ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾವೇರಿಯಲ್ಲಿ ಪಿಪಿಇ ಕಿಟ್ ಧರಿಸಿ ಕೇಕ್ ಕಟ್ ಮಾಡಿದ ಆರೋಗ್ಯ ಅಧಿಕಾರಿ!

|
Google Oneindia Kannada News

ಹಾವೇರಿ, ಜೂನ್ 11: ಕೊರೊನಾವೈರಸ್ ಆರೈಕೆ ಕೇಂದ್ರ. ಈ ಹೆಸರು ಕೇಳಿದರೆ ಪಿಪಿಇ ಕಿಟ್ ಧರಿಸಿ ಸುತ್ತಾಡುವ ವೈದ್ಯಕೀಯ ಸಿಬ್ಬಂದಿ, ಮಾಸ್ಕ್ ಧರಿಸಿ ಓಡಾಡುವ ಜನರು ಒಂದು ಕಡೆ ಹಾಗೂ ಇದೇನಾಯ್ತಪ್ಪಾ ಅಂತಾ ಚಿಂತಾಕ್ರಾಂತರಾಗಿ ಕುಳಿತುಕೊಳ್ಳುವ ಕೊವಿಡ್-19 ಸೋಂಕಿತರು ಇನ್ನೊಂದು ಕಡೆ. ಇಂಥ ಚಿತ್ರಣವೇ ಕಣ್ಣೆದುರಿಗೆ ಬರುತ್ತದೆ.

ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕಲಕೇರಿ ಕೊವಿಡ್-19 ಕೇಸ್ ಸೆಂಟರ್ ಇದೆಲ್ಲಕ್ಕಿಂತ ವಿಭಿನ್ನವಾಗಿದೆ. ಪ್ರತಿನಿತ್ಯ ತಮ್ಮ ಆರೋಗ್ಯ ಮೇಲ್ವಿಚಾರಣೆ ನಡೆಸುವ ಆರೋಗ್ಯ ಅಧಿಕಾರಿಯ 33ನೇ ಹುಟ್ಟುಹಬ್ಬವನ್ನು ಕೊರೊನಾವೈರಸ್ ರೋಗಿಗಳು ಸಂಭ್ರಮದಿಂದ ಆಚರಿಸಿದರು.

ಹಾವೇರಿ; ಕೋವಿಡ್ ಲಾಕ್‌ಡೌನ್ ಸಮಯದಲ್ಲಿ 40 ಯುವತಿಯರು ನಾಪತ್ತೆ!ಹಾವೇರಿ; ಕೋವಿಡ್ ಲಾಕ್‌ಡೌನ್ ಸಮಯದಲ್ಲಿ 40 ಯುವತಿಯರು ನಾಪತ್ತೆ!

ಕೊರೊನಾವೈರಸ್ ರೋಗಿಗಳಲ್ಲಿ ವಿಶ್ವಾಸ, ಆತ್ಮಸ್ಥೈರ್ಯ ತುಂಬಲು ಹಾಗೂ ಭಯವನ್ನು ಹೋಗಲಾಡಿಸುವ ಉದ್ದೇಶದಿಂದ ಸಮುದಾಯ ಆರೋಗ್ಯ ಅಧಿಕಾರಿ ಸಂಜೀವ್ ಗಾಜೇಗೌಡ್ರ ಸೋಂಕಿತರ ಜೊತೆಗೆ ತಮ್ಮ ಜನ್ಮದಿನವನ್ನು ಆಚರಿಸಿಕೊಂಡರು. ಪಿಪಿಇ ಕಿಟ್ ಧರಿಸಿಕೊಂಡೇ ಎರಡು ಕೆಜಿ ಕೇಕ್ ಕತ್ತರಿಸಿದರು.

Health Officer Celebrates His Birthday And Cuts Cake With Covid-19 Patients In Haveri

ಕೊವಿಡ್-19 ಸೋಂಕಿತರ ಮಸ್ತ್ ಡ್ಯಾನ್ಸ್:

Recommended Video

ಕೋಟಿ ಕೋಟಿ ಜನರ ಮೇಲೆ ಬರೆ ಎಳೆದ ಸರ್ಕಾರ! | Oneindia Kannada

ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕಲಕೇರಿ ಕೊವಿಡ್-19 ಕೇರ್ ಸೆಂಟರ್ ನಲ್ಲಿ ಆರೋಗ್ಯಾಧಿಕಾರಿ ಸಂಜೀವ್ ಗಾಜೇಗೌಡ್ರ ಕೇಕ್ ಕತ್ತರಿಸಿದ ನಂತರದಲ್ಲಿ ಸೋಂಕಿತರ ಜೊತೆಗೆ ಮಸ್ತ್ ಡ್ಯಾನ್ಸ್ ಮಾಡಿದರು. ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಹಾಡಿಗೆ ಕೊರೊನಾವೈರಸ್ ಸೋಂಕಿತರೆಲ್ಲ ಸೇರಿಕೊಂಡು ಕುಣಿದು ಕುಪ್ಪಳಿಸಿದರು. ಆ ಮೂಲಕ ತಮ್ಮ ಹುಟ್ಟುಹಬ್ಬದ ದಿನವನ್ನು ಕೊವಿಡ್-19 ಸೋಂಕಿತರ ಮುಖದಲ್ಲಿ ನಗು ಮೂಡಿಸುವುದಕ್ಕೆ ಮೀಸಲಿಟ್ಟ ಆರೋಗ್ಯ ಅಧಿಕಾರಿಗಳಿಗೆ ವೈದ್ಯಕೀಯ ಸಿಬ್ಬಂದಿ ಹಾಗೂ ರೋಗಿಗಳು ಮನಸಾರೆ ಹಾರೈಸಿದರು.

English summary
Health Officer Celebrates His Birthday And Cuts Cake With Covid-19 Patients In Haveri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X