• search
  • Live TV
ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಿವಮೊಗ್ಗ ಜಿಲ್ಲೆಗೆ ಹೆಚ್ಚಿನ ಅನುದಾನ, ನೋಟ್ ಪ್ರಿಂಟ್ ಮಹಿಮೆ: ಎಚ್ಕೆಪಿ

|

ಹಾವೇರಿ, ಆಗಸ್ಟ್‌ 14: ಪ್ರವಾಹ ಪೀಡಿತ ಜಿಲ್ಲೆಗಳಿಗೆ ಅನುದಾನ ನೀಡಲು ನಾನು ನೋಟ್‌ ಪ್ರಿಂಟ್‌ ಮಾಡುತ್ತಿಲ್ಲ ಎಂದ ಹೇಳೀಕೆ ನೀಡಿರುವ ಮುಖ್ಯಮಂತ್ರಿ ಬಿ ಎಸ್‌ ವೈ ವಿರುದ್ದ ಕೆಪಿಸಿಸಿ ಪ್ರವಾಹ ಅಧ್ಯಯನ ಸಮಿತಿ ಅಧ್ಯಕ್ಷರಾದ ಎಚ್‌ ಕೆ ಪಾಟೀಲ್‌ ವಾಗ್ದಾಳಿ ನಡೆಸಿದ್ದಾರೆ.

ಹಾವೇರಿ ಜಿಲ್ಲೆಯಲ್ಲಿಂದು ಪ್ರವಾಹ ಪೀಡಿತ ಪ್ರದೇಶಗಳೀಗೆ ಭೇಟಿ ನೀಡಿ ವರದಾ ಹಾಗೂ ಧರ್ಮಾ ನದಿಗಳ ನೆರೆಯಿಂದಾಗಿ ಹಾನಿಗೋಳಗಾಗಿರುವ ಗ್ರಾಮಗಳೀಗೆ ಭೇಟ್ಟಿಯಾಗಿ, ಜನರನ್ನು ಸಂತೈಸಿದರು ಹಾಗೂ ಮಾಹಿತಿ ಪಡೆದರು, ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಕೇಳಿದಷ್ಟು ಹಣ ಕೊಡಲು ನೋಟು ಪ್ರಿಂಟ್ ಮಾಡುವುದಿಲ್ಲ: ಯಡಿಯೂರಪ್ಪ

"ಮುಖ್ಯಮಂತ್ರಿಗಳು ತಮ್ಮ ತವರು ಜಿಲ್ಲೆಯಾದ ಶಿವಮೊಗ್ಗಕ್ಕೆ 50 ಕೋಟಿ ರೂಪಾಯಿಗಳ ಅನುದಾನ ನೀಡಿದ್ದಾರೆ. ಅದೇ ಬೇರೆ ಜಿಲ್ಲೆಗಳಿಗೆ ಅನುದಾನ ನೀಡಲು ನೋಟ್‌ ಪ್ರಿಂಟ್‌ ಮಾಡುತ್ತಿಲ್ಲ ಎಂದು ಹೇಳಿಕೆ ನೀಡುತ್ತಾರೆ. ಹಾಗಾದರೆ, ತಮ್ಮ ಜಿಲ್ಲೆಗೆ ಅನುದಾನ ನೀಡುವುದಕ್ಕೆ ನೋಟ್‌ ಪ್ರಿಂಟ್‌ ಮಾಡಿದ್ದಾರೆಯೆ ಎಂದು ಪ್ರಶ್ನಿಸಿದ ಅವರು, ಪ್ರವಾಹ ಪರಿಹಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ" ಎಂದು ಹೇಳಿದರು.

"ರಾಜಕೀಯ ಮಾಡುವುದು ಇಂತಹ ಸಂಧರ್ಭಗಳಲ್ಲಿ ಅಲ್ಲ. ಇದೇ ರೀತಿಯ ಮನಸ್ಥಿತಿ ಮುಂದುವರೆದಲ್ಲಿ ಪ್ರತಿಪಕ್ಷವಾಗಿ ರಾಜ್ಯಾದ್ಯಂತ ದೊಡ್ಡ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಇದೇ ವೇಳೆ ರಾಜ್ಯದಲ್ಲಿ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿನ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ನಡೆದಿಲ್ಲ. ಪ್ರವಾಹ ಪರಿಸ್ಥಿತಿ ಸುಧಾರಿಸಿದ ನಂತರವೂ ಕೂಡಾ ಶಾಲೆಗಳಲ್ಲಿ ಸರಿಯಾದ ವ್ಯವಸ್ಥೆ ಇಲ್ಲದೆ ಪಾಠ ಪ್ರವಚನ ನಡೆಯಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯ ಸರಕಾರ ಈ ಜಿಲ್ಲೆಗಳಲ್ಲಿ ಶೈಕ್ಷಣಿಕ ವರ್ಷವನ್ನು ಸೆಪ್ಟೆಂಬರ್‌ ನಿಂದ ಮೇ ವರೆಗೆ ವಿಸ್ತರಿಸಬೇಕು" ಎಂದು ಆಗ್ರಹಿಸಿದರು.

