ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

"ಯಡಿಯೂರಪ್ಪ ಅವರನ್ನು ಅಲುಗಾಡಿಸಲು ಯಾರಿಂದಲೂ ಆಗಲ್ಲ"

By Lekhaka
|
Google Oneindia Kannada News

ಹಾವೇರಿ, ನವೆಂಬರ್ 2: ಸಿಎಂ ಯಡಿಯೂರಪ್ಪ ಅವರನ್ನು ಅಲುಗಾಡಿಸಲು ಯಾರಿಂದಲೂ ಆಗಲ್ಲ. ಅವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರದ ಅಧಿಕಾರವಧಿ ಪೂರ್ಣವಾಗುತ್ತದೆ. ಯಾರೋ ಏನೋ ಹೇಳುತ್ತಾರೆಂದು ತಲೆಕೆಡಿಸಿಕೊಳ್ಳಬಾರದು ಎಂದು ಪ್ರತಿಕ್ರಿಯಿಸಿದ್ದಾರೆ ಕೃಷಿ ಸಚಿವ ಬಿ.ಸಿ.ಪಾಟೀಲ್.

ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಯಡಿಯೂರಪ್ಪ ಅವರ ನೇತೃತ್ವದಲ್ಲೇ ಮುಂದಿನ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆ ನಡೆಯುತ್ತದೆ. ಬಾಯಿ ಚಟಕ್ಕೆ ಕೆಲವರು ಏನೇನೋ ಹೇಳ್ತಾರೆ. ಪ್ರಚಾರಕ್ಕಾಗಿ ಮಾತನಾಡುವವರ ಬಗ್ಗೆ ತಲೆಕೆಡಿಸಿಕೊಳ್ಳಬಾರದು" ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಾಮಿಡಿ ಆಕ್ಟರ್! ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಾಮಿಡಿ ಆಕ್ಟರ್!

ಪಕ್ಷದ ವಿರುದ್ಧ ಯಾರೇ ಮಾತನಾಡಿದರೂ ಕ್ರಮ ತೆಗೆದುಕೊಳ್ಳಲಾಗುವುದು. ಸದ್ಯಕ್ಕೆ ಚುನಾವಣೆ ಇರುವುದರಿಂದ ಕ್ರಮ ತೆಗೆದುಕೊಳ್ಳುವುದು ತಡವಾಗಿದೆ. ಹೈಕಮಾಂಡ್ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

Haveri: Minister BC Patil Reaction To Siddaramaiah Statement On BJP

ಇದೇ ಸಂದರ್ಭ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, "ಮನುಷ್ಯರನ್ನು ನಾಯಿ, ಬಂಡೆ, ಹುಲಿ, ಟಗರಿಗೆ ಹೋಲಿಸುವುದು ಯಾವ ಸಂಸ್ಕೃತಿ? ಇದು ಸಿದ್ದರಾಮಯ್ಯ ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಯಡಿಯೂರಪ್ಪ ಸಿಎಂ ಆಗಿದ್ದಕ್ಕೆ ಸಿದ್ದರಾಮಯ್ಯ ವಿರೋಧ ಪಕ್ಷದ ಸ್ಥಾನದಲ್ಲಿದ್ದಾರೆ. ಆ ಸ್ಥಾನವೂ ಅಲ್ಲಾಡುತ್ತದೆ ಅನ್ನೋ ಭಯದಿಂದ ಹೀಗೆ ಮಾತನಾಡುತ್ತಿದ್ದಾರೆ. ನಾಯಿಗಳಿಗೆ ನಿಯತ್ತು ಇರುತ್ತದೆ. ಅದು ಅವರಿಗೆ ಗೊತ್ತಿರಬಹುದು" ಎಂದು ವ್ಯಂಗ್ಯ ಮಾಡಿದರು.

Recommended Video

Sira , JDS ಅಭ್ಯರ್ಥಿ ಆಮ್ಮಾಜಮ್ಮ ಅವರು ಮತ ಚಲಾಯಿಸುವ ಮುನ್ನ ಮಾಡಿದ್ದೇನು | Oneindia Kannada

ಬಿಜೆಪಿಗೆ ಸೇರಿರುವ ಶಾಸಕರದ್ದು ನಾಯಿ ಪಾಡಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು.

English summary
"No body can change CM Yediyurappa. BJP will complete its tenure with the leadership of yediyurappa" said Agriculture minister BC Patil in haveri,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X