ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾವೇರಿ-ಗದಗ ಲೋಕಸಭಾ ಕ್ಷೇತ್ರ : ಕಾಂಗ್ರೆಸ್‌ಗೆ ಗೆಲುವಿನ ನಿರೀಕ್ಷೆ

|
Google Oneindia Kannada News

ಹಾವೇರಿ, ಏಪ್ರಿಲ್ 19 : ಕಳೆದ ಎರಡು ಚುನಾವಣೆಗಳಿಂದ ಶರಣರು, ಶರೀಫರ ನಾಡು ಹಾವೇರಿಯಲ್ಲಿ ಕಮಲ ಅರಳಿದೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಮುಸ್ಲಿಮೇತರ ಅಭ್ಯರ್ಥಿಗೆ ಟಿಕೆಟ್ ನೀಡಿದ್ದು, ಗೆಲುವಿನ ಲೆಕ್ಕಾಚಾರದಲ್ಲಿದೆ.

ಏಪ್ರಿಲ್ 23ರಂದು ಗದಗ-ಹಾವೇರಿ ಲೋಕಸಭಾ ಕ್ಷೇತ್ರದ ಚುನಾವಣೆ ನಡೆಯಲಿದೆ. ಬಿಜೆಪಿಯಿಂದ ಹಾಲಿ ಸಂಸದ ಶಿವಕುಮಾರ ಉದಾಸಿ ಕಣದಲ್ಲಿದ್ದು, ಹ್ಯಾಟ್ರಿಕ್ ಗೆಲುವಿನ ಉತ್ಸಾಹದಲ್ಲಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದಿಂದ ಡಿ.ಆರ್.ಪಾಟೀಲ್ ಅಭ್ಯರ್ಥಿ.

ಹಾವೇರಿ ಲೋಕಸಭಾ ಚುನಾವಣಾ ಪುಟ

ಲಿಂಗಾಯತ ಮತ ಸಮೀಕರಣದ ಸೂತ್ರ ಯಶ್ವಸ್ವಿಯಾದರೆ ಯಾವ ಪಕ್ಷದ ಅಭ್ಯರ್ಥಿಗಳು ಸಹ ಗೆಲುವು ಸಾಧಿಸಬಹುದಾಗಿದೆ. ಹಿಂದಿನ ಮೂರು ಚುನಾವಣೆಗಳಲ್ಲಿ ಇದೇ ಸೂತ್ರದ ಅನ್ವಯ ಶಿವಕುಮಾರ ಉದಾಸಿ ಗೆಲುವು ಸಾಧಿಸಿದ್ದಾರೆ.

ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಶ್ರೀಶೈಲಪ್ಪ ಬಿದರೂರಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಶ್ರೀಶೈಲಪ್ಪ ಬಿದರೂರ

ಮಾಜಿ ಸಚಿವ ಸಿ.ಎಂ.ಉದಾಸಿ ಪುತ್ರ ಶಿವಕುಮಾರ ಉದಾಸಿ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ ಸಹೋದರ ಡಿ.ಆರ್.ಪಾಟೀಲ ಇಬ್ಬರೂ ಲಿಂಗಾಯತ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. 'ಗದಗ ಮತ್ತು ಹಾವೇರಿಯಲ್ಲಿ ಈ ಬಾರಿ ಚಿತ್ರಣ ಬದಲಾಗಿದೆ' ಎಂದು ಡಿ.ಆರ್.ಪಾಟೀಲ ಹೇಳಿದ್ದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ಹಾವೇರಿ ಲೋಕಸಭಾ ಕ್ಷೇತ್ರದ ಪರಿಚಯಹಾವೇರಿ ಲೋಕಸಭಾ ಕ್ಷೇತ್ರದ ಪರಿಚಯ

ಡಿ.ಆರ್.ಪಾಟೀಲ

ಡಿ.ಆರ್.ಪಾಟೀಲ

ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಡಿ.ಆರ್.ಪಾಟೀಲ ಅವರು ಸತತ ನಾಲ್ಕು ಬಾರಿ ಗದಗ ಕ್ಷೇತ್ರದ ಶಾಸಕರಾಗಿದ್ದರು. ಗಾಂಧಿವಾದಿ, ಗ್ರಾಮೀಣಾಭಿವೃದ್ಧಿ ಬಗ್ಗೆ ಅಪಾರವಾದ ಕಳಕಳಿ ಹೊಂದಿದ್ದಾರೆ. ಸರಳ ವ್ಯಕ್ತಿತ್ವ. ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ ಅವರ ಶ್ರಮವೂ ಸೇರಿದರೆ ಗೆಲುವು ಕಷ್ಟವಲ್ಲ.

