ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾನಗಲ್ ಉಪ ಚುನಾವಣೆ; ಬಿಜೆಪಿ ಬಂಡಾಯಕ್ಕೆ ಬುಧವಾರ ತೆರೆ?

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ಹಾವೇರಿ, ಅಕ್ಟೋಬರ್ 12; ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಂಡಾಯದ ಕಹಳೆ ಮೊಳಗಿಸಿರುವ ಬಿಜೆಪಿ ಮುಖಂಡ ಆರ್. ಸಿ. ಬಳ್ಳಾರಿ ನಾಮಪತ್ರ ವಾಪಸ್ ಪಡೆಯುವ ಕುರಿತು ಇನ್ನೂ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಾವಣಗೆರೆಯ ಜಿಎಂಐಟಿಯಲ್ಲಿ ಆರ್. ಸಿ. ಬಳ್ಳಾರಿ ಜೊತೆ ಮಾತುಕತೆ ನಡೆಸಿದರೂ ಸ್ಪಷ್ಟವಾಗಿ ಯಾವ ತೀರ್ಮಾನವನ್ನೂ ಹೇಳಲಿಲ್ಲ. ಬುಧವಾರ ಸಮಾಜದ ಮುಖಂಡರ ಸಭೆಯನ್ನು ಹಾನಗಲ್‌ನಲ್ಲಿ ಕರೆದಿದ್ದು, ಅಲ್ಲಿ ಸ್ಪಷ್ಟ ನಿರ್ಧಾರ ಪ್ರಕಟಿಸುವುದಾಗಿ ಹೇಳುವ ಮೂಲಕ ಕುತೂಹಲವನ್ನು ಉಳಿಸಿದ್ದಾರೆ.

Breaking; ಹಾನಗಲ್, ಸಿಂಧಗಿ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಘೊಷಣೆ Breaking; ಹಾನಗಲ್, ಸಿಂಧಗಿ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಘೊಷಣೆ

ಜಿಎಂಐಟಿಯಲ್ಲಿ ಬಸವರಾಜ ಬೊಮ್ಮಾಯಿ ಆರ್. ಸಿ. ಬಳ್ಳಾರಿ ಮನವೊಲಿಸಲು ಪ್ರಯತ್ನಿಸಿದ್ದಾರೆ. ಬಿಜೆಪಿ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ನೀವು ಕಣಕ್ಕಿಳಿದರೆ ನಮಗೆ ಕಷ್ಟವಾಗುತ್ತದೆ. ನಾನು ಮುಖ್ಯಮಂತ್ರಿಯಾದ ಬಳಿಕ ನಡೆಯುತ್ತಿರುವ ಮೊದಲ ಉಪಚುನಾವಣೆ ಆಗಿರುವುದರಿಂದ ಸಹಕರಿಸುವಂತೆ ಮನವಿ ಮಾಡಿದ್ದಾರೆ.

ಸಿಂಧಗಿ ಉಪ ಚುನಾವಣೆ ಚಿತ್ರಣ ಬದಲಿಸಿದ ಜೆಡಿಎಸ್! ಸಿಂಧಗಿ ಉಪ ಚುನಾವಣೆ ಚಿತ್ರಣ ಬದಲಿಸಿದ ಜೆಡಿಎಸ್!

ಆದರೆ ಆರ್. ಸಿ. ಬಳ್ಳಾರಿ ಈ ಬಗ್ಗೆ ಮಂಗಳವಾರ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ. ಏನಿದ್ದರೂ ಸಮಾಜದ ಮುಖಂಡರು ಹಾಗೂ ಸಮಾಜದ ಶ್ರೀಗಳ ಜೊತೆ ಚರ್ಚಿಸಿದ ಬಳಿಕವೇ ಸ್ಪರ್ಧೆಯಲ್ಲಿ ಉಳಿಯುವ ಬಗ್ಗೆ ಹೇಳುತ್ತೇನೆ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ. ನಾಮಪತ್ರಗಳನ್ನು ವಾಪಸ್ ಪಡೆಯಲು ಬುಧವಾರ ಕೊನೆಯ ದಿನವಾಗಿದೆ.