ಎಲ್ಲಾ ಮನೆಗಳು ನೀರಿನಿಂದ ಆವೃತವಾಗಿದೆ

ಎಲ್ಲಾ ಮನೆಗಳು ನೀರಿನಿಂದ ಆವೃತವಾಗಿದೆ

ಅಲ್ಲದೆ, ಈ ಪ್ರದೇಶದಲ್ಲಿ ಎಲ್ಲಾ ಮನೆಗಳು ನೀರಿನಿಂದ ಆವೃತವಾಗಿದೆ. ಅಲ್ಲದೆ, ಈ ಭಾಗದ ಹಲವು ಉದ್ಯೋಗಾರ್ಥಿಗಳು ಸರಕಾರಿ ಕೆಲಸದ ಸಂದರ್ಶನಕ್ಕೆ ಬೇಕಾಗಿರುವ ದಾಖಲೆಗಳು ನೀರಿನಲ್ಲಿ ಹಾಳಾಗಿವೆ. ಈ ದಾಖಲೆಗಳು ಬೇರೇ ವ್ಯವಸ್ಥೆ ಆಗುವ ವರೆಗೂ ಸಂದರ್ಶನವನ್ನು ಮುಂದಕ್ಕೆ ಹಾಕಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರಕಾರದ ರಾಯಭಾರಿಗಳಾಗಿ ಈವರೆಗೂ ಇಬ್ಬರು ಮಂತ್ರಿಗಳು ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಆದರೆ ಇದರಿಂದ ರಾಜ್ಯಕ್ಕೆ ಯಾವುದೇ ಪ್ರಯೋಜನ ಅಗಿಲ್ಲ. 2009 ರಲ್ಲಿ ಆಗಿ ಪ್ರಧಾನಿಗಳಾಗಿದ್ದ ಮನಮೋಹನ ಸಿಂಗ್‌ ಅವರು ವೈಮಾನಿಕ ಸಮೀಕ್ಷೆ ನಡೆಸಿ 2 ಸಾವಿರ ಕೋಟಿಗಳ ಪರಿಹಾರ ನೀಡಿದ್ದರು. ಈ ಬಾರಿಯೂ ಕೂಡಾ ತಮ್ಮ ದೇ ಪಕ್ಷದ ಪ್ರಧಾನಿಗಳಾಗಿರುವ ನರೇಂದ್ರ ಮೋದಿಯವರೇ ವೈಮಾನಿಕ ಸಮೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದರು.

ರಾಜ್ಯದ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ

ರಾಜ್ಯದ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ

ಅಲ್ಲದೆ ರಾಜ್ಯದ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಬೇಕು. ಹಾಗೂ ಅನುದಾನ ಬಿಡುಗಡೆಗೆ ತಕ್ಷಣ ಶಿಫಾರಸ್ಸು ಮಾಡಬೇಕು ಎಂದು ಆಗ್ರಹಿಸಿದರು. ಪಕ್ಷ ರಾಜಕಾರಣ ವನ್ನು ಬಿಟ್ಟು ರಾಜ್ಯದ ಪರಿಸ್ಥಿತಿಯನ್ನು ಸುಧಾರಿಸುವತ್ತ ಗಮನ ನೀಡಬೇಕು. ಬೆಳೆ ವಿಮೆಯ ಬಗ್ಗೆ ಕೆಳುತ್ತಾ ಬಂದಿದ್ದರೂ ಕೂಡಾ ಇದರ ಬಗ್ಗೆ ಸರಿಯಾದ ಕ್ರಮಕ್ಕೆ ಸರಕಾರ ಮುಂದಾಗಿಲ್ಲ. ಇದರ ಬಗ್ಗೆ ಗಮನ ನೀಡಬೇಕು ಎಂದು ಆಗ್ರಹಿಸಿದರು.

ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹರಿದು ಬಂದ ಹಣವೆಷ್ಟು?

