• search
  • Live TV
ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಾಟೀಲ ಪುಟ್ಟಪ್ಪ ನಿಧನ: ಹುಟ್ಟೂರಲ್ಲಿ ಚಿರನಿದ್ರೆಗೆ ಜಾರಿದ ಪಾಪು...

|

ಹಾವೇರಿ/ಹುಬ್ಬಳ್ಳಿ, ಮಾರ್ಚ್ 17; ಸೋಮವಾರ ರಾತ್ರಿ ನಿಧರರಾದ ಹಿರಿಯ ಪತ್ರಕರ್ತ, ಸಾಹಿತಿ, ನಾಡೋಜ ಡಾಕ್ಟರ್ ಪಾಟೀಲ ಪುಟ್ಟಪ್ಪ ಅವರ ಅಂತ್ಯಕ್ರಿಯೆ ಹಾವೇರಿ ಜಿಲ್ಲೆಯ ಹಲಗೇರಿ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಮಂಗಳವಾರ ಸಂಜೆ ಜರುಗಿತು.

ರಾಣೆಬೆನ್ನೂರ ತಾಲೂಕಿನ ಸ್ವಗ್ರಾಮ ಹಲಗೇರಿಯಲ್ಲಿ ಅವರ ಪಿತ್ರಾರ್ಜಿತ ಜಮೀನಿನಲ್ಲಿ ಅಂತ್ಯ ಕ್ರೀಯೆಯನ್ನು ಲಿಂಗಾಯತ ವಿಧಿ ವಿಧಾನಗಳಂತೆ ನೆರವೇರಿಸಲಾಯಿತು.

"ಅರ್ಜೆಂಟಾಗಿ ಮಹಾರಾಷ್ಟ್ರದಲ್ಲಿ ಪಾಟೀಲ ಪುಟ್ಟಪ್ಪನಂತವ ಒಬ್ಬ ಹುಟ್ಟಬೇಕು' ಎಂದಿದ್ರು ಠಾಕ್ರೆ!

ಈ ಸಂದರ್ಭದಲ್ಲಿ ಗೃಹ ಸಚಿವ ಬಸವರಾಜ ಬೋಮ್ಮಾಯಿ, ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಕೃಷಿ ಸಚಿವ ಬಿ.ಸಿ ಪಾಟೀಲ, ಕೂಡಲ ಸಂಗಮದ ಬಸವಮೃತ್ಯುಂಜಯ ಸ್ವಾಮೀಜಿ , ತರಳಬಾಳು ಶಾಖಾಮಠದ ಪಂಡಿತಾರಾದ್ಯ ಸ್ವಾಮೀಜಿ, ಮುಂಡರಗಿಯ ನಿಜಗುಣನಾನಂದ ಸ್ವಾಮೀಜಿ, ಶಾಸಕ ಅರುಣಕುಮಾರ ಗುತ್ತೂರ, ಜಿ.ಪಂ ಅಧ್ಯಕ್ಷ ಬಸನಗೌಡ ದೇಸಾಯಿ, ಮಾಜಿ ಸಚಿವರಾದ ಹೆಚ್.ಕೆ.ಪಾಟೀಲ, ರುದ್ರಪ್ಪ ಲಮಾಣಿ, ಮಾಜಿ ಶಾಸಕ ಬಿ.ಹೆಚ್.ಬನ್ನಿಕೋಡ, ಮಾಜಿ ಸಂಸದ ಐ.ಜಿ.ಸನದಿ ಸೇರೊದಂತೆ ಅನೇಕ ಗಣ್ಯರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು

ಸರ್ಕಾರಿ ಗೌರವ ಸಮರ್ಪಣೆ

ಸರ್ಕಾರಿ ಗೌರವ ಸಮರ್ಪಣೆ

ಹಿರಿಯ ಪತ್ರಕರ್ತ, ನಾಡೋಜ ಡಾ. ಪಾಟೀಲ ಪುಟ್ಟಪ್ಪನವರ ಪಾರ್ಥಿವ ಶರೀರಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಸರ್ಕಾರದ ನಿರ್ದೇಶನದಂತೆ ಜಿಲ್ಲಾಡಳಿತ, ಪೊಲೀಸ್ ಇಲಾಖೆಯು ಗಾಳಿಯಲ್ಲಿ ಮೂರು ಸುತ್ತು ಕುಶಾಲ ತೋಪು ಹಾರಿಸಿ ಅಗಲಿದ ಮಹಾಚೇತನಕ್ಕೆ ಗೌರವ ಸಲ್ಲಿಸಿದವು.

ಸಂಘದ ಆವರಣದಲ್ಲಿ ಅಂತಿಮ ದರ್ಶನ

ಸಂಘದ ಆವರಣದಲ್ಲಿ ಅಂತಿಮ ದರ್ಶನ

ಮಧ್ಯಾಹ್ನ 1 ಗಂಟೆಗೆ ಹುಬ್ಬಳ್ಳಿಯ ವಿಶ್ವೇಶ್ವರ ನಗರದ ಅವರ ಸ್ವಗೃಹ ಪ್ರಪಂಚದಿಂದ ಅವರ ಕರ್ಮಭೂಮಿ, ಕಾರ್ಯಕ್ಷೇತ್ರ, ಕಳೆದ 5 ದಶಕಗಳಿಂದ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ ನಾಡು ನುಡಿಗೆ ಸೇವೆ ಸಲ್ಲಿಸಿದ ಅವರ ನೆಚ್ಚಿನ ಸಂಘದ ಆವರಣದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು.