ಸಿಂಧಗಿ ಕ್ಷೇತ್ರದ ಉಪ ಚುನಾವಣೆ; ಸ್ಪಷ್ಟನೆ ಕೊಟ್ಟ ಲಕ್ಷ್ಮಣ ಸವದಿ ಸಿಂಧಗಿ ಕ್ಷೇತ್ರದ ಉಪ ಚುನಾವಣೆ; ಸ್ಪಷ್ಟನೆ ಕೊಟ್ಟ ಲಕ್ಷ್ಮಣ ಸವದಿ

ಆರ್. ಸಿ. ಬಳ್ಳಾರಿ ಹೇಳಿದ್ದೇನು?

ಆರ್. ಸಿ. ಬಳ್ಳಾರಿ ಹೇಳಿದ್ದೇನು?

"ಬಸವರಾಜ ಬೊಮ್ಮಾಯಿ ನಾನು ಹಲವು ವರ್ಷಗಳ ಸ್ನೇಹಿತರು. ನಾನು ಬಿಜೆಪಿ ಕಾರ್ಯಕರ್ತ, ಅವರು ಈಗ ಮುಖ್ಯಮಂತ್ರಿಗಳು. ಎಂಎಲ್‌ಸಿ ಆಗಿದ್ದಾಗಿನಿಂದಲೂ ಬೊಮ್ಮಾಯಿ ನನ್ನ ನಡುವೆ ಉತ್ತಮ ಬಾಂಧವ್ಯವಿದೆ. ಹೈಕಮಾಂಡ್ ಯಾಕೆ ನನ್ನನ್ನು ಪರಿಗಣಿಸಿಲ್ಲ ಎಂಬುದು ಗೊತ್ತಾಗುತ್ತಿಲ್ಲ. ಹೆಚ್ಚು ಕಡಿಮೆಯಾದರೆ ಸಿಎಂ ಗೌರವಕ್ಕೆ ಧಕ್ಕೆ ಬರುತ್ತೆ ಎಂಬ ಮಾತು ಆಡಿದ್ದಾರೆ. ಮೊದಲು ಹೋಗಿ ಸಮುದಾಯದ ಮುಖಂಡರನ್ನು ಭೇಟಿ ಮಾಡುತ್ತೇನೆ. ಮುಂದೆ ಏನು ಮಾಡಬೇಕು ಎಂಬ ಸೂಕ್ತ ನಿರ್ಧಾರಕ್ಕೆ ಬರುವುದಕ್ಕಾಗಿಯೇ ಹಾನಗಲ್ ಬುಧವಾರ ಸಭೆ ಕರೆದಿದ್ದೇನೆ. ಅಲ್ಲಿ ತೀರ್ಮಾನ ಪ್ರಕಟಿಸುತ್ತೇನೆ" ಎಂದರು ಆರ್‌. ಸಿ. ಬಳ್ಳಾರಿ ಹೇಳಿದರು.

"ಎಲ್ಲಾ ನಿರ್ಧಾರವನ್ನು ನಾನೇ ತೆಗೆದುಕೊಳ್ಳಲು ಆಗಲ್ಲ. ಸಮಾಜದ ಮುಖಂಡರು ನನ್ನ ತೀರ್ಮಾನ ಒಪ್ಪಬೇಕು. ಸ್ವಾಮೀಜಿಯವರು ಯಾವುದೇ ಕಾರಣಕ್ಕೆ ರಾಜಕೀಯ ಮಾಡಲ್ಲ. ಸಮಾಜ ನನ್ನ ಕಡೆ ಇದೆ. ಮತ್ತೆ ಮರಳಿ ಸಮಾಜಕ್ಕೆ ಹೊರಟಿದ್ದೇನೆ. ರಾಜಕೀಯ ಆಳ, ಅಗಲ ಅರಿಯಲು ನಮ್ಮಿಂದನೂ ಆಗದು, ನಿಮ್ಮಿಂದಲೂ ಆಗದು" ಎಂದು ಮಾರ್ಮಿಕವಾಗಿ ಉತ್ತರಿಸಿದರು.

