ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

12 ಸಾವಿರ ರೂ ಗೌರವಧನ ನೀಡುವಂತೆ ಆಶಾ ಕಾರ್ಯಕರ್ತೆಯರ ಮನವಿ

|
Google Oneindia Kannada News

ಹಾವೇರಿ, ಜುಲೈ 8: ಕೊರೊನಾ ವಿರುದ್ಧ ಹೋರಾಟ ಮಾಡುತ್ತಿರುವ ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಮನವಿ ಮಾಡಿದ್ದಾರೆ. ಪದೇ ಪದೇ ಮನವಿ ಪತ್ರ ನೀಡುತ್ತಿದ್ದರೂ, ಅವರ ಬೇಡಿಕೆ ಮಾತ್ರ ಇನ್ನೂ ನೆರವೇರಿಲ್ಲ.

ಇದೀಗ ಹಾವೇರಿಯಲ್ಲಿ ಆಶಾ ಕಾರ್ಯಕರ್ತೆಯರ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಿಗೆ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಘಟಕ ಮನವಿ ಸಲ್ಲಿಸಿದೆ.

ಆಶಾ ಕಾರ್ಯಕರ್ತೆಯರ ಮುಷ್ಕರಕ್ಕೆ ಡಿಕೆ ಶಿವಕುಮಾರ್ ಬೆಂಬಲ!ಆಶಾ ಕಾರ್ಯಕರ್ತೆಯರ ಮುಷ್ಕರಕ್ಕೆ ಡಿಕೆ ಶಿವಕುಮಾರ್ ಬೆಂಬಲ!

ಇದು 10ನೇ ಬಾರಿ ನೀಡಿರುವ ಮನವಿ ಪತ್ರವಾಗಿದೆ. ಕಳೆದ ಆರು ತಿಂಗಳಿನಿಂದ 12 ಸಾವಿರ ರೂ ಗೌರವಧನ ನೀಡುವಂತೆ ಆಶಾ ಕಾರ್ಯಕರ್ತೆಯರು ಮನವಿ ಮಾಡುತ್ತಿದ್ದಾರೆ. ಆದರೆ, ಇನ್ನೂ ಸಂಘದ ಪದಾಧಿಕಾರಿಗಳ ಜೊತೆಯಲ್ಲಿ ಸಭೆ ನಡೆದಿಲ್ಲ.

Haveri District Asha Workers Requested District Health Officer To fulfill their demands

ಆಶಾ ಕಾರ್ಯಕರ್ತೆಗೆ ತಿಂಗಳಿಗೆ 8000 ರಿಂದ 9000 ರೂಪಾಯಿ ಸಿಗುತ್ತಿದೆ. ಇದನ್ನು ಹೆಚ್ಚು ಮಾಡಬೇಕು ಎನ್ನುವುದು ಆಶಾ ಕಾರ್ಯಕರ್ತೆಯರ ಮನವಿಯಾಗಿದೆ. ಪ್ರೋತ್ಸಾಹ ಧನ ಹಾಗೂ ಗೌರವಧನ ಎರಡನ್ನೂ ಒಟ್ಟಿಗೆ ಸೇರಿಸಿ ತಿಂಗಳಿಗೆ 12,000 ರೂಪಾಯಿ ನೀಡಬೇಕು ಎಂದು ಮನವಿ ಮಾಡಲಾಗಿದೆ.

ಇದರೊಂದಿಗೆ, ಕೊರೊನಾ ಜೊತೆಗೆ ಹೋರಾಟ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಸುರಕ್ಷತೆ ನೀಡುವುದು ಯಾವುದಾದರು ಆಶಾ ಕಾರ್ಯಕರ್ತೆಗೆ ಸೋಂಕು ತಗುಲಿದರೆ, ಅದರ ಖರ್ಚನ್ನು ಸರ್ಕಾರ ಬರಿಸಬೇಕು ಎಂದು ಕೇಳಿಕೊಂಡಿದ್ದಾರೆ.

English summary
Haveri District Asha Workers Requested District Health Officer To fulfill their demands.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X