ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾವೇರಿಯಲ್ಲಿ ಲಾಕ್ ಡೌನ್ ನಿಯಮ ಉಲ್ಲಂಘಿಸಿ ಸಾಮೂಹಿಕ ನಮಾಜ್

|
Google Oneindia Kannada News

ಹಾವೇರಿ, ಮೇ 25: ದೇಶದಾದ್ಯಂತ ಲಾಕ್ ಡೌನ್ 4.0 ನಿಯಮ ಜಾರಿಯಿದ್ದರೂ, ಅದನ್ನು ಉಲ್ಲಂಘಿಸಿ ನೂರಾರು ಜನರು ಒಂದೇ ಕಡೆ ಸೇರಿ ಸಾಮೂಹಿಕ ನಮಾಜ್ ಮಾಡಿರುವ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಗರದಲ್ಲಿ ನಡೆದಿದೆ.

Recommended Video

ರಂಜಾನ್,ಹೊಸ ಬಟ್ಟೆ ಯಾವ್ದೂ ಬೇಡ,ದೇಶಕ್ಕಾಗಿ ತ್ಯಾಗ ಮಾಡಿ ಎಂದ ಮುಸ್ಲಿಂ ಮುಖಂಡ | Oneindia Kannada

ಸೋಮವಾರ ಬೆಳಿಗ್ಗೆ 4 ಗಂಟೆಯಿಂದಲೇ ರಂಜಾನ್ ಹಬ್ಬದ ಪ್ರಯುಕ್ತ ನಮಾಜ್ ಮಾಡಿದ್ದಾರೆ. ಪವಿತ್ರ ರಂಜಾನ್ ಹಬ್ಬವನ್ನು ಸಾರ್ವಜನಿಕವಾಗಿ ಆಚರಿಸಲು ರಾಣೇಬೆನ್ನೂರು ನಗರದ ಜನತೆ ಮುಂದಾಗಿದ್ದಾರೆ.

ಹಾವೇರಿ; ಇನ್ನೇನು ಶವ ಹೂಳಬೇಕೆನ್ನುವಷ್ಟರಲ್ಲಿ ತಡೆದು ಗಂಟಲ ದ್ರವ ಸಂಗ್ರಹಿಸಿದ ಸಿಬ್ಬಂದಿಹಾವೇರಿ; ಇನ್ನೇನು ಶವ ಹೂಳಬೇಕೆನ್ನುವಷ್ಟರಲ್ಲಿ ತಡೆದು ಗಂಟಲ ದ್ರವ ಸಂಗ್ರಹಿಸಿದ ಸಿಬ್ಬಂದಿ

ಇನ್ನು ಭಾನುವಾರ ಕೂಡಾ ಲಾಕ್ ಡೌನ್ ಜಾರಿಯಿದ್ದರೂ ನಿಯಮ ಉಲ್ಲಂಘಿಸಲಾಗಿದೆ. ಸಾಮಾಜಿಕ ಅಂತರವಿಲ್ಲದೇ ಮತ್ತು ಮಾಸ್ಕ್ ಇಲ್ಲದೆ ನಮಾಜ್ ಮಾಡಿದ್ದಾರೆ. ಇದರ ವಿಡಿಯೋ ಚಿತ್ರೀಕರಣ ಮಾಡಲು ಮುಂದಾದಾಗ ಕೆಲವು ಮುಸ್ಲಿಂ ಯುವಕರು ಬೆದರಿಸಿದ್ದಾರೆ.

Lockdown Violation: Mass Namaz In Haveri

ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಗರದ ಇಸ್ಲಾಂಪುರ ಓಣಿಯಲ್ಲಿ ನಮಾಜ್ ಮಾಡಲಾಗಿದೆ. ಪೊಲೀಸರಿಗೆ ವಿಷಯ ತಿಳಿದ ಬಳಿಕ ಸ್ಥಳಕ್ಕೆ ಆಗಮಿಸಿದ್ದಾರೆ. ಆ ನಂತರ ಪ್ರಾರ್ಥನಾ ಸ್ಥಳದಿಂದ ಜನರು ಕಾಲ್ಕಿತ್ತಿದ್ದಾರೆ.

ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂದರ್ಭದಲ್ಲಿ ನೂರಾರು ಜನ ಒಟ್ಟಿಗೆ ಸೇರುವ ಅಗತ್ಯ ಇತ್ತೇ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ 6 ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

English summary
Hundreds of people did Mass Namaz in Ranebennur city of Haveri district in spite of the Lockdown 4.0.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X