ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಕ್ರೇನ್‌ನಲ್ಲಿ ಮೃತಪಟ್ಟ ನವೀನ್ ಮೃತದೇಹ ಮೆಡಿಕಲ್ ಕಾಲೇಜಿಗೆ ದಾನ; ಕುಟುಂಬಸ್ಥರ ನಿರ್ಧಾರ

|
Google Oneindia Kannada News

ಹಾವೇರಿ, ಮಾರ್ಚ್ 19: ಉಕ್ರೇನ್‌ನಲ್ಲಿ ಮೃತವಾಗಿರುವ ವೈದ್ಯಕೀಯ ವಿದ್ಯಾರ್ಥಿ ನವೀನ್ ಮೃತದೇಹ ಸೋಮವಾರ ನಸುಕಿನ ಜಾವ ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ. ಬೆಂಗಳೂರಿನಿಂದ ನೇರವಾಗಿ ಹುಟ್ಟೂರು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ.

ನಂತರ ನವೀನ್ ಮೃತದೇಹಕ್ಕೆ ಅಂತಿಮ ವಿಧಿವಿಧಾನಗಳನ್ನು ಸಲ್ಲಿಸಿದ ಬಳಿಕ, ದಾವಣಗೆರೆಯ ಎಸ್.ಎಸ್. ಆಸ್ಪತ್ರೆಗೆ ಮೃತದೇಹವನ್ನು ದಾನ ನೀಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.

Recommended Video

ಕಡೆಗೂ Naveen ಮೃತದೇಹ ತವರಿಗೆ ತಂದ ಭಾರತೀಯ ಸರ್ಕಾರ | Oneindia Kannada

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ನವೀನ್ ತಂದೆ ಶೇಖರಪ್ಪ ಗ್ಯಾನಗೌಡರ್, "ಮಗನ ಮೃತದೇಹ ಸೋಮವಾರ ಬರಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಂತಿಮವಾಗಿ ಸಲ್ಲಿಸಬೇಕಾದ ಪೂಜೆಗಳನ್ನು ಮಾಡುವ ಕುರಿತು ಗ್ರಾಮದ ಹಿರಿಯರು ನಿರ್ಧರಿಸಲಿದ್ದಾರೆ. ಸೋಮವಾರ ಸಂಜೆವರೆಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು. ತದನಂತರ ದಾವಣಗೆರೆಯ ಎಸ್.ಎಸ್. ಆಸ್ಪತ್ರೆಗೆ ಪಾರ್ಥಿವ ಶರೀರವನ್ನು ದಾನವಾಗಿ ನೀಡುತ್ತಿದ್ದೇವೆ," ಎಂದು ಹೇಳಿದರು.

Haveri: Indian Student Naveen mortal remains to be donated to hospital says Father

"ಮಗ ನವೀನ್‌ಗೆ ವೈದ್ಯಕೀಯ ಲೋಕದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಮಹಾದಾಸೆ ಇತ್ತು, ಆದರೆ ಅದು ಸಾಧ್ಯವಾಗಲಿಲ್ಲ. ಮಗ ಪಾರ್ಥಿವ ಶರೀರ ಬೇರೆ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಹಾಯ ಆಗಲಿ ಎಂದು ನಿರ್ಧಾರ ತೆಗೆದುಕೊಳ್ಳಲಾಗಿದೆ," ಎಂದು ತಂದೆ ಶೇಖರಪ್ಪ ಗ್ಯಾನಗೌಡರ್ ಹೇಳಿದ್ದಾರೆ.

ನವೀನ್ ನಿವಾಸಕ್ಕೆ ಶಾಸಕ ಅರುಣ್‌ಕುಮಾರ್ ಪೂಜಾರ್ ಭೇಟಿ
ಇಂದು ಬೆಳಗ್ಗೆ ಮೃತ ನವೀನ್ ಮನೆಗೆ ರಾಣೆಬೆನ್ನೂರು ಕ್ಷೇತ್ರದ ಶಾಸಕ ಅರುಣ್‌ಕುಮಾರ್ ಪೂಜಾರ್ ಭೇಟಿ ನೀಡಿ, ಮೃತದೇಹವನ್ನು ದಾನ ಮಾಡಬೇಕಾ ಅಥವಾ ಅಂತ್ಯಕ್ರಿಯೆ ಮಾಡಬೇಕಾ ಅನ್ನುವ ಬಗ್ಗೆ ಕುಟುಂಬಸ್ಥರ ಜೊತೆ ಚರ್ಚೆ ನಡೆಸಲಿದ್ದಾರೆ.

