ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೃತದೇಹಗಳನ್ನಿಡಲು ಫ್ರೀಜರ್ ಇಲ್ಲ: ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಅವ್ಯವಸ್ಥೆ ತಾಂಡವ

|
Google Oneindia Kannada News

ಹಾವೇರಿ, ಮೇ 31: ಹಾವೇರಿ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಫ್ರೀಜರ್ ವ್ಯವಸ್ಥೆ ನಿಷ್ಕ್ರಿಯಗೊಂಡಿದ್ದು, ಮೃತದೇಹಗಳನ್ನು ಇರಿಸಲು ಆಸ್ಪತ್ರೆಯಲ್ಲಿ ಇರಬೇಕಾದ ಕನಿಷ್ಟ ಸೌಕರ್ಯವೂ ಇಲ್ಲದಂತಾಗಿದೆ.

ಮಹಾಮಾರಿ ಕೋವಿಡ್-19 ನಿಂದಾಗಿ ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿನ ಮೂಲಭೂತ ಸೌಕರ್ಯ ಸಮಸ್ಯೆಗಳು ಉಲ್ಬಣಗೊಂಡಿದೆ. ಅದರಲ್ಲೂ ಮೃತದೇಹಗಳನ್ನಿಡಲು ಫ್ರೀಜರ್ ಗಳಿಲ್ಲದ ಕಾರಣ, ಆಸ್ಪತ್ರೆಯ ತುಂಬೆಲ್ಲಾ ದುರ್ವಾಸನೆ ಹಬ್ಬಿದೆ.

ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ

ಪೋಸ್ಟ್ ಮಾರ್ಟಂ ಗಾಗಿ ಶವಗಳನ್ನಿಡಲು ಫ್ರೀಜರ್ ವ್ಯವಸ್ಥೆ ಅತ್ಯಗತ್ಯ. ಸದ್ಯದ ಪರಿಸ್ಥಿತಿಯಲ್ಲಿ, ವ್ಯಕ್ತಿಯ ಸಾವಿಗೆ ಕೋವಿಡ್-19 ಕಾರಣವೋ, ಅಲ್ವೋ ಎಂಬುದನ್ನು ಖಚಿತಪಡಿಸಿಕೊಳ್ಳಲು ಮೃತದೇಹಗಳಿಗೆ ಜಿಲ್ಲಾಡಳಿತ ಕೋವಿಡ್-19 ಪರೀಕ್ಷೆ ನಡೆಸಬೇಕಿದೆ. ಹೀಗಾಗಿ ಜಿಲ್ಲಾಸ್ಪತ್ರೆಯಲ್ಲಿ ಫ್ರೀಜರ್ ವ್ಯವಸ್ಥೆ ಅತ್ಯವಶ್ಯಕವಾಗಿದೆ. ಹೆಚ್ಚುವರಿ ಫ್ರೀಜರ್ ಗಳು ಬೇಕಾಗಿವೆ ಎಂದು ಜಿಲ್ಲಾಸ್ಪತ್ರೆಯ ಆಡಳಿತ ಪದೇ ಪದೇ ಮನವಿ ಮಾಡಿದ್ದರೂ, ಸರ್ಕಾರ ಮಾತ್ರ ಅದಕ್ಕೆ ಹಣ ಮಂಜೂರು ಮಾಡಿಲ್ಲ.