ಸಚಿವ ಬಿ. ಸಿ. ಪಾಟೀಲ್ ಹೇಳಿದ್ದೇನು?

ಸಚಿವ ಬಿ. ಸಿ. ಪಾಟೀಲ್ ಹೇಳಿದ್ದೇನು?

"ಹಾನಗಲ್ ಮತ್ತು ಸಿಂಧಗಿ ಉಪಚುನಾವಣೆಯ ಬಗ್ಗೆ ಚರ್ಚಿಸಿದ್ದೇವೆ. ಅಭ್ಯರ್ಥಿಗಳ ಗೆಲುವಿಗೆ ಯಾರು ಯಾರನ್ನು ಉಸ್ತುವಾರಿಯಾಗಿ ನೇಮಕ ಮಾಡಬೇಕು. ಚುನಾವಣೆ ಹೇಗೆ ಎದುರಿಸಬೇಕು ಎಂಬ ಕುರಿತು ಮಾತನಾಡಲಾಗಿದೆ. ಇದೇ ತಿಂಗಳ 17ರಂದು ಹಾನಗಲ್ ಉಪಚುನಾವಣಾ ಪ್ರಚಾರಕ್ಕೆ ಬಸವರಾಜ ಬೊಮ್ಮಾಯಿ ಬರುತ್ತಾರೆ" ಎಂದು ಸಚಿವ ಬಿ. ಸಿ. ಪಾಟೀಲ್ ಹೇಳಿದರು.

"ಚುನಾವಣೆ ಅಂದ ಮೇಲೆ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಜಾಸ್ತಿ ಇದ್ದೇ ಇರುತ್ತದೆ. ಎಲ್ಲರಿಗೂ ಟಿಕೆಟ್ ನೀಡಲು ಆಗಲ್ಲ. ಸಿ. ಆರ್. ಬಳ್ಳಾರಿ ಜೊತೆ ಸಿಎಂ ಮಾತುಕತೆ ನಡೆಸಿದ್ದಾರೆ. ಯಾವ ತಲೆಬಿಸಿ ಇಲ್ಲ, ಆಕಾಂಕ್ಷಿಗಳ ಪಟ್ಟಿ ಹೆಚ್ಚಿದ್ದರೂ ಹೈಕಮಾಂಡ್ ತೆಗೆದುಕೊಂಡ ತೀರ್ಮಾನ ಅಂತಿಮ. ನಾವು ಗೆದ್ದೇ ಗೆಲ್ಲುತ್ತೇವೆ, ಇದರಲ್ಲಿ ಅನುಮಾನ ಬೇಡ. ಕಾಂಗ್ರೆಸ್‌ನವರು ಕೇವಲ ಪ್ರಚಾರಕ್ಕಾಗಿ ವಿನಾಕಾರಣ ಆರೋಪ ಮಾಡುತ್ತಾರೆ" ಎಂದರು.

ಸಚಿವ ಮುನಿರತ್ನ ಹೇಳಿಕೆ

ಸಚಿವ ಮುನಿರತ್ನ ಹೇಳಿಕೆ

ಸಚಿವ ಮುನಿರತ್ನ ಮಾತನಾಡಿ, "ಚುನಾವಣೆ ಗೆಲ್ಲಲು ಎಲ್ಲಾ ರೀತಿಯ ತಂತ್ರಗಾರಿಕೆ ರೂಪಿಸುತ್ತೇವೆ. ಗೆದ್ದೇ ಗೆಲ್ಲುತ್ತೇವೆ ಅದರಲ್ಲಿ ಯಾವುದೇ ಅನುಮಾನ ಬೇಡ. ಕಾಂಗ್ರೆಸ್‌ನವರ ಆರ್ಭಟಗಳು ನಡೆಯುವುದಿಲ್ಲ" ಎಂದು ಸಚಿವ ಮುನಿರತ್ನ ವಿಶ್ವಾಸ ವ್ಯಕ್ತಪಡಿಸಿದರು.

