ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರವಾರ ದೋಣಿ ದುರಂತ : ಹಾವೇರಿಯ ಒಂದೇ ಕುಟುಂಬದ 9 ಜನರ ಸಾವು

|
Google Oneindia Kannada News

ಹಾವೇರಿ, ಜನವರಿ 23 : ಕಾರವಾರದಲ್ಲಿ ನಡೆದ ದೋಣಿ ದುರಂತದಲ್ಲಿ ಹಾವೇರಿಯ ಒಂದೇ ಕುಟುಂಬದ 9 ಜನರು ಮೃತಪಟ್ಟಿದ್ದಾರೆ. ಬುಧವಾರ ಸಾಮೂಹಿಕ ಅಂತ್ಯಸಂಸ್ಕಾರವನ್ನು ಮಾಡಲಾಯಿತು.

ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಹೊಸೂರು ಗ್ರಾಮದಲ್ಲಿ ಈಗ ಸ್ಮಶಾನ ಮೌನ ಆವರಿಸಿದೆ. ಕಾರವಾರ ಬಳಿಯ ಕೂರ್ಮಗಡದಲ್ಲಿ ನಡೆದ ದೋಣಿ ದುರಂತದಲ್ಲಿ ಒಂದೇ ಕುಟುಂಬದ 9 ಜನರು ಮೃತಪಟ್ಟಿದ್ದಾರೆ. 8 ವರ್ಷದ ಬಾಲಕ ಮಾತ್ರ ಪವಾಡಸದೃಶ ರೀತಿಯಲ್ಲಿ ಬದುಕುಳಿದಿದ್ದಾನೆ.

ಕಾರವಾರ ದೋಣಿ ದುರಂತ : ಸಾವಿನ ಸಂಖ್ಯೆ 13ಕ್ಕೆ ಏರಿಕೆಕಾರವಾರ ದೋಣಿ ದುರಂತ : ಸಾವಿನ ಸಂಖ್ಯೆ 13ಕ್ಕೆ ಏರಿಕೆ

ಹೊಸೂರು ಗ್ರಾಮದಲ್ಲಿ ಇಂದು ಮೃತಪಟ್ಟವರ ಸಾಮೂಹಿಕ ಅಂತ್ಯ ಸಂಸ್ಕಾರ ನಡೆಯಿತು. ನೂರಾರು ಜನರು ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡು ಮೃತರ ಅಂತಿಮ ದರ್ಶನದಲ್ಲಿ ಪಾಲ್ಗೊಂಡರು. ಬದುಕುಳಿದಿರುವ ಗಣೇಶನಿಗೆ ಸಾಂತ್ವನ ಹೇಳಿದರು.

ಕಾರವಾರ ದೋಣಿ ದುರಂತ : ಸರ್ಕಾರದಿಂದ ಪರಿಹಾರ ಘೋಷಣೆಕಾರವಾರ ದೋಣಿ ದುರಂತ : ಸರ್ಕಾರದಿಂದ ಪರಿಹಾರ ಘೋಷಣೆ

Karwar boat tragedy

ಮೃತಪಟ್ಟವರ ವಿವರ : ಮೃತಪಟ್ಟವರಲ್ಲಿ ಪರಶರಾಮ (38), ಭಾರತಿ (28), ಸಂಜೀವಿನಿ (14), ಸೌಜನ್ಯ (13), ನಿರ್ಮಲಾ (24), ಕಿರಣ (5), ಅರುಣ (2) ಮೃತದೇಹಗಳು ಪತ್ತೆಯಾಗಿದ್ದವು ಗ್ರಾಮದಲ್ಲಿ ಇಂದು ಸಾಮೂಹಿಕ ಅಂತ್ಯ ಸಂಸ್ಕಾರ ನಡೆಸಲಾಯಿತು.

ಕಾರವಾರ: ಭೀಕರ ದೋಣಿ ದುರಂತ 9 ಮಂದಿ ಸಾವುಕಾರವಾರ: ಭೀಕರ ದೋಣಿ ದುರಂತ 9 ಮಂದಿ ಸಾವು

ಭಾರತೀಯ ನೌಕಾಪಡೆ ಮತ್ತು ತಟರಕ್ಷಕದಳದ ಸಿಬ್ಬಂದಿ ಇಂದು ಇಬ್ಬರ ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ. ಇದರಿಂದಾಗಿ ಕಾರವಾರ ದೋಣಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.

ಶಿಗ್ಗಾಂವಿ ಶಾಸಕರ ಬಸವರಾಜ ಬೊಮ್ಮಾಯಿ ಮೃತರ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಮೃತರ ಕುಟುಂಬಕ್ಕೆ 5 ಲಕ್ಷ ರೂ.ಗಳನ್ನು ಸರ್ಕಾರ ಪರಿಹಾರವಾಗಿ ನೀಡಬೇಕು ಎಂದು ಒತ್ತಾಯಿಸಿದರು.

English summary
9 members of the same family died in the Karwar boat tragedy on January 21, 2019. Mass cremation held in Haveri district Hosuru village on January 23.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X