Haveri: Indian Student Naveen mortal remains to be donated to hospital says Father

ನವೀನ್ ಮೃತಪಟ್ಟು 21 ದಿನ ಆಗುತ್ತಿರುವ ಹಿನ್ನಲೆ ಮೃತದೇಹವನ್ನು ಆಸ್ಪತ್ರೆಗೆ ದಾನ ಮಾಡಲು ಸಾಧ್ಯವೇ ಅ‌ನ್ನುವುದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಮೃತದೇಹ ಆಗಮಿಸಿದ ನಂತರ ವೈದ್ಯರಿಂದ ತಪಾಸಣೆ ನಡೆಸಿ ನಂತರ ದಾನ ಮಾಡುವುದಾ ಅಥವಾ ಅಂತ್ಯಕ್ರಿಯೆ ಮಾಡುವುದಾ ಎಂಬ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಗಳಿವೆ.

ಸಾವನ್ನಪ್ಪಿದ ಮೂರು ದಿನಗಳ ಬಳಿಕ ನವೀನ್​ ಶವ ಪತ್ತೆ
ನವೀನ್​ ಸಾವನ್ನಪ್ಪಿದ ಮೂರು ದಿನಗಳ ಬಳಿಕ ಉಕ್ರೇನ್​ನಲ್ಲಿ ನವೀನ್​ ಮೃತ ದೇಹದ ಗುರುತು ಪತ್ತೆಯಾಗಿರುವ ಕುರಿತು ಕೂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದರು. ನವೀನ್​ ಮೃತದೇಹ ಪತ್ತೆಯಾಗಿದ್ದು, ಶೆಲ್​ ದಾಳಿಯಿಂದ ಸಾವನ್ನಪ್ಪಿರುವುದು ದೃಢವಾಗಿದೆ. ಉಕ್ರೇನ್ ಶವಾಗಾರದಲ್ಲಿ ಅವರ ಶವವನ್ನು ಇರಿಸಲಾಗಿದ್ದು, ಆದಷ್ಟು ಬೇಗ ವಿದೇಶಾಂಗ ಇಲಾಖೆ ಪಾರ್ಥಿವ ಶರೀರ ತರಿಸುವ ಸಂಬಂಧ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದರು.

Haveri: Indian Student Naveen mortal remains to be donated to hospital says Father

ಸರ್ಕಾರದಿಂದ 25 ಲಕ್ಷ ಪರಿಹಾರ
ಸಾವನ್ನಪ್ಪಿದ ನವೀನ್​ ಕುಟುಂಬಕ್ಕೆ ಸಿಎಂ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಬಿ.ಎಸ್.​ ಯಡಿಯೂರಪ್ಪ ಸೇರಿದಂತೆ ಅನೇಕ ಶಾಸಕರು, ಸಚಿವರು ಸಾಂತ್ವನ ಹೇಳಿದ್ದರು. ಮೃತಪಟ್ಟ ನವೀನ್ ಕುಟುಂಬಕ್ಕೆ ಸಿಎಂ ಬೊಮ್ಮಾಯಿ ರಾಜ್ಯ ಸರ್ಕಾರದಿಂದ 25 ಲಕ್ಷ ಪರಿಹಾರದ ಚೆಕ್​​ ಅನ್ನು ಕೂಡ ವಿತರಿಸಿದ್ದರು. ಇನ್ನು ಪಾರ್ಥಿವ ಶರೀರ ತರಿಸುವ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವುದಾಗಿ ಸಿದ್ದರಾಮಯ್ಯ ಕೂಡ ತಿಳಿಸಿದ್ದರು.

English summary
The parents of Indian student Naveen Shekharappa who was killed in Ukraine, have decided to donate their son's body for medical research.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X