ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ ಕಚೇರಿಯಲ್ಲಿ ಬಿ.ಸಿ.ಪಾಟೀಲ್ ಹೇಳಿದ ಎರಡನೇ ಹೆಂಡತಿಯ ಕಥೆ

|
Google Oneindia Kannada News

ಹಾವೇರಿ, ನ 19: "ಅಧಿಕೃತವಾಗಿ ಬಿಜೆಪಿಗೆ ಬಂದು ಆರು ದಿನವಾಗಿದೆ. ನನಗೆ ಹೆಂಡತಿಯೇನೋ ಒಬ್ಬಳೇ, ಆದರೂ, ಇಬ್ಬರು ಹೆಂಡತಿಯರನ್ನು ಸಾಕುವಂತಾಗಿದೆ" ಎಂದು ಹಿರೇಕೆರೂರು ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಹೇಳಿದರು.

ಹಿರೇಕೆರೂರು ಬಿಜೆಪಿ ಕಚೇರಿಯಲ್ಲಿ ಮಾತನಾಡುತ್ತಿದ್ದ ಕೌರವ ಪಾಟೀಲ್, "ಇಷ್ಟು ದಿನ ಕಾಂಗ್ರೆಸ್ ನಲ್ಲಿದ್ದೆ. ನಾನು ಮತ್ತು ನನ್ನ ಪ್ರತಿಸ್ಪರ್ಧಿಯಾಗಿದ್ದ ಬಣಕರ್ ಈಗ ಹೊಂದಿಕೊಂಡಿದ್ದೇವೆ. ಆದರೆ, ಕಾರ್ಯಕರ್ತರು ಇನ್ನೂ ಹೊಂದಿಕೊಳ್ಳಬೇಕಷ್ಟೆ" ಎಂದು ಪಾಟೀಲ್ ಹೇಳಿದರು.

ಉಪಚುನಾವಣೆ, ಡಿಸಿಎಂ ಪರಮಾಪ್ತನೇ ಜೆಡಿಎಸ್ ಅಭ್ಯರ್ಥಿ: ಅಕ್ಷರಶಃ ಬೆಚ್ಚಿಬಿದ್ದ ಬಿಜೆಪಿಉಪಚುನಾವಣೆ, ಡಿಸಿಎಂ ಪರಮಾಪ್ತನೇ ಜೆಡಿಎಸ್ ಅಭ್ಯರ್ಥಿ: ಅಕ್ಷರಶಃ ಬೆಚ್ಚಿಬಿದ್ದ ಬಿಜೆಪಿ

"ಬೂತ್ ಮಟ್ಟದ ಕಾರ್ಯಕರ್ತರಲ್ಲಿ ಇನ್ನೂ ಕಾಂಗ್ರೆಸ್, ಬಿಜೆಪಿ ಅನ್ನೋದು ಇದೆ. ಒಬ್ಬರ ಜೊತೆ ಮಾತನಾಡಿದರೆ, ಇನ್ನೊಬ್ಬರು ನನ್ನ ಬಳಿ ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸುತ್ತಾರೆ" ಎಂದು ಬಿ.ಸಿ.ಪಾಟೀಲ್ ತಮ್ಮ ಅಸಹಾಯಕತೆಯನ್ನು ತೋಡಿಕೊಂಡರು.

Hirekerur BJP Candidate BC Patil Appealed Activist To Be United

"ಕಾರ್ಯಕರ್ತರನ್ನು ಒಗ್ಗೂಡಿಸುವ ಕೆಲಸ ಇನ್ನೂ ಆಗಬೇಕಿದೆ. ಬಿಜೆಪಿಗೆ ಬಂದ ನಂತರ, ಒಂದು ರೀತಿಯಲ್ಲಿ ಇಬ್ಬರು ಹೆಂಡತಿಯರನ್ನು ನಿಭಾಯಿಸುವಂತಾಗಿದೆ" ಎಂದು ಪಾಟೀಲ್ ವ್ಯಂಗ್ಯವಾಡಿದ್ದಾರೆ.

ಒಮ್ಮೆಯೂ ಚುನಾವಣೆ ಗೆಲ್ಲದ ಅಭ್ಯರ್ಥಿಗೆ, ಕಾಂಗ್ರೆಸ್ ಮತ್ತೆಮತ್ತೆ ಟಿಕೆಟ್ಒಮ್ಮೆಯೂ ಚುನಾವಣೆ ಗೆಲ್ಲದ ಅಭ್ಯರ್ಥಿಗೆ, ಕಾಂಗ್ರೆಸ್ ಮತ್ತೆಮತ್ತೆ ಟಿಕೆಟ್

"ರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ ಎನ್ನುವುದಕ್ಕೆ ಉದಾಹರಣೆ, ನಾನು ಮತ್ತು ಬಣಕರ್ ಒಂದಾಗಿರುವುದು. ಕ್ಷೇತ್ರದಲ್ಲಿ ನಾವಿಬ್ಬರೂ ಒಂದಾಗಿರುವಾಗ, ನೀವೆಲ್ಲಾ (ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರು) ಬೇರೆ ಬೇರೆಯಾಗಿವುದು ಬೇಡ" ಎಂದು ಪಾಟೀಲ್, ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.

ಅನರ್ಹ ಶಾಸಕ ಬಿ.ಸಿ.ಪಾಟೀಲ್ ಬಿಜೆಪಿ ಅಭ್ಯರ್ಥಿಯಾಗಿ ಹಿರೇಕೆರೂರು ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಸಾವಿರಾರು ಅಭಿಮಾನಿಗಳು ಭಾರತೀಯ ಜನತಾ ಪಕ್ಷ ಸೇರ್ಪಡಗೊಂಡಿದ್ದರು.

English summary
Hirekerur BJP Candidate BC Patil Appealed Activist To Be United.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X