಡ ಸವಣೂರಿನ ವ್ಯಕ್ತಿಯ ಏರಿಯಾವನ್ನು ಕಂಟೈನಮೆಂಟ್ ಎಂದು ಘೋಷಿಸಿ ತೀವ್ರ ನಿಗಾ ವಹಿಸಲಾಗುತ್ತಿದೆ.

English summary
1 Covid19 Case Tested Positive In Haveri District. haveri DC Krishna Bajapeyi confirms It.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X