ಕೆಪಿಸಿಸಿ ಪ್ರವಾಹ ಅಧ್ಯಯನ ಸಮಿತಿ

ಕೆಪಿಸಿಸಿ ಪ್ರವಾಹ ಅಧ್ಯಯನ ಸಮಿತಿ

ಹಿರಿಯ ಮುಖಂಡ ಹೆಚ್ ಕೆ ಪಾಟೀಲ್ ಅವರ ಅಧ್ಯಕ್ಷತೆಯ ಕೆಪಿಸಿಸಿ ಪ್ರವಾಹ ಅಧ್ಯಯನ ಸಮಿತಿ ಇಂದು ಹಾವೇರಿ ಜಿಲ್ಲೆಯ ಚಿಕ್ಕ ಮಲ್ಲೂರು ಗ್ರಾಮದ ನೆರೆ ಪೀಡಿತ ಪ್ರದೇಶ, ಹಾವೇರಿ ತಾಲ್ಲೂಕಿನ ಕರ್ಜಗಿ ಗ್ರಾಮ, ಹಾನಗಲ್ ತಾಲೂಕು ಕೂಡಲ ಗ್ರಾಮ ಹಾಗು ಅಲ್ಲಾಪುರ ಗ್ರಾಮಗಳಿಗೆ ಭೇಟಿ ನೀಡಿತು, ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ಗಂಜಿ ಕೇಂದ್ರಕ್ಕೂ ಭೇಟಿ ನೀಡಿದ ತಂಡ, ಚಿಗಳ್ಳಿ ಡ್ಯಾಂ ವೀಕ್ಷಣೆಗೆ ನಡೆಸಿತು.

ಪ್ರವಾಹ ಪೀಡಿತ ಜನರಿಗೆ ದಿನಬಳಕೆಯ ವಸ್ತು ವಿತರಣೆ

ಪ್ರವಾಹ ಪೀಡಿತ ಜನರಿಗೆ ದಿನಬಳಕೆಯ ವಸ್ತು ವಿತರಣೆ

ಪ್ರೊ ಐ ಜಿ ಸನದಿ, ಮಾಜಿ ಸಚಿವ ರುದ್ರಪ್ಪ ಲಮಾಣೀ, ಮಾಜಿ ಜಿಲ್ಲಾ ಪಂಚಾಯತ್‌ ಅಧ್ಯಕ್ಷರಾದ ಕೊಟ್ರೇಶಪ್ಪ ಬಸಗಳ್ಳಿ, ಜಿ ಪಂ ಅಧ್ಯಕ್ಷ ಕರಿಯಣ್ಣನವರ್‌, ಮಾಜಿ ಶಾಸಕ ಮನೋಹರ್‌ ತಾಹಶೀಲ್ದಾರ್‌, ಶಾಸಕ ಶ್ರೀನಿವಾಸ್‌ ಮಾನೆ, ಡಿಸಿಸಿ ಪ್ರೆಸಿಡೆಂಟ್‌ ಎಂ ಎಂ ಹಿರೇಮಠ್‌, ಬಿ ಎಸ್‌ ಶಿವಣ್ಣನವರು ಮಾಜಿ ಸಚಿವರು ಸೇರಿದಂತೆ ಹಲವು ಮುಖಂಡರುಗಳೂ ಸಾಥ್‌ ನೀಡಿದರು. ಆಯಾ ಪ್ರದೇಶದ ಜನ ಪ್ರತಿನಿಧಿಗಳು ಅಗತ್ಯ ಮಾಹಿತಿಯನ್ನು ನೀಡಿದರು. ಇದೇ ವೇಳೆ ಹಾವೇರಿ ಜಿಲ್ಲೆಯ ಹಾವೇರಿ ತಾಲ್ಲೂಕಿನ ಕರಜಗಿ ಗ್ರಾಮದಲ್ಲಿ ವರದಾ ನದಿ ಪ್ರವಾಹ ಹಾನಿಯಾದ ಪ್ರದೇಶಗಳಗೆ ಭೇಟಿ ನೀಡಿ ತುಮಕೂರು ಜಿಲ್ಲೆಯಿಂದ ತಂದ ಪ್ರವಾಹ ಪೀಡಿತ ಜನರಿಗೆ ದಿನಬಳಕೆಯ ವಸ್ತುಗಳನ್ನು ವಿತರಣೆ ಮಾಡಿದರು.

ಕರ್ನಾಟಕ ಪ್ರವಾಹ: ಸಂತ್ರಸ್ತರಿಗೆ ನೆರವು ನೀಡುವುದು ಹೇಗೆ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Floods: Former Minister HK Patil hits back at CM BS Yeddyurappa on his statement that 'govt doesn't posses Note print machines".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more