ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾವೇರಿ: ಮೊಬೈಲ್ ಬ್ಯಾಟರಿ ಸ್ಫೋಟ ಬಾಲಕನ ಬೆರಳು ಕಟ್!

|
Google Oneindia Kannada News

ಹಾವೇರಿ, ಜು. 16: ಚಿಕ್ಕ ಮಕ್ಕಳಿಗೆ ಹಳೇ ಮೊಬೈಲ್ ಅಥವಾ ಬ್ಯಾಟರಿ ಉಪಕರಣ ನೀಡುವ ಮುನ್ನ ಸಾವಿರ ಸಲ ಅಲೋಚಿಸಿ. ಹಳೇ ಮೊಬೈಲ್ ಬ್ಯಾಟರಿ ಸ್ಫೋಟಗೊಂಡು ಹತ್ತು ವರ್ಷದ ಬಾಲಕ ಮೂರು ಬೆರಳು ಕಳೆದುಕೊಂಡ ಘಟನೆ ಹಾವೇರಿಯಲ್ಲಿ ನಡೆದಿದೆ.

ಕೊರೊನಾ ಸೋಂಕಿನಿಂದ ಮಕ್ಕಳ ಕಲಿಕೆಗೆ ಆನ್‌ಲೈನ್ ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಒಂದನೇ ತರಗತಿ ಮಕ್ಕಳಿಂದ ಹಿಡಿದು ಎಲ್ಲರ ಕೈಯಲ್ಲೂ ಮೊಬೈಲ್ ಸೇರಿದೆ. ಕಳಪೆ ಗುಣಮಟ್ಟದ ಪೋನ್‌ಗಳಲ್ಲೇ ಮಕ್ಕಳು ಆನ್‌ಲೈನ್ ಪಾಠ ಕೇಳುವಂತಾಗಿದೆ. ಹಾವೇರಿಯಲ್ಲಿ ನಡೆದಿರುವ ಘಟನೆ ಮಕ್ಕಳಿಗೆ ಮೊಬೈಲ್ ಕೊಡಲು ಭಯ ಹುಟ್ಟಿಸುತ್ತದೆ.

ಹಳೇ ಮೊಬೈಲ್‌ನ ಬ್ಯಾಟರಿ ಸ್ಫೋಟಗೊಂಡು ಹತ್ತು ವರ್ಷದ ಬಾಲಕನ ಮೂರು ಬೆರಳು ಕಟ್‌ ಆಗಿವೆ. ಬಿಸಾಕಿದ್ದ ಮೊಬೈಲ್ ಬ್ಯಾಟರಿ ಕೈಗೆತ್ತಿಕೊಂಡು ಆಟ ಆಡುವ ವೇಳೆ ಸ್ಫೋಟಿಸಿ ಈ ಘಟನೆ ನಡೆದಿದೆ. ಗಾಯಾಳು ಬಾಲಕನ್ನು ಸವಣೂರು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗಿದೆ. ಸವಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Old Mobile Battery Blast: 10 Year Old Boy lost three fingers and serious Injured

ಮೊಬೈಲ್ ಬ್ಯಾಟರಿ ಸ್ಫೋಟಗೊಂಡ ಪರಿಣಾಮ ಮಗುವಿನ ಮುಖಕ್ಕೂ ಗಾಯಗಳಾಗಿವೆ. ಮೂರು ಬೆರಳು ಕಟ್ ಆಗಿವೆ. ಬ್ಯಾಟರಿಯಲ್ಲಿರುವ ಹಾನಿಕಾರಕ ವಸ್ತು ದೇಹ ಸೇರದಂತೆ ಪ್ರಥಮ ಚಿಕಿತ್ಸೆ ನೀಡಿದ್ದು, ಬಾಲಕ ಚೇತರಿಸಿಕೊಂಡಿದ್ದಾನೆ. ಘಟನೆ ಕುರಿತು ಸವಣೂರು ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

English summary
Old Mobile Battery blast: Ten Years Old Boy lost his three-fingers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X