ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Exclusive Report: ಹಾವೇರಿ ಹೈದನಿಗೆ ಖಾಕಿ ಕಲಿಸಿದ ಪಾಠ ಬಲುರೋಚಕ!

|
Google Oneindia Kannada News

ಹಾವೇರಿ, ಏಪ್ರಿಲ್.26: ಕೊರೊನಾ ವೈರಸ್ ಸೋಂಕು ಹರಡುವ ಭೀತಿಯಿದ್ದು ಮನೆಯಲ್ಲಿರಿ ಅಂತಾ ಬಾರಿ ಬಾರಿ ಬುದ್ಧಿ ಹೇಳಿದರೂ ಜನರಿಗೆ ಅರ್ಥವಾಗುತ್ತಿಲ್ಲ. ಹಠಕ್ಕೆ ಬಿದ್ದಂತೆ ಹಾವೇರಿಯಲ್ಲಿ ರಸ್ತೆಗೆ ಇಳಿದ ವ್ಯಕ್ತಿಯೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ.

ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲೂಕಿನ ರಟ್ಟಿಹಳ್ಳಿ ಗ್ರಾಮದಲ್ಲಿ ಸುಖಾಸುಮ್ಮನೆ ಜಬೀವುಲ್ಲಾ ಮೆಹಬೂಬಸಾಬ್ ಖಾಜಿ ಎಂಬಾತ ರಸ್ತೆಗಳಲ್ಲಿ ಅಲೆದಾಡುತ್ತಿದ್ದನು. ಈ ವ್ಯಕ್ತಿ ಪ್ರಶ್ನೆ ಮಾಡಿದ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ್ದಾನೆ.

ಕೊರೊನಾ ಕಾಟದ ನಡುವೆ ಕಳಪೆ ಬಿಡಿ ಬೀಜ ಬಿತ್ತನೆ ಮಾರಾಟ!ಕೊರೊನಾ ಕಾಟದ ನಡುವೆ ಕಳಪೆ ಬಿಡಿ ಬೀಜ ಬಿತ್ತನೆ ಮಾರಾಟ!

ನಡುರಸ್ತೆಯಲ್ಲಿ ಪೊಲೀಸರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಅಲ್ಲದೇ ವಾಹನ ತಪಾಸಣೆಗೆ ಕರ್ತವ್ಯದಲ್ಲಿ ನಿರತರಾಗಿದ್ದ ಪೊಲೀಸ್ ಮತ್ತು ಹೋಂಗಾರ್ಡ ಗಳಿಗೆ ಪ್ರಾಣ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆ ಆರೋಪಿ ಜಬೀವುಲ್ಲಾ ಮೆಹಬೂಬಸಾಬ್ ಖಾಜಿಯನ್ನು ಪೊಲೀಸರು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ.

Lockdown Violation: The Accused Detained By The Police For Obscene Noises

353 ಅಡಿ ಆರೋಪಿ ವಿರುದ್ಧ ಕೇಸ್:

ಕೊರೊನಾ ವೈರಸ್ ಹರಡುವಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಭಾರತ ಲಾಕ್ ಡೌನ್ ಘೋಷಿಸಿದ್ದು ಮನೆಯಲ್ಲಿ ಇರುವಂತೆ ಮನವಿ ಮಾಡಿಕೊಂಡರೂ ಮಾತು ಕೇಳದೇ ರಸ್ತೆಗಿಳಿದಿದ್ದೂ ಅಲ್ಲದೇ ಪೊಲೀಸರಿಗೇ ಬೆದರಿಕೆ ಹಾಕಿದ ಜಬೀವುಲ್ಲಾ ಮೆಹಬೂಬಸಾಬ ಖಾಜಿ ವಿರುದ್ಧ 353ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

English summary
Lockdown Violation: The Accused Detained By The Police For Obscene Noises.=
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X