ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿಗಳಿಂದ ಪಾಠ, ಸಹ ಭೋಜನ

|
Google Oneindia Kannada News

ಹಾವೇರಿ, ಜುಲೈ 05 : ಜಿಲ್ಲಾಧಿಕಾರಿಗಳು ಶಾಲೆಗೆ ಅನಿರೀಕ್ಷಿತವಾಗಿ ಭೇಟಿ ಕೊಟ್ಟು ಅಚ್ಚರಿ ಮೂಡಿಸಿದರು. ವಿದ್ಯಾರ್ಥಿಗಳಿಗೆ ಪಾಠ ಮಾಡಿದ ಅವರು, ನಂತರ ಸಹ ಭೋಜನ ಮಾಡಿದರು.

ಹಾವೇರಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಶುಕ್ರವಾರ ಹಾನಗಲ್ ತಾಲೂಕಿನ ಅಕ್ಕಿಆಲೂರ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಗೆ ಅನಿರೀಕ್ಷಿತವಾಗಿ ಭೇಟಿ ಕೊಟ್ಟರು. ಶಾಲೆಯಲ್ಲಿನ ಮೂಲಭೂತ ಸೌಕರ್ಯಗಳು ಹಾಗೂ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಕುರಿತಂತೆ ಪರಿಶೀಲಿಸಿದರು.

ಧಾರವಾಡ : 28 ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳು ಆರಂಭಧಾರವಾಡ : 28 ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳು ಆರಂಭ

Haveri Deputy commissioner surprise visit to school

ಶಾಲಾ ಮಕ್ಕಳ ಕಲಿಕಾ ಆಸಕ್ತಿ ಕಂಡು ಪ್ರಶ್ನೋತ್ತರ ಸಂವಾದಲ್ಲಿ ಪಾಲ್ಗೊಂಡರು. ಕೆಲವು ಹೊತ್ತು ಮಕ್ಕಳಿಗೆ ಪಾಠ ಮಾಡಿದರು. ವಿದ್ಯಾರ್ಥಿಗಳೊಂದಿಗೆ ವಸತಿ ಶಾಲೆಯ ಅಡುಗೆಯವರು ತಯಾರಿಸಿದ ಚಪಾತಿ, ಪಲ್ಯ, ಅನ್ನ-ಸಂಬಾರ್ ಸವಿದರು.

ಮತ್ತೆ ವಿವಾದಕ್ಕೆ ಮುನ್ನುಡಿ ಬರೆದ ದೀದಿ, ಅಲ್ಪಸಂಖ್ಯಾತ ಶಾಲೆಗೆ ಭೋಜನಾಲಯಮತ್ತೆ ವಿವಾದಕ್ಕೆ ಮುನ್ನುಡಿ ಬರೆದ ದೀದಿ, ಅಲ್ಪಸಂಖ್ಯಾತ ಶಾಲೆಗೆ ಭೋಜನಾಲಯ

Haveri Deputy commissioner surprise visit to school

ಕೃಷ್ಣ ಬಾಜಪೇಯಿ ಅವರು ಫೆಬ್ರವರಿ 26, 2019ರಂದು ಹಾವೇರಿ ಜಿಲ್ಲಾಧಿಕಾರಿಯಾಗಿ ಅಧಿಕಾರವಹಿಸಿಕೊಂಡಿದ್ದಾರೆ. 'ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಎಲ್ಲರೂ ಸಹಕರಿಸಿ, ಯಾವುದೇ ಸಮಸ್ಯೆ ಇದ್ದರೂ ಮುಕ್ತವಾಗಿ ಚರ್ಚಿಸಿ, ಸಲಹೆ ನೀಡಿ' ಎಂದು ಕರೆ ನಿಡಿದ್ದಾರೆ.

ನಾನೇನೂ ಕಮ್ಮಿಯಿಲ್ಲ ಅಂತಿದೆ ಸಿಂಗಟಗೆರೆಯ ಕನ್ನಡ ಶಾಲೆನಾನೇನೂ ಕಮ್ಮಿಯಿಲ್ಲ ಅಂತಿದೆ ಸಿಂಗಟಗೆರೆಯ ಕನ್ನಡ ಶಾಲೆ

ಜಿಲ್ಲಾಧಿಕಾರಿಗಳ ಅನಿರೀಕ್ಷಿತ ಭೇಟಿ ಸಂದರ್ಭದಲ್ಲಿ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಚೈತ್ರಾ ಹಾಗೂ ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

English summary
Haveri deputy commissioner Krishna Bajpai surprise visit to Kittur Rani Chennamma school on July 5, 2019. Krishna Bajpai teaches syllabus to student.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X