ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಪ ಚುನಾವಣೆ: "ಎರಡು ರಾಷ್ಟ್ರೀಯ ಪಕ್ಷಗಳಿಗೆ ನಿರಾಶೆ ಕಟ್ಟಿಟ್ಟಬುತ್ತಿ"

|
Google Oneindia Kannada News

ಹಾವೇರಿ, ಅ 24: "ಈ ಉಪ ಚುನಾವಣೆಯಲ್ಲಿ ಹಾನಗಲ್ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯನ್ನು ಲಘುವಾಗಿ ಪರಿಗಣಿಸುವ ಅಗತ್ಯವಿಲ್ಲ. ಒಂದು ವೇಳೆ ಅವರು ಹಾಗೇನಾದರೂ ಭಾವಿಸಿದರೆ ಫಲಿತಾಂಶದ ದಿನ ಅವರಿಗೆ ನಿರಾಶೆ ಕಟ್ಟಿಟ್ಟಬುತ್ತಿ" ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್-ಬಿಜೆಪಿ ಪಕ್ಷಗಳ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.

ಹಾನಗಲ್ ಕ್ಷೇತ್ರದಲ್ಲಿಂದು ಜೆಡಿಎಸ್ ಅಭ್ಯರ್ಥಿ ನಿಯಾಜ್ ಶೇಖ್ ಅವರ ಪರ ಪ್ರಚಾರ ಕೈಗೊಂಡ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಎಚ್ಡಿಕೆ, "20-22 ಸಾವಿರ ಕುಟುಂಬಗಳಿಗೆ ಸಾಲ ಮನ್ನಾ ಆಗಿದೆ, ಅವರ ಬೆಂಬಲ ನಮ್ಮ ಪಕ್ಷಕ್ಕಿದೆ. ರಾಷ್ಟ್ರೀಯ ಪಕ್ಷಗಳು ಅಬ್ಬರ-ಆರ್ಭಟದಿಂದ ಪ್ರಚಾರ ಕೈಗೊಂಡಿವೆ. ಆದರೆ, ನಾವು ಜನರ ನಾಡಿಮಿತ ಅರಿತು ಅವರ ಮತಕ್ಕೆ ಗೌರವ ಕೊಟ್ಟು ಪ್ರಚಾರ ಕೈಗೊಂಡಿದ್ದೇವೆ. ಜನ ಬೆಂಬಲ ನಮ್ಮ ಪಕ್ಷಕ್ಕೇ ಇದೆ" ಎಂದು ಕುಮಾರಸ್ವಾಮಿ ವಿಶ್ವಾಸದ ಮಾತನ್ನಾಡಿದ್ದಾರೆ.

ನಿಖಿಲ್-ಹರೀಶ್ ಗೌಡ ಭೇಟಿ: ಜಿ.ಟಿ.ದೇವೇಗೌಡ ಸುತ್ತ ಮತ್ತೆ ಗುಸುಗುಸು ಸುದ್ದಿನಿಖಿಲ್-ಹರೀಶ್ ಗೌಡ ಭೇಟಿ: ಜಿ.ಟಿ.ದೇವೇಗೌಡ ಸುತ್ತ ಮತ್ತೆ ಗುಸುಗುಸು ಸುದ್ದಿ

"ಪಟ್ಟಣವೂ ಸೇರಿದಂತೆ ಹಾನಗಲ್ ಗ್ರಾಮೀಣ ಪ್ರದೇಶದಿಂದ ಭಾರೀ ಪ್ರಮಾಣದ ಜನರು ಇಂದಿನ ಬಹಿರಂಗ ಸಭೆಗೆ ಬಂದಿದ್ದಾರೆ. ಅನೇಕರು ನನಗೆ ಸಾಲ ಮನ್ನಾ ಆಗಿರುವ ಚೀಟಿಗಳನ್ನು ತಂದು ತೋರಿಸಿದರು. ನಿಮ್ಮಿಂದ ಋಣಮುಕ್ತರಾದೆವು ಎಂದು ನನ್ನ ಮುಂದೆ ಸಂತೋಷ ವ್ಯಕ್ತಪಡಿಸಿದರು. ಇದಕ್ಕಿಂತ ಧನ್ಯತೆಯ ಕ್ಷಣ ಬೇರಾವುದಿದೆ" ಎಂದು ಎಚ್ಡಿಕೆ ಸಂತೋಷ ಪಟ್ಟರು.