ಶವಗಳನ್ನು ಸಂರಕ್ಷಿಸಿಡಲು ಐಸ್-ಕ್ಯೂಬ್ ಗಳನ್ನು ಬಳಸುತ್ತಿದೆ

ಶವಗಳನ್ನು ಸಂರಕ್ಷಿಸಿಡಲು ಐಸ್-ಕ್ಯೂಬ್ ಗಳನ್ನು ಬಳಸುತ್ತಿದೆ

ಕಾನೂನಿನ ಪ್ರಕಾರ, ಅಪರಿಚಿತ ಶವಗಳನ್ನು ನಾಲ್ಕು ದಿನಗಳ ಕಾಲ ಸರ್ಕಾರಿ ಶವಾಗಾರದಲ್ಲಿ ಸಂರಕ್ಷಿಸಿಡಬೇಕು. ಕೆಲವೊಮ್ಮೆ ಕೋವಿಡ್-19 ಪರೀಕ್ಷೆಯ ಫಲಿತಾಂಶ ತಡವಾಗಿ ಬರಲಿದ್ದು, ಮೃತದೇಹಗಳನ್ನು ಐದರಿಂದ-ಆರು ದಿನಗಳ ಕಾಲ ಸಂರಕ್ಷಿಸಿಡಬೇಕಾಗುತ್ತದೆ. ಹೀಗಾಗಿ, ಬೇರೆ ದಾರಿ ಇಲ್ಲದೆ ಜಿಲ್ಲಾಸ್ಪತ್ರೆ ಶವಗಳನ್ನು ಸಂರಕ್ಷಿಸಿಡಲು ಐಸ್-ಕ್ಯೂಬ್ ಗಳನ್ನು ಬಳಸುತ್ತಿದೆ.

""ಆಸ್ಪತ್ರೆಯ ಸ್ಥಿತಿಯನ್ನು ವಿವರಿಸಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಇದಕ್ಕೆ ಸರ್ಕಾರ ಶೀಘ್ರವಾಗಿ ಸ್ಪಂದಿಸಿ, 12 ಶವಗಳನ್ನು ಸ್ಟೋರ್ ಮಾಡುವ ಹೊಸ ಫ್ರೀಜರ್ ವ್ಯವಸ್ಥೆಗಾಗಿ ಹಣ ಮಂಜೂರು ಮಾಡುತ್ತದೆ ಎಂಬ ನಿರೀಕ್ಷೆಯಲ್ಲಿದ್ದೇನೆ'' ಎಂದು ಹಾವೇರಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ದಯಾನಂದ್ ತಿಳಿಸಿದ್ದಾರೆ.

ಹೊಸ ಫ್ರೀಜರ್ ವ್ಯವಸ್ಥೆಗೆ ಜಿಲ್ಲಾಡಳಿತ ಅನುಮತಿ ನೀಡಿದೆ

ಹೊಸ ಫ್ರೀಜರ್ ವ್ಯವಸ್ಥೆಗೆ ಜಿಲ್ಲಾಡಳಿತ ಅನುಮತಿ ನೀಡಿದೆ

""ಕಳೆದ ಐದು ವರ್ಷಗಳಿಂದಲೂ ಫ್ರೀಜರ್ ವ್ಯವಸ್ಥೆ ಇಲ್ಲ. ಇದರಿಂದ ಇಲ್ಲಿಯವರೆಗೂ ಸಮಸ್ಯೆ ಉದ್ಭವವಾಗಿಲ್ಲ. ಹೊಸ ಫ್ರೀಜರ್ ವ್ಯವಸ್ಥೆಗೆ ಜಿಲ್ಲಾಡಳಿತ ಅನುಮತಿ ನೀಡಿದೆ. ಶೀಘ್ರದಲ್ಲೇ ಸಮಸ್ಯೆ ಬಗೆಹರೆಯಲಿದೆ'' ಎಂದು ಜಿಲ್ಲಾ ಸರ್ಜನ್ ಡಾ.ಪಿ.ಆರ್.ಹಾವನೂರು ಹೇಳಿದ್ದಾರೆ.

ವ್ಹಾವ್.. ಬಳ್ಳಾರಿಯಲ್ಲಿ 11 ಕೊರೊನಾ ವೈರಸ್ ಸೋಂಕಿತರು ಗುಣಮುಖ!ವ್ಹಾವ್.. ಬಳ್ಳಾರಿಯಲ್ಲಿ 11 ಕೊರೊನಾ ವೈರಸ್ ಸೋಂಕಿತರು ಗುಣಮುಖ!

