ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾವೇರಿ: "ದಾಳಿ ಮಾಡಿದ ದೇಶಕ್ಕೆ ಪ್ರತ್ಯುತ್ತರ ಕೊಡೋದು ನಮ್ಮ ಕರ್ತವ್ಯ''

|
Google Oneindia Kannada News

ಹಾವೇರಿ, ಜೂನ್ 21: ಬೇರೊಂದು ದೇಶವು ನಮ್ಮ ದೇಶದ ಮೇಲೆ ದಾಳಿ‌ ಮಾಡಿದಾಗ ಪ್ರತ್ಯುತ್ತರ ಕೊಡುವುದು ನಮ್ಮ ಕರ್ತವ್ಯ, ನಮ್ಮ ಪ್ರಧಾನಿಗಳು ಅದನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದರು.

Recommended Video

ಕಳೆದ 2 ವಾರಗಳಲ್ಲಿ ಪೆಟ್ರೋಲ್ ಬೆಲೆಯಲ್ಲಿ 7 ₹ ಹೆಚ್ಚಳ | Petrol Price Hiked | Oneindia Kannada

ಹಾವೇರಿ ಜಿಲ್ಲೆಯ ಹಿರೇಕೆರೂರು ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದವರಿಗೆ ಟೀಕೆ ಮಾಡುವುದು ಬಿಟ್ಟರೆ ಬೇರೆ ಗೊತ್ತಿಲ್ಲ, ಟೀಕೆ ಮಾಡುವುದೇ ಅವರ ಉದ್ಯೋಗವೆಂದು ತಿಳ್ಕೊಂಡಿದ್ದಾರೆ. ಕೊರೊನಾ ವೈರಸ್ ಗೂ ಟೀಕೆ, ಪ್ರತ್ಯುತ್ತರ ಕೊಟ್ಟರೂ ಟೀಕೆ ಮಾಡೋದು ಅಂದರೆ ಟೀಕೆಗೆ ಅರ್ಥವಿರೋದಿಲ್ಲ ಎಂದು ವಿಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.

ಹಾವೇರಿಯಲ್ಲಿ ಕಳಪೆ ಬಿತ್ತನೆ ಬೀಜ ವಿತರಣೆ: ಕೃಷಿ ಇಲಾಖೆ ಮೌನಹಾವೇರಿಯಲ್ಲಿ ಕಳಪೆ ಬಿತ್ತನೆ ಬೀಜ ವಿತರಣೆ: ಕೃಷಿ ಇಲಾಖೆ ಮೌನ

ಕೊರೊನಾ ವೈರಸ್ ಸೋಂಕಿಗಿಂತ ದೊಡ್ಡ ಗ್ರಹಣ ಹಿಡಿಯೋದಿಲ್ಲ. ಗ್ರಹಣ ಅಂತಾ ಯಾರೂ ಉಸಿರಾಡೋದನ್ನು ನಿಲ್ಲಿಸಿಲ್ಲ. ಗ್ರಹಣ ಎಂಬುದು ಪ್ರಕೃತಿಯಲ್ಲಿ ನಡೆಯುವ ಚಟುವಟಿಕೆ ಎಂದು ಬಿ.ಸಿ ಪಾಟೀಲ್ ಹೇಳಿದರು.

Haveri: Minister BC Patil React About India-China Clash In Border

ಗ್ರಹಣಕ್ಕೆ ಅಷ್ಟೊಂದು ಮಹತ್ವ ಕೊಟ್ಟು, ಮೂಢನಂಬಿಕೆ ಬಿತ್ತುವುದು ಸರಿಯಲ್ಲ, ಗ್ರಹಣ ಹಿಡಿದಿದೆ ಅಂತಾ ಎಲ್ಲರೂ ಒಂದು ಕ್ಷಣ ಉಸಿರು ನಿಲ್ಲಿಸಲಿ ನೋಡೋಣ ಎಂದು ಸವಾಲೆಸೆದರು.

ರೈತರನ್ನು ನೆನೆಯಲು ನಮಸ್ಕಾರ, ಅನ್ನದಾತನಿಗೊಂದು ನಮನ, ಜೈ ಕಿಸಾನ್ ಎಂಬ ಕಾಲರ್ ಟ್ಯೂನ್ ನ್ನು ಕೃಷಿ ಇಲಾಖೆಯ ಎಲ್ಲ ಫೋನ್ ಗಳಿಗೆ ಕಾಲರ್ ಟ್ಯೂನ್ ಅಳವಡಿಸಲು ಆದೇಶ ಹೊರಡಿಸುವಂತೆ ಸುತ್ತೋಲೆ ಕಳಿಸಿದ್ದೇನೆ ಎಂದು ಕೃಷಿ ಸಚಿವ ತಿಳಿಸಿದರು.

ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಕೃಷಿ ಸಚಿವ ಬಿ.ಸಿ.ಪಾಟೀಲ್ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಕೃಷಿ ಸಚಿವ ಬಿ.ಸಿ.ಪಾಟೀಲ್

ಇದೇ ಸಂದರ್ಭದಲ್ಲಿ ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಸಹಕಾರ ಸಚಿವ ಎಸ್.ಟಿ ಸೋಮಶೇಖರ್, ಅದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಪರಮಾಧಿಕಾರ, ನನಗಾಗಲಿ, ಬಿ.ಸಿ ಪಾಟೀಲ್ ಅವರಿಗಾಗಲಿ ಮಾತನಾಡುವ ಹಕ್ಕಿಲ್ಲ ಎಂದರು.

ಬಿಜೆಪಿ ಪಕ್ಷದ ಹೈಕಮಾಂಡ್ ಇದೆ ಮತ್ತು ಸಿಎಂ ಯಡಿಯೂರಪ್ಪನವರು ತೀರ್ಮಾನ ಮಾಡುತ್ತಾರೆ. ಮಾಜಿ ಸಚಿವ ಎಚ್.ವಿಶ್ವನಾಥ್ ಗೆ ವಿಧಾನ ಪರಿಷತ್ ಟಿಕೆಟ್ ಸಿಗದ ವಿಚಾರಕ್ಕೆ ಮಾತನಾಡಿದ ಅವರು, ಅದರ‌ ಬಗ್ಗೆ ಹೈಕಮಾಂಡ್ ಗಮನ ಹರಿಸುತ್ತದೆ, ನಮ್ಮ ಸ್ಥಾನಮಾನಕ್ಕೆ ತಕ್ಕಂತೆ ನಾವು ಪ್ರಯತ್ನಿಸಿದ್ದೇವೆ ಎಂದು ಸಚಿವ ಎಸ್.ಟಿ ಸೋಮಶೇಖರ್ ಹೇಳಿದರು.

English summary
"It is our duty to reply when another country attacks our country. Our Prime Minister is handling it effectively' Agriculture Minister BC Patil said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X