ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾವೇರಿ; ಕೋವಿಡ್ ಲಾಕ್‌ಡೌನ್ ಸಮಯದಲ್ಲಿ 40 ಯುವತಿಯರು ನಾಪತ್ತೆ!

|
Google Oneindia Kannada News

ಹಾವೇರಿ, ಜೂನ್ 7: ಕೊರೊನಾ ಸೋಂಕು ಹೆಚ್ಚಾಗಿದ್ದ ಹಿನ್ನೆಲೆ ರಾಜ್ಯಾದ್ಯಂತ ಲಾಕ್‌ಡೌನ್ ಜಾರಿಯಲ್ಲಿತ್ತು. ಈ ವೇಳೆ ಯಾಲಕ್ಕಿ ನಗರಿ ಹಾವೇರಿ ಜಿಲ್ಲೆಯಲ್ಲಿ ಯುವತಿಯರು ನಾಪತ್ತೆಯಾದ ಪ್ರಕರಣಗಳು ದಾಖಲಾಗಿವೆ.

"ಹಾವೇರಿ ಜಿಲ್ಲೆಯ ಒಟ್ಟು 19 ಪೊಲೀಸ್ ಠಾಣೆಗಳಲ್ಲಿ 48 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 8 ಜನರು ಪುರುಷರು ನಾಪತ್ತೆಯಾಗಿದ್ದು, 40 ಜನ ಮಹಿಳೆಯರು ಹಾಗೂ ಯುವತಿಯರು ನಾಪತ್ತೆಯಾದ ಪ್ರಕರಣಗಳು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ.''

"ಕೋವಿಡ್ ಲಾಕ್‌ಡೌನ್ ವೇಳೆ ಒಟ್ಟು 40 ಮಹಿಳೆಯರ ನಾಪತ್ತೆ ಪ್ರಕರಣಗಳಲ್ಲಿ ಯುವತಿಯರೇ ಹೆಚ್ಚು ಕಾಣೆಯಾದ ಪ್ರಕರಣಗಳು ವರದಿಯಾಗಿವೆ'' ಎಂದು ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜೆ ದೇವರಾಜ್ ಹೇಳಿದ್ದಾರೆ.

Haveri; 48 Missing Cases Reported During Covid-19 Lockdown

ಯುವತಿಯರು ದೇವಸ್ಥಾನಕ್ಕೆ ಹೋಗಿ ಬರುತ್ತೇನೆ, ಸ್ವಸಹಾಯ ಸಂಘಕ್ಕೆ ಹಣ ಕಟ್ಟಿ ಬರುತ್ತೇನೆ, ಬಟ್ಟೆ ತೊಳೆಯಲು ಹೋಗುತ್ತೇನೆ, ಗೆಳೆತಿಯ ಮನೆಗೆ ಹೋಗಿ ಬರುತ್ತೇನೆ. ಬ್ಲೌಸ್ ಹೊಲಿಸಿಕೊಂಡು ಬರುತ್ತೇನೆ ಹಾಗೂ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಯುವತಿಯರು ನಾಪತ್ತೆಯಾದ ಪ್ರಕರಣ ದಾಖಲಾಗಿವೆ ಎಂದು ತಿಳಿಸಿದರು.

ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಹೆಚ್ಚು ಯುವತಿಯರ ನಾಪತ್ತೆ ಪ್ರಕರಣ ದಾಖಲಾಗಿದ್ದು, ಪ್ರೀತಿ, ಪ್ರೇಮಕ್ಕೆ ಸಂಬಂಧಿಸಿದಂತೆ ಹೆಚ್ಚು ನಾಪತ್ತೆಯಾಗಿವೆ. ಈಗಾಗಲೇ 48 ಪ್ರಕರಣಗಳಲ್ಲಿ 10 ಪ್ರಕರಣಗಳು ಪತ್ತೆಯಾಗಿದ್ದು, ಇಬ್ಬರು ಪುರುಷರು ಹಾಗೂ 8 ಜನ ಯುವತಿಯರನ್ನು ಪತ್ತೆ ಮಾಡಿದ್ದೇವೆ. ಕೊರೊನಾ ಇರುವ ಕಾರಣಕ್ಕಾಗಿ ಹೆಚ್ಚು ಪ್ರಕರಣ ಪತ್ತೆ ಮಾಡಲು ಆಗಿಲ್ಲ ಎಂದು ಎಸ್‌ಪಿ ದೇವರಾಜ್ ಹೇಳಿದ್ದಾರೆ.

Recommended Video

RohiniSindhuri ವರ್ಗಾವಣೆಯಾದರು ತಣ್ಣಗಾಗಿಲ್ಲ Prathap Simha ಕೋಪ | Oneindia Kannada

ಉಳಿದ 38 ನಾಪತ್ತೆ ಪ್ರಕರಣಗಳನ್ನು ಶೀಘ್ರದಲ್ಲೇ ತಂಡ ರಚಿಸಿ ಪತ್ತೆ ಮಾಡುವ ಕಾರ್ಯ ಮಾಡುತ್ತೇವೆ. ಕೊರೊನಾ ಎರಡನೇ ಅಲೆ ಇರುವ ಕಾರಣ ಪೊಲೀಸ್ ಸಿಬ್ಬಂದಿ ಬಿಗಿ ಭದ್ರತೆ ಹಾಗೂ ವಿವಿಧ ಕಾರ್ಯಗಳಿಗೆ ನಿಯೋಜನೆ ಮಾಡಿದ್ದೇವೆ. ಕೂಡಲೇ ಒಂದು ವಿಶೇಷ ತಂಡ ರಚನೆ ಮಾಡಿ ಉಳಿದ ಪ್ರಕರಣಗಳನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತೇವೆ ಎಂದು ಹಾವೇರಿ ಎಸ್‌ಪಿ ಕೆ.ಜಿ ದೇವರಾಜ್ ಮಾಹಿತಿ ನೀಡಿದರು.

English summary
A total of 48 missing cases cases were reported in 19 police stations in Haveri district. 8 men, 40 young women have been reported missing in the district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X