"ಒಂದೆಡೆ ಕೊರೊನಾದಿಂದ ಜನರು ಸಂಕಷ್ಟದಲ್ಲಿದ್ದಾರೆ. ಒಂದೆಡೆ ಕೊರೊನಾ ಹೊಡೆತ, ಮತ್ತೊಂದೆಡೆ ಬೆಲೆ ಏರಿಕೆ ಆಗಿದೆ. ಎಲ್ಲಾ ಸರ್ಕಾರಗಳುಅಧಿಕಾರದಲ್ಲಿದ್ದಾಗಲೂ ಬೆಲೆ ಏರಿಕೆ ಆಗಿದೆ. ಈಗಲೂ ಆಗಿದೆ ಅಷ್ಟೇ. ಚುನಾವಣೆ ಬಂದಿದೆ ಎಂದು ಕಾಂಗ್ರೆಸ್ ಬೆಲೆಏರಿಕೆ ಬಗ್ಗೆ ಮಾತನಾಡುತ್ತಿದೆ. ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ, ಬೆಲೆ ಏರಿಕೆ ಆದಾಗ ಯಾಕೆ ಮಾತನಾಡಲಿಲ್ಲ. ಈಗ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಬೆಲೆ ಏರಿಕೆ ಆಗಿಲ್ಲವೇ?" ಎಂದು ಪ್ರಶ್ನಿಸಿದರು.

Recommended Video

2-18 ವರ್ಷದ ಮಕ್ಕಳಿಗೆ ಕೊರೊನಾ ಲಸಿಕೆ:ಇದು ಎಷ್ಟು ಸೇಫ್ | Oneindia Kannada
ಮುಖ್ಯಮಂತ್ರಿಗಳೇ ತೀರ್ಮಾನ ಮಾಡುತ್ತಾರೆ

ಮುಖ್ಯಮಂತ್ರಿಗಳೇ ತೀರ್ಮಾನ ಮಾಡುತ್ತಾರೆ

ಬೆಂಗಳೂರು ಉಸ್ತುವಾರಿ ಬಗ್ಗೆ ಮಾತನಾಡಿದ ಮುನಿರತ್ನ, "ಮುಖ್ಯಮಂತ್ರಿಗಳು ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ವಹಿಸುವ ಬಗ್ಗೆ ಅವರೇ ತೀರ್ಮಾನಿಸುತ್ತಾರೆ. ಉಸ್ತುವಾರಿ ಅವರ ಬಳಿಯೇ ಇದ್ದು, ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ. ಸೋಮಣ್ಣ, ಆರ್. ಅಶೋಕ ಮುಖ್ಯಮಂತ್ರಿ ಕೈಕೆಳಗೆ ಕೆಲಸ ಮಾಡುತ್ತಿದ್ದಾರೆ. ನಾವೆಲ್ಲರೂ ಸಹ ಅವರ ಕೆಳಗಡೆಯೇ ಕೆಲಸ ಮಾಡುತ್ತಿದ್ದೇವೆ. ಅವರ ಬಳಿ ಇರುವುದಕ್ಕೆ ಅಭ್ಯಂತರ ಏನು ಇಲ್ಲ. ಸಿಎಂ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಿದ್ದೇವೆ. ಬೆಂಗಳೂರು ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಿದ್ದಾರೆ. ಮೂರನೇ ಹಂತದ ಮೆಟ್ರೋ ಕಾಮಗಾರಿಗೂ ಚಾಲನೆ ನೀಡಿದ್ದಾರೆ. ಬೆಂಗಳೂರು ಸೇರಿದಂತೆ ಎಲ್ಲಾ ಕ್ಷೇತ್ರಗಳು ಹಾಗೂ ಜಿಲ್ಲೆಗಳಿಗೆ ವಿಶೇಷವಾದ ಗಮನ ನೀಡಿದ್ದಾರೆ" ಎಂದು ಹೇಳಿದರು.

English summary
After meeting with chief minister Hanagal by elections BJP rebel candidate R. C. Ballari said that he will announce his decision on October 13, 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X