ಶಿವಕುಮಾರ ಉದಾಸಿ

ಶಿವಕುಮಾರ ಉದಾಸಿ

ಸತತ ಎರಡು ಬಾರಿ ಗೆದ್ದಿರುವ ಶಿವಕುಮಾರ ಉದಾಸಿ ಅವರು ಸಂಸತ್‌ನಲ್ಲಿ ಅಧಿಕ ಹಾಜರಾತಿ ಹೊಂದಿದ್ದಾರೆ. ಕೇಂದ್ರದ ಯೋಜನೆಗಳನ್ನು ತಂದಿದ್ದಾರೆ. 83ರ ವಯಸ್ಸಿನಲ್ಲಿಯೂ ಸಿ.ಎಂ.ಉದಾಸಿ ಅವರು ಸಂಘಟನಾತ್ಮಕವಾಗಿ ಓಡಾಡುತ್ತಿದ್ದಾರೆ. ಆರ್‌ಎಸ್‌ಎಸ್‌ ಸಹ ಶಿವಕುಮಾರ ಉದಾಸಿ ಅವರ ಪರವಾಗಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದೆ.

ವಿಧಾನಸಭೆ ಬಲಾಬಲ

ವಿಧಾನಸಭೆ ಬಲಾಬಲ

ಹಾವೇರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳಿವೆ. ಜೆಡಿಎಸ್‌ನ ಯಾವುದೇ ಶಾಸಕರು ಕ್ಷೇತ್ರದಲ್ಲಿಲ್ಲ.

* ಬಿಜೆಪಿ : ಹಾವೇರಿ, ಹಾನಗಲ್, ಬ್ಯಾಡಗಿ, ಶಿರಹಟ್ಟಿ, ರೋಣ
* ಕಾಂಗ್ರೆಸ್ : ಹಿರೇಕೆರೂರ, ಗದಗ
* ಪಕ್ಷೇತರ (ಕೆಪಿಜೆಪಿ) : ರಾಣೆಬೆನ್ನೂರು

ಶ್ರೀಶೈಲಪ್ಪ ಬಿದರೂರ

ಶ್ರೀಶೈಲಪ್ಪ ಬಿದರೂರ

ಗದಗ ಕ್ಷೇತ್ರದ ಮಾಜಿ ಶಾಸಕ, ಬಿಜೆಪಿ ನಾಯಕ ಶ್ರೀಶೈಲಪ್ಪ ಬಿದರೂರ ಅವರು ಕಾಂಗ್ರೆಸ್ ಸೇರಿದ್ದು ಬಿಜೆಪಿಗೆ ಹಿನ್ನಡೆಯಾಗಿದೆ. ಗದಗ ಮತ್ತು ರೋಣ ಭಾಗದಲ್ಲಿ ಅವರು ಸಾಕಷ್ಟು ಪ್ರಭಾವ ಹೊಂದಿದ್ದಾರೆ.

ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಿರುವ ಕೆಪಿಜೆಪಿ ಶಾಸಕ ಆರ್.ಶಂಕರ ಅವರು ನಾಪತ್ತೆಯಾಗಿದ್ದು ಕಾಂಗ್ರೆಸ್‌ಗೆ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ.

2014ರ ಫಲಿತಾಂಶ

2014ರ ಫಲಿತಾಂಶ

2014ರ ಚುನಾವಣೆಯಲ್ಲಿ ಶಿವಕುಮಾರ ಉದಾಸಿ ಅವರು 566790 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್‌ನಿಂದ ಸಲಿಂ ಅಹಮದ್ ಕಣದಲ್ಲಿದ್ದರು 479219 ಮತಗಳನ್ನು ಪಡೆದಿದ್ದರು. ಜೆಡಿಎಸ್‌ನಿಂದ ರವಿ ಮೆಣಸಿನಕಾಯಿ ಕಣದಲ್ಲಿದ್ದರು 9814 ಮತಗಳನ್ನು ಪಡೆದಿದ್ದರು.

English summary
Haveri lok sabha seat political picture. Sitting MP Shivakumar Udasi BJP candidate and D.R.Patil Congress-JD(S) candidate. Election will be held on Apri 23, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X