 ''ನಳಿನ್ ಕುಮಾರ್ ಕಟೀಲಿಗೆ ಸೀರೆ ಉಡಿಸಿದರೆ ಹೆಣ್ಣೂ ಅಲ್ಲಾ ಗಂಡೂ ಅಲ್ಲಾ..'' ''ನಳಿನ್ ಕುಮಾರ್ ಕಟೀಲಿಗೆ ಸೀರೆ ಉಡಿಸಿದರೆ ಹೆಣ್ಣೂ ಅಲ್ಲಾ ಗಂಡೂ ಅಲ್ಲಾ..''

ಆ ಕುಟುಂಬಗಳ ಇಬ್ಬಿಬ್ಬರು ಅಥವಾ ಮೂವರು ಸದಸ್ಯರು ನಮ್ಮ ಪಕ್ಷಕ್ಕೆ ಆಶೀರ್ವಾದ ಮಾಡಿದರೆ 70 ಸಾವಿರ ಮತ ಆಗುತ್ತದೆ. ಅವರೆಲ್ಲರ ನಮ್ಮ ಪಕ್ಷದ ಮೇಲಿದೆ. ನಾವೇ ಗೆಲ್ಲುತ್ತೇವೆ. ಈ ಭಾಗದ ಗ್ರಾಮೀಣ ಪ್ರದೇಶದ ರೈತರು ಪ್ರೀತಿ ವಿಶ್ವಾಸದಿಂದ ಜೆಡಿಎಸ್ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ. ಅವರಾಗಿಯೇ ಬಂದು ನನ್ನಲ್ಲಿ, ʼಅಣ್ಣ.. ನಿಮ್ಮಿಂದ ನಮ್ಮ ಎರಡು ಲಕ್ಷ, ಒಂದು ಲಕ್ಷ ರೂಪಾಯಿ ಸಾಲ ಮನ್ನಾ ಆಯಿತು. ಈಗ ನೆಮ್ಮದಿಯಾಗಿದ್ದೇವೆ ಎಂದು ಚೀಟಿ ತೋರಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

 ಜೆಡಿಎಸ್ ಸರಕಾರ ಇದ್ದಾಗ ಎಂಥ ಜನಪರ ಕಾರ್ಯಕ್ರಮಗಳು ನೀಡಲಾಗಿದೆ

ಜೆಡಿಎಸ್ ಸರಕಾರ ಇದ್ದಾಗ ಎಂಥ ಜನಪರ ಕಾರ್ಯಕ್ರಮಗಳು ನೀಡಲಾಗಿದೆ

"ಜನರು ಕಾಂಗ್ರೆಸ್ ಮತ್ತು ಬಿಜೆಪಿ ಸರಕಾರಗಳನ್ನು ನೋಡಿದ್ದಾರೆ. ಐದೈದು ವರ್ಷದ ಸರಕಾರಗಳನ್ನು, ಈಗ ಕಳೆದ ಎರಡು ವರ್ಷಗಳ ಬಿಜೆಪಿ ಸರಕಾರವನ್ನೂ ನೋಡಿದ್ದಾರೆ. ಜನರು ಎಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆಂಬುದು ಎಲ್ಲರಿಗೂ ಗೊತ್ತಿದೆ. ಅವರೆಲ್ಲರಿಗೂ ಜೆಡಿಎಸ್ ಸರಕಾರ ಇದ್ದಾಗ ಎಂಥ ಜನಪರ ಕಾರ್ಯಕ್ರಮಗಳು ನೀಡಲಾಗಿದೆ, ನಮಗೆಷ್ಟು ಒಳ್ಳೆಯದಾಗಿದೆ ಎಂದು ಚರ್ಚೆ ಮಾಡುತ್ತಿದ್ದಾರೆ" ಎಂದು ಕುಮಾರಸ್ವಾಮಿ ಹಾನಗಲ್ ನಲ್ಲಿ ಹೇಳಿದರು.

