• search
  • Live TV
ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇವರನ್ನು ನಗಿಸಿದರೆ ಸಿಗುತ್ತೆ 1 ಲಕ್ಷ 50 ಸಾವಿರ ರೂಪಾಯಿ ಬಹುಮಾನ

|

ರಾಣೆಬೆನ್ನೂರು ಮಾರ್ಚ್ 10: ಒಬ್ಬ ಪುರುಷ, ಒಬ್ಬ ಮಹಿಳೆ ಇಬ್ಬರು ಗಂಭೀರವಾಗಿ ಕುಳಿತುಕೊಂಡಿರುತ್ತಾರೆ. ಇವರನ್ನು ನಗಿಸಿದರೆ, ಬರೋಬ್ಬರಿ 1 ಲಕ್ಷ 50 ಸಾವಿರ ರೂಪಾಯಿ ಸಿಗುತ್ತದೆ. ಹೀಗೆ ಹೇಳಿದಾಗ ಒಂದು ಪ್ರಯತ್ನ ಮಾಡಬಹುದು ಅಂತ ಅನೇಕರಿಗೆ ಅನಿಸಬಹುದು. ಆದರೆ, ಈ ಪ್ರಯತ್ನ 62 ವರ್ಷದಿಂದ ಯಶಸ್ಸು ಕಂಡಿಲ್ಲ.

ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಹೋಳಿ ಹಬ್ಬಕ್ಕೆ ವಿಶೇಷ ಕಾರ್ಯಕ್ರಮವೊಂದು ನಡೆಯುತ್ತದೆ. ರತಿ ಹಾಗೂ ಮನ್ಮಥ ವೇಷದಲ್ಲಿ ಕುಳಿತ ಪಾತ್ರಗಳನ್ನು ನಗಿಸುವ ಸ್ಪರ್ಧೆ ಇದಾಗಿದೆ. ಕಾರ್ಯಕ್ರಮಕ್ಕೆ ಬಂದ ಯಾರೂ ಬೇಕಾದರೂ, ಈ ಸವಾಲನ್ನು ಸ್ವೀಕರಿಸಬಹುದಾಗಿದೆ.

ಕರಾವಳಿಯಲ್ಲಿ ವಿಶಿಷ್ಟ ಬಗೆಯ ಹೋಳಿ ಹಬ್ಬ ಆಚರಣೆ

ಕಳೆದ 62 ವರ್ಷದಿಂದ ಸ್ಪರ್ಧೆ ನಡೆಯುತ್ತಿದೆ. 21 ವರ್ಷಗಳಿಂದ ಗದಿಗೆಪ್ಪ ರೊಡ್ಡನವರ ಮನ್ಮಥನ ವೇಷ, ಕುಮಾರ ಹಡಪದ ರತಿ ವೇಷ ತೊಟ್ಟಿದ್ದಾರೆ. ಈವರೆಗೆ ಇವರನ್ನು ನಗಸಲು ಯಾರಿದಂದಲೂ ಆಗಿಲ್ಲ.

ಸಾವಲು ಸ್ವೀಕರಿಸುವ ಜನರು, ನಗಿಸಲು ಏನೇನೋ ಸರ್ಕಸ್ ಮಾಡುತ್ತಾರೆ. ತಮಾಷೆಯ ಮಾತುಗಳನ್ನು ಹೇಳಿ, ವಿವಿಧ ಭಂಗಿಯಲ್ಲಿ ಕುಣಿದು ನಗಿಸಲು ಪ್ರಯತ್ನ ಮಾಡುತ್ತಾರೆ. ರತಿ, ಮನ್ಮಥನನ್ನು ಏನೇನೋ ಮಾತಾನಾಡಿಸುತ್ತಾರೆ. ಆದರೆ, ಅವರು ಮಾತ್ರ ಗಂಭೀರವಾಗಿ ಕುಳಿತಿರುತ್ತಾರೆ..

ಮುಂಬೈನಲ್ಲಿ ಕೊರೊನಾ ವೈರಸ್‌ ಪ್ರತಿಕೃತಿ ಸುಟ್ಟು ಹೋಳಿ ಸಂಭ್ರಮಾಚರಣೆ

ಇಂದು ಕೂಡ ಈ ಕಾರ್ಯಕ್ರಮ ರಾಣೆಬೆನ್ನೂರಿನಲ್ಲಿ ನಡೆಯಲಿದೆ. ದೊಡ್ಡ ಪೇಟೆ ರಾಮಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಕಾರ್ಯಕ್ರಮ ಜರುಗುತ್ತಿದೆ.

English summary
Laughing competition held at ranibennur on the occasion of Holi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X