ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾವೇರಿ ; ಉಪ ಚುನಾವಣೆಗೆ ಒಟ್ಟು 28 ನಾಮಪತ್ರಗಳು

|
Google Oneindia Kannada News

ಹಾವೇರಿ, ನವೆಂಬರ್ 18 : ಹಾವೇರಿ ಜಿಲ್ಲೆಯ ಹಿರೇಕೆರೂರು, ರಾಣೆಬೆನ್ನೂರು ಕ್ಷೇತ್ರದ ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆ ಅಂತ್ಯಗೊಂಡಿದೆ. ಡಿಸೆಂಬರ್ 5ರಂದು ಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.

ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ 14 ಅಭ್ಯರ್ಥಿಗಳಿಂದ 18 ನಾಮಪತ್ರ ಸಲ್ಲಿಕೆಯಾಗಿವೆ.
ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದಿಂದ 14 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಪರಿಶೀಲನೆ ಕಾರ್ಯ ನವಂಬರ್ 19ರ ಮಂಗಳವಾರ ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು ನವಂಬರ್ 21 ಕೊನೆ ದಿನವಾಗಿದೆ.

ಹೊಸಕೋಟೆ ಉಪ ಚುನಾವಣೆ; ಶರತ್ ಬಚ್ಚೇಗೌಡ ಸ್ಫೋಟಕ ಹೇಳಿಕೆಹೊಸಕೋಟೆ ಉಪ ಚುನಾವಣೆ; ಶರತ್ ಬಚ್ಚೇಗೌಡ ಸ್ಫೋಟಕ ಹೇಳಿಕೆ

ಈಗಾಗಲೇ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಚುನಾವಣಾ ಅಕ್ರಮ ತಡೆಯಲು ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ. ಹಿರೇಕೊರೂರು ವಿಧಾನ ಸಭಾಕ್ಷೇತ್ರದ ಕೇಂದ್ರ ಸಾಮಾನ್ಯ ವೀಕ್ಷಕರಾದ ಹಿರಿಯ ಐಎಎಸ್ ಅಧಿಕಾರಿ ಚಕ್ರವತಿ೯ ಸೋಮವಾರ ಬ್ಯಾಡಗಿ ಚೆಕ್ ಪೋಸ್ಟ್‌ಗೆ ಭೇಟಿ ಮಾಡಿ ಪರಿಶೀಲನೆ ನಡೆಸಿದರು.

ಉಪ ಚುನಾವಣೆ ಕಣದಿಂದ ಹಿಂದೆ ಸರಿದ ರೋಷನ್ ಬೇಗ್ ಉಪ ಚುನಾವಣೆ ಕಣದಿಂದ ಹಿಂದೆ ಸರಿದ ರೋಷನ್ ಬೇಗ್

Haveri District 2 Seat By Elections : Candidates List

ಬಂಡಾಯದ ಬಿಸಿ ತಪ್ಪಿಸಲು ಟಿಕೆಟ್ ಆಕಾಂಕ್ಷಿಗಳಿಗೆ ಯಡಿಯೂರಪ್ಪ ಉಡುಗೊರೆ ಬಂಡಾಯದ ಬಿಸಿ ತಪ್ಪಿಸಲು ಟಿಕೆಟ್ ಆಕಾಂಕ್ಷಿಗಳಿಗೆ ಯಡಿಯೂರಪ್ಪ ಉಡುಗೊರೆ

ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು

* ಹಿರೇಕೆರೂರು : ಬಿ. ಸಿ. ಪಾಟೀಲ್ (ಬಿಜೆಪಿ), ಬಿ. ಎಚ್. ಬನ್ನಿಕೋಡ್ (ಕಾಂಗ್ರೆಸ್), ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ (ಜೆಡಿಎಸ್)

* ರಾಣೆಬೆನ್ನೂರು : ಅರುಣ್ ಕುಮಾರ್ ಪೂಜಾರಿ (ಬಿಜೆಪಿ), ಕೆ. ಬಿ. ಕೋಳಿವಾಡ (ಕಾಂಗ್ರೆಸ್), ಮಲ್ಲಿಕಾರ್ಜುನ ಹಲಗೇರಿ (ಜೆಡಿಎಸ್).

English summary
14 candidates field nomination in Ranebennur and Hirekerur assembly seat By elections, Haveri district. Elections will be held on December 5, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X