 ರಾಷ್ಟ್ರೀಯ ಪಕ್ಷಗಳು ಗೋಣಿ ಚೀಲಗಳಲ್ಲಿ ಹಣ ತಂದು ಹಂಚುತ್ತಿದ್ದಾರೆ

ರಾಷ್ಟ್ರೀಯ ಪಕ್ಷಗಳು ಗೋಣಿ ಚೀಲಗಳಲ್ಲಿ ಹಣ ತಂದು ಹಂಚುತ್ತಿದ್ದಾರೆ

ರಾಷ್ಟ್ರೀಯ ಪಕ್ಷಗಳು ಗೋಣಿ ಚೀಲಗಳಲ್ಲಿ ಹಣ ತಂದು ಹಂಚುತ್ತಿದ್ದಾರೆ ಎಂದು ವರದಿಗಾರರು ಕೇಳಿದಾಗ; "ಹಣದ ಚೀಲಗಳ ಬಗ್ಗೆ ನಾನು ಚರ್ಚೆ ಮಾಡಲು ಹೋಗುವುದಿಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಅಧಿಕಾರ ನಡೆಸಬೇಕಾದರೆ ಆ ಚೀಲಗಳನ್ನು ಹೇಗೆ ತರಬೇಕು ಎಂಬ ಬಗ್ಗೆ ಒಳ್ಳೆಯ ಅನುಭವ ಇದೆ. ಹಾಗಾಗಿ ಅವರು ಚೀಲದ ಬಗ್ಗೆ ಮಾತನಾಡುತ್ತಾರೆ" ಎಂದು ಅವರು ಪರೋಕ್ಷವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಟಾಂಗ್ ಕೊಟ್ಟರು.

 ಕಾಂಗ್ರೆಸ್ ಪಕ್ಷ ಮುಸ್ಲಿಮರನ್ನು ತನ್ನ ವೋಟ್ ಬ್ಯಾಂಕ್ ಆಗಿ ಮಾಡಿಕೊಂಡಿತ್ತು

ಕಾಂಗ್ರೆಸ್ ಪಕ್ಷ ಮುಸ್ಲಿಮರನ್ನು ತನ್ನ ವೋಟ್ ಬ್ಯಾಂಕ್ ಆಗಿ ಮಾಡಿಕೊಂಡಿತ್ತು

"ಕಳೆದ ಎಪ್ಪತ್ತೈದು ವರ್ಷಗಳಿಂದ ಕಾಂಗ್ರೆಸ್ ಪಕ್ಷ ಮುಸ್ಲಿಮರನ್ನು ತನ್ನ ವೋಟ್ ಬ್ಯಾಂಕ್ ಆಗಿ ಮಾಡಿಕೊಂಡಿತ್ತು. ಈಗಲೂ ಅದೇ ಚಾಳಿ ಮುಂದುವರಿಸಿದೆ. ಮುಸ್ಲಿಮರು ವೋಟ್ ಬ್ಯಾಂಕ್ ಅಲ್ಲ, ನಮ್ಮ ರೀತಿಯಲ್ಲೇ ಮನುಷ್ಯುರು ಅನ್ನುವುದನ್ನು ಕಾಂಗ್ರೆಸ್ ಪಕ್ಷದ ನಾಯಕರು ಅರಿತು ಅವರ ಹೃದಯದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಅಭಿವೃದ್ಧಿ ಎಂದರೆ ಯಾವುದು ಎಂದು ಸಿದ್ದರಾಮಯ್ಯ, ಸಿಎಂ ಬೊಮ್ಮಾಯಿ ಅವರನ್ನು ಎಚ್ಡಿಕೆ ಪ್ರಶ್ನಿಸಿದರು.

 ಐದು ವರ್ಷ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಹೃದಯ ಕರಗಲಿಲ್ಲ

ಐದು ವರ್ಷ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಹೃದಯ ಕರಗಲಿಲ್ಲ

"ನಾನು ರೈತರಿಗಾಗಿ ಹಗಲಿರುಳು ಶ್ರಮಿಸಿದೆನೇ ಹೊರತು ಅವರ ವಿಷಯದಲ್ಲಿ ರಾಜಕೀಯ ಮಾಡಲಿಲ್ಲ. 2017ರಲ್ಲಿ ರಾಜ್ಯದಲ್ಲಿ ಸುಮಾರು 3,500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡರು. ಆಗ ಐದು ವರ್ಷ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಹೃದಯ ಕರಗಲಿಲ್ಲ. ರೈತರ ಸಾಲ ಮನ್ನಾ ಮಾಡಿ ಎಂದರೆ ಪ್ರಧಾನಿ ನರೇಂದ್ರ ಮೋದಿ ಅವರ ಕಡೆ ಬೆರಳು ತೋರಿಸುತ್ತಿದ್ದರು. ಮೋದಿ ಅವರು ರಾಷ್ಟ್ರೀಯ ಬ್ಯಾಂಕುಗಳ ಸಾಲ ಮನ್ನಾ ಮಾಡಲಿ, ನಂತರ ನಾನು ಸಹಕಾರಿ ಬ್ಯಾಂಕುಗಳ ಸಾಲ ಮನ್ನಾ ಮಾಡುತ್ತೇನೆ ಎಂದು ಹಠಕ್ಕೆ ಕೂತರು" ಎಂದು ಕುಮಾರಸ್ವಾಮಿಯವರು ಸಿದ್ದರಾಮಯ್ಯನವರನ್ನು ದೂಷಿಸಿದರು.

English summary
Former CM H D Kumaraswamy Very Confident To Win Karnataka By Elections. Know More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X