ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈ ಮುದ್ದು ಸ್ಕೂಬಿಗೆ ನಿವೃತ್ತಿಯಂತೆ... ಮೂಕ ಪ್ರಾಣಿಯ ಸೇವೆಗೆ ಸಲಾಂ!

|
Google Oneindia Kannada News

ಹಾವೇರಿ, ಏಪ್ರಿಲ್ 18: ಹಾವೇರಿ ಜಿಲ್ಲೆಯಲ್ಲಿ, ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಯಾವುದೇ ವಿವಿಐಪಿಗಳ ಕಾರ್ಯಕ್ರಮಗಳಿದ್ದರೂ, ಬಾಂಬ್ ಸ್ಕ್ವಾಡ್ ಆಗಿ ಮುಂಚೂಣಿಯಲ್ಲಿ ನಿಲ್ಲುತ್ತಿದ್ದಿದ್ದು 10 ವರ್ಷ ವಯಸ್ಸಿನ ಸ್ಕೂಬಿ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಹೌದು, ಹಾವೇರಿ ಪೊಲೀಸ್ ಇಲಾಖೆಯಲ್ಲಿ ಬಾಂಬ್ ಸ್ಕ್ವಾಡ್ ಆಗಿದ್ದ ಈ ಲ್ಯಾಬ್ರಡರ್ ಜಾತಿಯ ನಾಯಿ ಸ್ಕೂಬಿ, ಈಗ ನಿವೃತ್ತಿ ಬದುಕಿಗೆ ಕಾಲಿಟ್ಟಿದೆ.

30 ಮಂದಿ ಜೀವ ಉಳಿಸಿ, ಬೆಂಕಿಯಲ್ಲಿ ಬೆಂದು ಪ್ರಾಣಬಿಟ್ಟ ಶ್ವಾನ30 ಮಂದಿ ಜೀವ ಉಳಿಸಿ, ಬೆಂಕಿಯಲ್ಲಿ ಬೆಂದು ಪ್ರಾಣಬಿಟ್ಟ ಶ್ವಾನ

"ಸ್ಕೂಬಿಯನ್ನು ನಾನು ಮಗುವಿನಂತೇ ನೋಡಿಕೊಂಡಿದ್ದೆ. ಅದಕ್ಕೆ ಈಗ ನಿವೃತ್ತಿ ಎಂದರೆ ನನಗೆ ನೋವಾಗುತ್ತಿದೆ. ಬಹಳ ಬುದ್ಧಿವಂತ, ಚಟುವಟಿಕೆಯ ಸ್ಕೂಬಿ ಎಷ್ಟೋ ಮಹತ್ವದ ಕಾರ್ಯಕ್ರಮಗಳಲ್ಲಿ ಬಾಂಬ್ ಪತ್ತೆ ಮಾಡುವ ಕೆಲಸ ಮಾಡಿದೆ" ಎಂದು ಈ ನಾಯಿಯನ್ನು ನೋಡಿಕೊಳ್ಳುತ್ತಿದ್ದ ಕಾನ್ ಸ್ಟೇಬಲ್ ಸಿಬಿ ಚಪ್ಪರದಹಳ್ಳಿ ನೋವು ಹಂಚಿಕೊಂಡಿದ್ದಾರೆ.

Haveri: after 10 yeras of successful service dog retires!

ಮೂರು ತಿಂಗಳಿದ್ದಾಗ ಈ ನಾಯಿ ಮರಿಯನ್ನು ಪೊಲೀಸ್ ಇಲಾಖೆಗೆ ಕರೆತರಲಾಗಿತ್ತು. ನಂತರ ಅದಕ್ಕೆ ಎಂಟು ತಿಂಗಳು ತುಂಬಿದಾಗ ಅದನ್ನು ಬೆಂಗಳೂರಿನ ಆಡುಗೋಡಿಯಲ್ಲಿರುವ ತರಬೇತಿ ಕೇಂದ್ರಕ್ಕೆ ಕಳಿಸಿ ತರಬೇತಿ ನೀಡಲಾಗಿತ್ತು.

ನಿವೃತ್ತಿಯ ನಂತರ ಸೇನಾ ನಾಯಿಗಳನ್ನೇನು ಮಾಡುತ್ತಾರೆ?ನಿವೃತ್ತಿಯ ನಂತರ ಸೇನಾ ನಾಯಿಗಳನ್ನೇನು ಮಾಡುತ್ತಾರೆ?

ಆ ನಂತರ ಅದನ್ನು ಬಾಂಬ್ ಸ್ಕ್ವಾಡ್ ತಂಡಲ್ಲಿ ಸೇರಿಸಲಾಗಿತ್ತು. ಹಲವು ಅಪರಾಧ ಪ್ರಕರಣಗಳನ್ನು ಭೇದಿಸಿದ, ಸ್ಕೂಬಿ ವಿವಿಐಪಿಗಳ ಕಾರ್ಯಕ್ರಮಕ್ಕೂ ಮುನ್ನ ಬಾಂಬ್ ಪತ್ತೆ ಹಚ್ಚುವ ಕೆಲಸವನ್ನೂ ಮಾಡಿದೆ.

ನಿಮ್ಮ ರಾಜಕೀಯ ಜ್ಞಾನವನ್ನು ಒರೆಗೆ ಹಚ್ಚುವ ರಸಪ್ರಶ್ನೆ

ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಹಾಲಿ ಪ್ರಧಾನಿ ನರೇಂದ್ರ ಮೋದಿಯವರಂಥ ಘಟಾನುಘಟಿ ನಾಯಕರ ಕಾರ್ಯಕ್ರಮಗಳಿಗೂ ಮುನ್ನ ಬಾಂಬ್ ಸ್ಕ್ವಾಡ್ ಕೆಲಸವನ್ನೂ ಸ್ಕೂಬಿ ಮಾಡಿದೆ.

ಪೊಲೀಸ್ ಅಧಿಕಾರಿ ಎಂ ಜಿ ಗೋಪಾಲಿ ಎಂಬುವವರು ಈ ಸ್ಕೂಬಿಯ ಹೊಣೆಯನ್ನು ಹೊತ್ತುಕೊಳ್ಳಲಿದ್ದಾರೆ. ತಾವೇ ಈ ನಾಯಿಯನ್ನು ನೋಡಿಕೊಳ್ಳುವುದಾಗಿ ಹೇಳಿದ್ದಾರೆ.

English summary
11 year old labrador dog, scooby, who served as bomb squad in Haveri police department retired after 10 years service
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X