ಕರ್ನಾಟಕದ ಗಟ್ಟಿದನಿ, ಹೋರಾಟಗಾರ, ಹೆಮ್ಮೆಯ ''ಪಾಪು''

ರಾಷ್ಟ್ರಗೀತೆಯೊಂದಿಗೆ ನಮನ

ರಾಷ್ಟ್ರಗೀತೆಯೊಂದಿಗೆ ನಮನ

ಸರ್ಕಾರದ ಪರವಾಗಿ ಜಿಲ್ಲಾಧಿಕಾರಿ ದೀಪಾ ಚೋಳನ್, ಅವಳಿ ನಗರ ಪೆÇಲೀಸ್ ಆಯುಕ್ತ ಆರ್. ದಿಲೀಪ್, ಎಸ್ ಪಿ ವರ್ತಿಕಾ ಕಟಿಯಾರ್, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ, ಡಿಸಿಪಿ ಕೃಷ್ಣಕಾಂತ ಸೇರಿದಂತೆ ಹಲವು ಗಣ್ಯರು ಪುಷ್ಪ ಸಮರ್ಪಿಸಿ ಅಂತಿಮ ನಮನ ಸಲ್ಲಿಸಿದರು. ಪೆÇಲೀಸ್ ಬ್ಯಾಂಡ್‍ನವರು ಶಿಸ್ತು ಬದ್ಧವಾಗಿ ರಾಷ್ಟ್ರಗೀತೆಯೊಂದಿಗೆ ಗಾಳಿಯಲ್ಲಿ ಮೂರು ಸುತ್ತು ಕುಶಾಲ ತೋಪು ಹಾರಿಸಿ ಶತಾಯುಷಿ ಪಾಟೀಲ ಪುಟ್ಟಪ್ಪ ಅವರಿಗೆ ಅರ್ಥಪೂರ್ಣ ನಮನ ಸಲ್ಲಿಸಿದರು.

ಗಣ್ಯರಿಂದ ಅಂತಿಮ ನಮನ

ಗಣ್ಯರಿಂದ ಅಂತಿಮ ನಮನ

ಹಿರಿಯ ಸಾಹಿತಿಗಳಾದ ಡಾ. ಚೆನ್ನವೀರ ಕಣವಿ, ಡಾ. ಮಾಲತಿ ಪಟ್ಟಣಶೆಟ್ಟಿ, ಡಾ.ಗುರುಲಿಂಗ ಕಾಪಸೆ, ಡಾ. ಸೋಮಶೇಖರ ಇಮ್ರಾಪೂರ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ, ವಿಜ್ಞಾನಿ ಡಾ. ಎಸ್.ಎಮ್. ಶಿವಪ್ರಸಾದ, ಕರ್ನಾಟಕ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳಾದ ಶಿವಣ್ಣ ಬೆಲ್ಲದ, ಪ್ರಕಾಶ ಉಡಿಕೇರಿ, ಬಸವಪ್ರಭು ಹೊಸಕೇರಿ, ವಿಶ್ವೇಶ್ವರಿ ಹಿರೇಮಠ, ಬಸವಲಿಂಗಯ್ಯ ಹಿರೇಮಠ, ಕೃಷ್ಣ ಜೋಶಿ, ನಿಂಗಣ್ಣ ಕುಂಟಿ, ಬೇಂದ್ರೆ ಸ್ಮಾರಕ ರಾಷ್ಟ್ರೀಯ ಟ್ರಸ್ಟ್ ಅಧ್ಯಕ್ಷ ಡಾ.ಡಿ.ಎಂ.ಹಿರೇಮಠ, ಗುಬ್ಬಚ್ಚಿಗೂಡು ಪತ್ರಿಕೆಯ ಶಂಕರ ಹಲಗತ್ತಿ ಮತ್ತಿತರರು ಉಸ್ಥಿತರಿದ್ದರು. ಮಧ್ಯಾಹ್ನ 2 ಗಂಟೆಗೆ ಧಾರವಾಡದಿಂದ ಅಮರ ಘೋಷಣೆಗಳೊಂದಿಗೆ ಪಾಪು ಅವರ ಪಾರ್ಥಿವ ಶರೀರವನ್ನು ಅವರ ಸ್ವಗ್ರಾಮ ರಾಣೆಬೆನ್ನೂರು ತಾಲೂಕಿನ ಹಲಗೇರಿಗೆ ಗೌರವಪೂರ್ವಕವಾಗಿ ಬೀಳ್ಕೊಡಲಾಗಿತ್ತು

English summary
Nadoja Patil Puttappa Cremation Done In Haveri. Patil puttappa served more than 50 years for kannada, karnataka
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more