ಹೊಸ ಫ್ರೀಜರ್ ಗಳನ್ನು ಖರೀದಿಸಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದಿದ್ದಾರೆ ಹಾವೇರಿಯ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಯೋಗೀಶ್ವರ್.

ಖಾಸಗಿ ಆಸ್ಪತ್ರೆಯಿಂದ ಫ್ರೀಜರ್ ತರಿಸಿಕೊಂಡ ವಿಮ್ಸ್

ಖಾಸಗಿ ಆಸ್ಪತ್ರೆಯಿಂದ ಫ್ರೀಜರ್ ತರಿಸಿಕೊಂಡ ವಿಮ್ಸ್

ಬಳ್ಳಾರಿ ಜಿಲ್ಲೆಯ ವಿಜಯನಗರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ವಿಮ್ಸ್) ನಲ್ಲೂ ಇಂಥದ್ದೇ ಪರಿಸ್ಥಿತಿ ಎದುರಾಗಿದೆ. ಕೆಲವು ದಿನಗಳಿಂದ ಫ್ರೀಜರ್ ವ್ಯವಸ್ಥೆ ನಿಷ್ಕ್ರಿಯಗೊಂಡಿದ್ದು, ಶವಗಳನ್ನು ಹಾಗೇ ಸ್ಟೋರ್ ಮಾಡಲಾಗುತ್ತಿದೆ.

ಶವಾಗಾರದ ಸಿಬ್ಬಂದಿಗೆ ಸೇಫ್ಟಿ ಕಿಟ್ ನೀಡಿಲ್ಲ

ಶವಾಗಾರದ ಸಿಬ್ಬಂದಿಗೆ ಸೇಫ್ಟಿ ಕಿಟ್ ನೀಡಿಲ್ಲ

""ಲಾಕ್ ಡೌನ್ ನಿಂದಾಗಿ ಫ್ರೀಜರ್ ವ್ಯವಸ್ಥೆಯನ್ನು ಸರಿ ಮಾಡಲು ಸಾಧ್ಯವಾಗಲಿಲ್ಲ. ಜೆ.ಎಸ್.ಡಬ್ಲ್ಯೂ ಆಸ್ಪತ್ರೆಯಿಂದ ಫ್ರೀಜರ್ ತರಿಸಿಕೊಂಡಿದ್ದೇವೆ. ಅದರಲ್ಲಿ ಒಂದು ಮೃತದೇಹವನ್ನು ಇರಿಸಬಹುದು. ಅವಶ್ಯಕತೆ ಬಿದ್ದರೆ ಮೃತದೇಹಗಳನ್ನು ಜೆ.ಎಸ್.ಡಬ್ಲ್ಯೂ ಆಸ್ಪತ್ರೆಗೆ ಶಿಫ್ಟ್ ಮಾಡುತ್ತೇವೆ'' ಎಂದಿದ್ದಾರೆ ವಿಮ್ಸ್ ನಿರ್ದೇಶಕ ಡಾ.ಬಿ.ದೇವಾನಂದ್.

ಶವಾಗಾರದಲ್ಲಿ ಎಸಿ ವ್ಯವಸ್ಥೆ ಕೂಡ ಇಲ್ಲವಾಗಿದ್ದು, ದುರ್ವಾಸನೆ ಹಬ್ಬಿದೆ. ಶವಾಗಾರದ ಸಿಬ್ಬಂದಿಗೆ ಸೇಫ್ಟಿ ಕಿಟ್ ನೀಡಿಲ್ಲ. ಪೋಸ್ಟ್ ಮಾರ್ಟಂ ಮಾಡುವವರಿಗೂ ಅಗತ್ಯ ಸುರಕ್ಷತಾ ಕಿಟ್ ಕೊಡದಿರುವುದು ವಿಮ್ಸ್ ಆಸ್ಪತ್ರೆಯ ಅವ್ಯವಸ್ಥೆಗೆ ಮತ್ತೊಂದು ಸಾಕ್ಷಿ.

English summary
The freezer system at Haveri District Hospital is inactive and at least no privilege for dead bodies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X